Asianet Suvarna News Asianet Suvarna News

ಕೊನೆಗೂ ಭೂಗತ ಪಾತಕಿ ರವಿ ಪೂಜಾರಿ ಬೆಂಗಳೂರಿಗೆ; ಇನ್ ಸೈಡ್ ಸ್ಟೋರಿ

ಭೂಗತ ಪಾತಕಿ ರವಿ ಪೂಜಾರಿ ಬೆಂಗಳೂರಿಗೆ/ ಮಧ್ಯರಾತ್ರಿ ವೇಳೆಗೆ ವಿದೇಶದಿಂದ ಕರೆತರಲಿರುವ ಪೊಲೀಸರು/ ಹಲವು ಪ್ರಕರಣದಲ್ಲಿ ಕರ್ನಾಟಕದ ಪೊಲೀಸರಿಗೆ ಬೇಕಾಗಿರುವ ಪೂಜಾರಿ

ravi-pujari-will-handover-to-karnataka Police-soon
Author
Bengaluru, First Published Feb 23, 2020, 11:07 PM IST

ಬೆಂಗಳೂರು(ಫೆ. 23)   ಬೆಂಗಳೂರಿಗೆ  ಭೂಗತ ಪಾತಕಿ ರವಿ ಪೂಜಾರಿಯನ್ನು ಪೊಲೀಸರು ಭಾನುವಾರ ತಡರಾತ್ರಿ ಕರೆತರಲಿದ್ದಾರೆ.  ಪ್ಯಾರಿಸ್ ನಿಂದ ಬೆಂಗಳೂರಿಗೆ ವಿಮಾನದ ಮೂಲಕ ಕರೆತರಲಾಗುತ್ತಿದೆ.

ರಾತ್ರಿ 12.10 ಕ್ಕೆ ಕೆಐಎಎಲ್ ಗೆ ಆಗಮಿಸಲಿರುವ ಗ್ಯಾಂಗ್ ಸ್ಟರ್ ನನ್ನು ಎಡಿಜಿಪಿ ಅಮರ್ ಕುಮಾರ್ ಪಾಂಡೆ ನೇತೃತ್ವದ ತಂಡ ಕರೆದುಕೊಂಡು ಬರುತ್ತಿದೆ. ಸಿಸಿಬಿ ಜಂಟಿ ಪೊಲೀಸ್ ಆಯುಕ್ತ ಸಂದೀಪ್ ಪಾಟೀಲ್ ಮುಂದಾಳತ್ವ ವಹಿಸಿಕೊಂಡಿದ್ದಾರೆ.

ಭೂಗತ ಪಾತಕಿ ಪೂಜಾರಿ ಏರ್ ಫ್ರಾನ್ಸ್ ಏರ್ ಲೈನ್ಸ್ AF 194 ವಿಮಾನದಲ್ಲಿ ಆಗಮಿಸಲಿದ್ದು ಬಿಗಿ ಭದ್ರತೆ ನೀಡಲಾಗಿದೆ. ಏರ್ಪೋರ್ಟ್ ನಿಂದ ಮಡಿವಾಳ ಎಫ್ ಎಸ್ ಎಲ್ ಕಚೇರಿಗೆ ಪೂಜಾರಿ ಕರೆದುಕೊಂಡು ಹೋಗಲಾಗುತ್ತದೆ.

ಹೆಸರು ಬದಲಾಯಿಸಿಕೊಂಡ್ರೆ ಬಿಟ್ಟುಬಿಡ್ತೇವಾ; ರವಿ ಪೂಜಾರಿ ಅಸಲಿ ಸ್ಟೋರಿ

ಕರ್ನಾಟಕ ಸೇರಿದಂತೆ ದೇಶದ ವಿವಿಧ ಭಾಗಗಳಲ್ಲಿ ಸುಲಿಗೆ,  ಕೊಲೆ ಸೇರಿದಂತೆ ಹಲವು ಪ್ರಕರಣಗಳಲ್ಲಿ ಬೇಕಾಗಿರುವ 15 ವರ್ಷಗಳಿಂದ  ವಿದೇಶಕ್ಕೆ ಹೋಗಿ ತಲೆಮರೆಸಿಕೊಂಡಿದ್ದ ರವಿ ಪೂಜಾರಿಯನ್ನು ಸೆನೆಗಲ್‌ಗೆ ಗಡೀಪಾರು ಮಾಡಿತ್ತು.

ಭೂಗತ ಪಾತಕಿ ರವಿ ಪೂಜಾರಿ ಕಳೆದ ವರ್ಷ ಸೆನೆಗಲ್‌ನಲ್ಲಿ ಬಂಧನಕ್ಕೊಳಗಾಗಿ ಜಾಮೀನು ಪಡೆದಿದ್ದ. ಪ್ರಾರಂಭದಲ್ಲಿ ಭೂಗತ ಪಾತಕಿ ಛೋಟಾ ರಾಜನ್ ಜತೆ ಸಂಬಂಧ ಹೊಂದಿದ್ದ ಪೂಜಾರಿ ಬಳಿಕ ದಾವೂದ್ ಇಬ್ರಾಹಿಂ ಜತೆಗೆ ಸಹ ಕೆಲಸ ಮಾಡಿದ್ದ ಎಂಬ ಮಾಹಿತಿ ಇದೆ.

 

Follow Us:
Download App:
  • android
  • ios