Sexual Harassment: ಕನ್ನಡ ಚಿತ್ರರಂಗದ ಖ್ಯಾತ ನಟಿಯ ಸಹೋದರನ ವಿರುದ್ಧ ರೇಪ್ ಕೇಸ್ ದಾಖಲು
* ಮದುವೆಯಾಗುವುದಾಗಿ ನಂಬಿಸಿ ಕೀರ್ತಿಚಂದ್ರ ಪರಾರಿ
* ಮಹಿಳಾ ಪೊಲೀಸ್ ಠಾಣೆಯಲ್ಲಿ ಅತ್ಯಾಚಾರ ಪ್ರಕರಣ ದಾಖಲು
* ನಟಿ ಸಹೋದರ ಕೀರ್ತಿ ಚಂದ್ರ ಮೇಲೆ ಆರೋಪ
ಬೆಂಗಳೂರು(ಮಾ.17): ಮದುವೆ ಆಗುವುದಾಗಿ ನಂಬಿಸಿ ಲೈಂಗಿಕವಾಗಿ ಬಳಸಿಕೊಂಡು ಯುವತಿಗೆ ವಂಚಿಸಿದ ಆರೋಪದ ಮೇರೆಗೆ ಕನ್ನಡ ಚಿತ್ರರಂಗದ(Sandalwood) ಖ್ಯಾತ ನಟಿಯೊಬ್ಬರ(Actress) ಸಹೋದರನ ವಿರುದ್ಧ ಬಸವನಗುಡಿ ಮಹಿಳಾ ಪೊಲೀಸ್ ಠಾಣೆಯಲ್ಲಿ ಅತ್ಯಾಚಾರ(Rape) ಪ್ರಕರಣ ದಾಖಲಾಗಿದೆ.
30 ವರ್ಷ ವಯಸ್ಸಿನ ಖಾಸಗಿ ಕಂಪನಿ ಉದ್ಯೋಗಿ ಮೋಸ ಹೋಗಿದ್ದು, ಬನಶಂಕರಿ ಮೂರನೇ ಹಂತದಲ್ಲಿ ನೆಲೆಸಿರುವ ನಟಿ ಸಹೋದರ ಕೀರ್ತಿ ಚಂದ್ರ ಮೇಲೆ ಆರೋಪ ಬಂದಿದೆ. ಈ ಪ್ರಕರಣದ ದಾಖಲಾದ ಬಳಿಕ ತಪ್ಪಿಸಿಕೊಂಡಿರುವ ಆರೋಪಿ(Accused) ಪತ್ತೆಗೆ ತನಿಖೆ ನಡೆದಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.
Sexual Harassment : ಮಹಿಳಾ ಪೇದೆ ಮೇಲೆ ನಿರಂತರ ಅತ್ಯಾಚಾರ, ಗರ್ಭಪಾತ... ನಾಪತ್ತೆಯಾದ ಪೊಲೀಸಪ್ಪ!
ಕಳೆದ 2021ರಲ್ಲಿ ನನಗೆ ಮ್ಯಾಟ್ರಿಮೋನಿಯಲ್(Matrimonial) ಶಾದಿ ಡಾಟ್ ಕಾಮ್‌ನಲ್ಲಿ ಕೀರ್ತಿ ಚಂದ್ರ ಅಲಿಯಾಸ್ ವಿರಾಜ್ ಪರಿಚಯವಾಯಿತು. ಆಗ ತಾನು ಪ್ರತಿಷ್ಠಿತ ಖಾಸಗಿ ಕಂಪನಿಯಲ್ಲಿ ಉನ್ನತ ಹುದ್ದೆಯಲ್ಲಿದ್ದೇನೆ. ತನ್ನ ತಂಗಿ ಪ್ರಸಿದ್ಧ ಚಲನಚಿತ್ರ ನಟಿ ಎಂದು ಆತ ಹೇಳಿಕೊಂಡಿದ್ದ. ನಂತರ ನನ್ನನ್ನು ಮದುವೆಯಾಗುವುದಾಗಿ(Marriage) ಹೇಳಿ ಮನೆಗೆ ಕರೆದುಕೊಂಡು ಹೋಗಿ ತಂಗಿ ಮತ್ತು ತಾಯಿಗೆ ಪರಿಚಯಿಸಿದ. ನಮ್ಮ ಮದುವೆಗೆ ಎರಡು ಕುಟುಂಬಗಳು ಒಪ್ಪಿಗೆ ಸೂಚಿಸಿದ್ದವು. ನಂತರ ಈ ವರ್ಷದ ಜನವರಿಯಲ್ಲಿ ಹೋಟೆಲ್‌ಗೆ ಕರೆಸಿಕೊಂಡು ದೈಹಿಕ ಸಂಪರ್ಕಕ್ಕೆ ಯತ್ನಿಸಿದ. ಆಗ ನಿರಾಕರಿಸಿದ್ದೆ. ನಂತರ ಮದುವೆ ಆಗುವುದಾಗಿ ನಂಬಿಸಿ ಲೈಂಗಿಕವಾಗಿ(Sexually) ಬಳಸಿಕೊಂಡು ವಂಚಿಸಿದ್ದಾನೆ ಎಂದು ಸಂತ್ರಸ್ತೆ ಆರೋಪಿಸಿದ್ದಾರೆ.
ಈ ದೂರಿನ ಮೇರೆಗೆ ಅತ್ಯಾಚಾರ ಹಾಗೂ ಜೀವ ಬೆದರಿಕೆ(Life Threatening) ಆರೋಪದಡಿ ನಟಿ ಸಹೋದರನ ವಿರುದ್ಧ ಎಫ್‌ಐಆರ್(FIR) ದಾಖಲಿಸಿಕೊಂಡು ಬಸವನಗುಡಿ ಮಹಿಳಾ ಠಾಣೆ ಪೊಲೀಸರು(Police) ತನಿಖೆ ನಡೆಸಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಯುವತಿ ಬಾಳಲ್ಲಿ ಆಟ ಆಡಿದ ಕಾಮುಕ ತುಮಕೂರು ಮಾಜಿ ಕಾರ್ಫೊರೇಟರ್
ತುಮಕೂರು: ಮಗಳು ಸಾವನ್ನಪ್ಪಿ (Death) ಒಂದು ವಾರಗಳೇ ಕಳೆದಿತ್ತು .ಮಗಳ ಸಾವು ಸಹಜ ಸಾವು ಅಂದುಕೊಂಡಿದ್ದ ತಾಯಿಗೆ ಮಗಳ ಮೊಬೈಲ್ (Mobile) ಕೊಟ್ಟ ಸುಳಿವು ಒಂದು ಕ್ಷಣ ಆಕೆಯನ್ನ ಬೆಚ್ಚಿಬಿಳಿಸಿತ್ತು. ಪೊಲೀಸರ (Karnataka Police) ತನಿಖೆಯಲ್ಲಿ ಮಗಳ ಸಾವಿನ ರಹಸ್ಯ ಬಯಲಾಗಿತ್ತು. ಇದೆಲ್ಲದ ಪರಿಣಾಮ ಮಾಜಿ ಕಾರ್ಪೊರೇಟರ್ ಬಂಧನವಾಗಿದೆ.
ಈ ಮಹಾನುಭವನ ಹೆಸರು ರಾಜೇಂದ್ರಕುಮಾರ್ ತುಮಕೂರಿನ ಮಾಜಿ ಕಾರ್ಪೊರೇಟರ್... 18 ವರ್ಷದ ಯುವತಿಯನ್ನ ಅತ್ಯಾಚಾರ ಎಸಗಿ ಕೊಲೆ ಮಾಡಿರೋ ಆರೋಪದಡಿ ತುಮಕೂರು ಟೌನ್ ಪೊಲೀಸರು ಬಂಧಿಸಿ ಜೈಲಿಗಟ್ಟಿದ್ದರು.
ಗಂಡನನ್ನ ಬಿಟ್ಟು ಬಂದಿದ್ದ ಕ್ರಿಶ್ಚಿಯನ್ ಸಮುದಾಯದ ಮಹಿಳೆ ಮಗಳ ಜೊತೆ ತುಮಕೂರಿನಲ್ಲಿ ವಾಸವಾಗಿದ್ದರು.. ತುಮಕೂರಿನ ಡಿಸಿ ಕಚೇರಿ ಬಳಿ ಟೈಪಿಸ್ಟ್ ಆಗಿ ಕೆಲಸ ಮಾಡುತ್ತಿದ್ದಳು. 5 ವರ್ಷಗಳ ಹಿಂದೆ ತಮ್ಮ ಸಮುದಾಯದ ಹೆಸರೇಳಿಕೊಂಡು ತುಮಕೂರಿನ ಮಾಜಿ ಕಾರ್ಪೋರೇಟರ್ ರಾಜೇಂದ್ರಕುಮಾರ್ ಪರಿಚಯವಾಗಿದ್ದ. ಕಳೆದ ಎರಡು ವರ್ಷಗಳ ಹಿಂದೆ ಕರೋನಾ ಕಿಟ್ ವಿತರಿಸೋ ವೇಳೆ ಮನೆಗೆ ಬಂದಿದ್ದ ರಾಜೇಂದ್ರಕುಮಾರ್ ಮನೆಯಲ್ಲಿ ತಾಯಿ ಮಗಳು ಇರೋದನ್ನ ಗಮನಿಸಿದ್ದ. ಅದು ಹೇಗೋ ಮನೆಯಲ್ಲಿದ್ದ ಯುವತಿಯನ್ನು ಮರಳು ಮಾಡಿ ನಿರಂತರ ದೌರ್ಜನ್ಯ ಎಸಗುತ್ತಲೇ ಬಂದಿದ್ದ. ಯುವತಿ ಗರ್ಭವತಿಯಾಗುತ್ತಿದ್ದಂತೆ ಯುವತಿಗೆ ಗರ್ಭನಿರೋಧಕ ಮಾತ್ರೆ ನೀಡಿ ಯುವತಿಯಿಂದ ತಪ್ಪಿಸಿಕೊಳ್ಳೊಕೆ ಯತ್ನಿಸಿದ್ದ..
Sexual Harassment : ಅಣ್ಣನ ಮಕ್ಕಳನ್ನೇ ಕಾಡಿದ ಕಾಮುಕನಿಗೆ ಪತ್ನಿಯದ್ದೂ ಸಾಥ್ ...ಶಿಕ್ಷೆ ಕಡಿಮೆ ಆಯ್ತು!
ಗರ್ಭ ನಿರೋಧಕ ಮಾತ್ರೆ ನುಂಗಿದ ಯುವತಿಗೆ ಸೈಡ್ ಎಫೆಕ್ಟ್ ಆಗಿ ಹೊಟ್ಟೆ ನೋವು ಕಾಣಿಸಿಕೊಂಡಿದೆ..ಈ ವೇಳೆ ಆಕೆಯನ್ನ ತಮಗೆ ಪರಿಚಯಸ್ಥ ವೈದ್ಯರ ಬಳಿ ಕರೆದೊಯ್ದ ರಾಜೇಂದ್ರಕುಮಾರ್ ಯುವತಿಗೆ ಯಾವ್ದೊ ಖಾಯಿಲೆಯಾಗಿದೆ ಅಂತ ಬಿಂಬಿಸಿ ಕೇಸ್ ಮುಚ್ಚಿ ಹಾಕೋಕೆ.. ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಿದ್ದ.. ಆಸ್ಪತ್ರೆಗೆ ದಾಖಲಾದ ಎರಡೇ ದಿನಕ್ಕೆ ಯುವತಿ ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ್ದಾಳೆ.. ಈ ವೇಳೆ ಯುವತಿಯ ಮೃತದೇಹವನ್ನ ತುಮಕೂರಿಗೆ ತರದೇ ಬೆಂಗಳೂರಿನ ಶಾಂತಿನಗರ ಬಳಿಯಿರೋ ಕ್ರಿಶ್ಚಿಯನ್ ರುದ್ರಭೂಮಿಯಲ್ಲಿ ಅಂತ್ಯಸಂಸ್ಕಾರ ಮುಗಿಸಿ ಕೈತೊಳೆದು ಕೊಂಡು ಇನ್ನುಂದೆ ಹಾಯಾಗಿರಬಹುದು ಅಂದುಕೊಂಡಿದ್ದ..
ಇನ್ನು ತಮ್ಮ ಮಗಳು ಖಾಯಿಲೆಯಿಂದ ಸಾವನ್ನಪ್ಪಿದ್ದಾಳೆ ಅಂದು ಕೊಂಡಿದ್ದ ತಾಯಿಗೆ ಮಗಳು ಸಾವನ್ನಪ್ಪಿ ಒಂದು ವಾರದ ಬಳಿಕ ಆಕೆಯ ಮೊಬೈಲ್ ಪರಿಶೀಲನೆ ನಡೆಸಿದಾಗ ಮಗಳ ಸಾವಿನ ರಹಸ್ಯ ಬೆಳಕಿಗೆ ಬಂದಿದೆ.. ಮಗಳ ಮೊಬೈಲ್ ನಲ್ಲಿದ್ದ ಆಡಿಯೋ, ವಿಡಿಯೋ, ಹಾಗೂ ಪೋಟೋಗಳನ್ನ ನೋಡಿದ ತಾಯಿಗೆ ಮಗಳು ಖಾಯಿಲೆಯಿಂದ ಸಾವನ್ನಪ್ಪಿಲ್ಲ ಕೊಲೆಯಾಗಿದೆ ಅನ್ನೋದು ಕನ್ಫಮ್ ಆಗಿದೆ... ಈ ವೇಳೆ ಆರೋಪಿ ರಾಜೇಂದ್ರಕುಮಾರ್ ಬಳಿ ಹಿಗ್ಯಾಕೆ ಮಾಡ್ದೆ ಅಂತ ಕೆಳೋಕೆ ಹೋದಾಗ ನನ್ನ ಬಗ್ಗೆ ದೂರು ಕೊಟ್ರೆ ಕೊಲೆ ಮಾಡೋದಾಗಿ ಬೆದರಿಕೆ ಹಾಕಿದ್ದಾನೆ.
ಮಗಳ ಸಾವಿನ ಬಗ್ಗೆ ಅನುಮಾನ ವ್ಯಕ್ತಪಡಿಸಿ ತುಮಕೂರು ಟೌನ್ ಪೊಲೀಸ್ ಠಾಣೆಗೆ ಮಹಿಳೆ ದೂರು ನೀಡಿದ್ದಾರೆ. ಪ್ರಕರಣ ದಾಖಲಿಸಿಕೊಂಡ ತುಮಕೂರು ಪೊಲೀಸರು ಆರೋಪಿ ರಾಜೇಂದ್ರಕುಮಾರ್ ಬಂಧಿಸಿ ಎಫ್‌ಐಆರ್ ದಾಖಲಿಸಿಕೊಂಡಿದ್ದರು.