ಕಪಾಳಮೋಕ್ಷಕ್ಕೆ ಪ್ರತೀಕಾರ: ದಕ್ಷಿಣ ದೆಹಲಿಯಲ್ಲಿ ವ್ಯಕ್ತಿಯನ್ನು ಕೊಂದ ಯುವಕರು
ದಕ್ಷಿಣ ದೆಹಲಿಯ ಸೆಂಟ್ರಲ್ ಮಾರ್ಕೆಟ್‌ನಲ್ಲಿ ವ್ಯಕ್ತಿಯೊಬ್ಬನನ್ನು ಇರಿದು ಕೊಂದ ಆರೋಪದ ಮೇಲೆ ಇಬ್ಬರು ಬಾಲಾಪರಾಧಿಗಳನ್ನು ಕಸ್ಟಡಿಗೆ ತೆಗೆದುಕೊಳ್ಳಲಾಗಿದೆ ಎಂದು ಪೊಲೀಸರು ಬುಧವಾರ ತಿಳಿಸಿದ್ದಾರೆ
ನವದೆಹಲಿ (ಜೂ. 09): ದಕ್ಷಿಣ ದೆಹಲಿಯ ಸೆಂಟ್ರಲ್ ಮಾರ್ಕೆಟ್‌ನಲ್ಲಿ ವ್ಯಕ್ತಿಯೊಬ್ಬನನ್ನು ಇರಿದು ಕೊಂದ ಆರೋಪದ ಮೇಲೆ ಇಬ್ಬರು ಬಾಲಾಪರಾಧಿಗಳನ್ನು ಕಸ್ಟಡಿಗೆ ತೆಗೆದುಕೊಳ್ಳಲಾಗಿದೆ ಎಂದು ಪೊಲೀಸರು ಬುಧವಾರ ತಿಳಿಸಿದ್ದಾರೆ. ಮೃತರನ್ನು ಡಿಯೋಲಿ ನಿವಾಸಿ 27 ವರ್ಷದ ಮನೀಶ್ ಎಂದು ಗುರುತಿಸಲಾಗಿದೆ. ಅವರು ಸೆಂಟ್ರಲ್ ಮಾರ್ಕೆಟ್‌ನಲ್ಲಿರುವ ಪಾದರಕ್ಷೆಯ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದರು. ಮಂಗಳವಾರ ರಾತ್ರಿ ಈ ಘಟನೆ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಪೊಲೀಸರ ಪ್ರಕಾರ, ಒಂದು ತಿಂಗಳ ಹಿಂದೆ, ಇಬ್ಬರು ಅಪ್ರಾಪ್ತ ಬಾಲಕರಲ್ಲಿ ಒಬ್ಬನಿಗೆ ಮನೀಶ್ ಕಪಾಳಮೋಕ್ಷ ಮಾಡಿದ್ದಾನೆ. ಸೇಡು ತೀರಿಸಿಕೊಳ್ಳಲು ಅಪ್ರಾಪ್ತ ಇನ್ನಿಬ್ಬರು ಅಪ್ರಾಪ್ತರೊಂದಿಗೆ ಮನೀಶ್ ಕೆಲಸ ಮಾಡುತ್ತಿದ್ದ ಮಾರುಕಟ್ಟೆಗೆ ತೆರಳಿ ಚಾಕುವಿನಿಂದ ಹಲ್ಲೆ ನಡೆಸಿದ್ದಾನೆ. ಆದರೆ ಮೂರನೇ ಅಪ್ರಾಪ್ತ ಬಾಲಕ ಮನೀಶ್ ಮೇಲೆ ಹಲ್ಲೆ ನಡೆಸಿದಾಗ ಸ್ಥಳದಿಂದ ದೂರ ಉಳಿದಿದ್ದಾನೆ ಎಂದು ಅವರು ತಿಳಿಸಿದ್ದಾರೆ.
ಅಂಬೇಡ್ಕರ್ ನಗರ ಪೊಲೀಸ್ ಠಾಣೆಗೆ ರಾತ್ರಿ 9.47ಕ್ಕೆ ಚೂರಿ ಇರಿತದ ಕುರಿತು ಕರೆ ಬಂದಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಮನೀಶ್‌ನನ್ನು ಸಾಕೇತ್‌ನ ಮ್ಯಾಕ್ಸ್ ಆಸ್ಪತ್ರೆಗೆ ಕರೆದೊಯ್ಯಲಾಗಿದು, ಅಲ್ಲಿ ಅವನು ಪ್ರಾಣ ಬಿಟ್ಟಿದ್ದಾನೆ ಎಂದು ಘೋಷಿಸಲಾಯಿತು ಎಂದು ಅವರು ತಿಳಿಸಿದ್ದಾರೆ.
"ನಾವು ಸೆಂಟ್ರಲ್ ಮಾರ್ಕೆಟ್ ಬಳಿಯ ಪಂಜಾಬಿ ಪಾರ್ಕ್‌ನಿಂದ ಇಬ್ಬರು ಬಾಲಾಪರಾಧಿಗಳನ್ನು ಬಂಧಿಸಿದ್ದೇವೆ. ಇಬ್ಬರು ಅಪ್ರಾಪ್ತರು ಮದಂಗಿರ್ ನಿವಾಸಿಗಳು ಮತ್ತು 17 ವರ್ಷ ವಯಸ್ಸಿನವರಾಗಿದ್ದಾರೆ" ಎಂದು ಅಧಿಕಾರಿ ಹೇಳಿದ್ದಾರೆ.
ವಿಚಾರಣೆಯ ಸಮಯದಲ್ಲಿ, ಬಾಲಾಪರಾಧಿಗಳಲ್ಲಿ ಒಬ್ಬ ಮನೀಶ್ ಮತ್ತು ಅವನ ಸ್ನೇಹಿತ ಜಗಳದ ಸಮಯದಲ್ಲಿ ತನಗೆ ಕಪಾಳಮೋಕ್ಷ ಮಾಡಿದರು, ಆದ್ದರಿಂದ ಅವರು ಸೇಡು ತೀರಿಸಿಕೊಳ್ಳಲು ಬಯಸಿದ್ದರು ಎಂದು ಹೇಳಿದ್ದಾನೆ. ಭಾರತೀಯ ದಂಡ ಸಂಹಿತೆ ಮತ್ತು ಶಸ್ತ್ರಾಸ್ತ್ರ ಕಾಯ್ದೆಯ ಸೆಕ್ಷನ್ 302 (ಕೊಲೆ), 34 (ಸಾಮಾನ್ಯ ಉದ್ದೇಶ) ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ, ಹೆಚ್ಚಿನ ತನಿಖೆ ನಡೆಯುತ್ತಿದೆ.
ಇದನ್ನೂ ಓದಿ: ಅಪ್ರಾಪ್ತ ಬಾಲಕಿ ಮೇಲೆ ಅತ್ಯಾಚಾರ: ಇಬ್ಬರು ಆರೋಪಿಗಳನ್ನು ಥಳಿಸಿ, ಬೆಂಕಿ ಇಟ್ಟ ಗ್ರಾಮಸ್ಥರು
ಇದನ್ನೂ ಓದಿ: ಎಲೆಕ್ಷನ್ನಲ್ಲಿ ಸೋತ ಸಹೋದರ- ತಾಯಿ: ಗೆದ್ದವನ ಕೊಲೆಗೆ ಸುಪಾರಿ ಕೊಟ್ಟ ಪೊಲೀಸಪ್ಪ..!