ಜಾರ್ಖಂಡ್: ಅಪ್ರಾಪ್ತ ಬಾಲಕಿ ಮೇಲೆ ಅತ್ಯಾಚಾರ: ಇಬ್ಬರು ಆರೋಪಿಗಳನ್ನು ಥಳಿಸಿ, ಬೆಂಕಿ ಇಟ್ಟ ಗ್ರಾಮಸ್ಥರು
ಜಾರ್ಖಂಡ್‌ನ ಗುಮ್ಲಾದಲ್ಲಿ ಅಪ್ರಾಪ್ತ ವಯಸ್ಕಳ ಮೇಲೆ ಅತ್ಯಾಚಾರ ನಡೆದ ಆರೋಪದ ಬಳಿಕ, ಆಕ್ರೋಶಗೊಂಡ ಸ್ಥಳೀಯರು ಇಬ್ಬರು ಆರೋಪಿಗಳನ್ನು ಥಳಿಸಿ ಜೀವಂತ ಸುಟ್ಟು ಹಾಕಿದ್ದಾರೆ.
ಜಾರ್ಖಂಡ್ (ಜೂ. 09): ಜಾರ್ಖಂಡ್‌ನ ಗುಮ್ಲಾ ಜಿಲ್ಲೆಯಲ್ಲಿ ಅಪ್ರಾಪ್ತ ವಯಸ್ಸಿನ ಬಾಲಕಿ ಮೇಲೆ ಇಬ್ಬರು ವ್ಯಕ್ತಿಗಳು ಅತ್ಯಾಚಾರವೆಸಗಿದ ಆರೋಪದ ಬಳಿಕ, ಕೋಪಗೊಂಡ ಸ್ಥಳೀಯರು ಆರೋಪಿಗಳನ್ನು ಸುಟ್ಟು ಹಾಕಿದ್ದಾರೆ. ಆರೋಪಿಗಳನ್ನು ಸಂತ್ರಸ್ತೆಯ ಕುಟುಂಬದವರು ಮೊದಲು ಅಮಾನುಷವಾಗಿ ಥಳಿಸಿದ್ದರು, ನಂತರ ಅವರನ್ನು ಜೀವಂತವಾಗಿ ಸುಡಲು ಸೀಮೆಎಣ್ಣೆ ಎರಚಲಾಗಿದೆ. ಓರ್ವ ವ್ಯಕ್ತಿ ಸಾವನ್ನಪ್ಪಿದ್ದು, ಮತ್ತೋರ್ವ ಗಂಭೀರವಾಗಿ ಗಾಯಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ.
ಅಪ್ರಾಪ್ತ ಬಾಲಕಿ ತನ್ನ ಕುಟುಂಬ ಸಮೇತ ಪಕ್ಕದ ಗ್ರಾಮದಿಂದ ಮದುವೆ ಸಮಾರಂಭಕ್ಕೆ ತೆರಳಿ ವಾಪಸ್ಸಾಗುತ್ತಿದ್ದಾಗ ಈ ಘಟನೆ ನಡೆದಿದೆ. ಬಸ್ಸುಗಳು ಲಭ್ಯವಿಲ್ಲದ ಕಾರಣ, ಆಕೆಯ ತಂದೆ ಬೈಕ್‌ನಲ್ಲಿ ಬಂದ ಇಬ್ಬರು ಆರೋಪಿಗಳನ್ನು ಮನೆಗೆ ಬಿಡುವಂತೆ ಕೇಳಿದರು. ಅವರೆಲ್ಲರೂ ಒಂದೇ ಗ್ರಾಮದವರು ಎಂದು ತಂದೆ ವಿಶ್ವಾಸವಿಟ್ಟು ಮಗಳನ್ನು ಕಳಿಸಿದ್ದರು.
ಆದರೆ, ಹಿಂತಿರುಗುವಾಗ, ಇಬ್ಬರು ಆರೋಪಿಗಳು ಅಪ್ರಾಪ್ತಳನ್ನು ಮನೆಗೆ ಬಿಡುವ ಮೊದಲು ಅತ್ಯಾಚಾರ ಎಸಗಿದ್ದಾರೆ. ಅವಳು ತನ್ನ ಕುಟುಂಬಕ್ಕೆ ಘಟನೆಗಳನ್ನು ಬಹಿರಂಗಪಡಿಸಿದಾಗ, ಅವರು ಇಬ್ಬರಿಗೆ ಪಾಠ ಕಲಿಸಲು ಕುಟುಂಬಸ್ಥರು ಮುಂದಾಗಿದ್ದರಯ. ಇಬ್ಬರು ಆರೋಪಿಗಳಿಗೆ ಕುಟುಂಬಸ್ಥರು ಥಳಿಸಿ ನಂತರ ಸೀಮೆಎಣ್ಣೆ ಸುರಿದು ಬೆಂಕಿ ಹಚ್ಚಿದ್ದಾರೆ. ಆರೋಪಿಗಳಲ್ಲಿ ಒಬ್ಬ ಮೃತಪಟ್ಟರೆ ಮತ್ತೊಬ್ಬನನ್ನು ರಾಂಚಿಯ ರಾಜೇಂದ್ರ ವೈದ್ಯಕೀಯ ವಿಜ್ಞಾನ ಸಂಸ್ಥೆ (RIMS)ಗೆ ದಾಖಲಿಸಲಾಗಿದೆ.
ಇದನ್ನೂ ಓದಿ: ಚಿಕನ್ ಮಾಡಿಲ್ಲ ಎಂಬ ಕ್ಷುಲ್ಲಕ ಕಾರಣಕ್ಕೆ ಪತ್ನಿಯನ್ನು ಕೊಂದ ಕಿರಾತಕ ಪತಿ
ಇದನ್ನೂ ಓದಿ: ಬಾರ್ ಮುಂದೆ ಗಲಾಟೆ: ಅಣ್ಣನಿಂದಲೇ ತಮ್ಮನ ಹತ್ಯೆ!