ರಾಮೇಶ್ವರಂ ಕೆಫೆ ಸ್ಫೋಟ ಪ್ರಕರಣ: ಬಳ್ಳಾರಿಯಿಂದ ಬಾಂಬರ್ ಹೋಗಿದ್ದೆಲ್ಲಿಗೆ?
ಶಂಕಿತ ವ್ಯಕ್ತಿ ಬೆನ್ನತ್ತಿರುವ ರಾಷ್ಟ್ರೀಯ ತನಿಖಾ ದಳ (ಎನ್‌ಐಎ) ಹಾಗೂ ಸಿಸಿಬಿ ಪೊಲೀಸರು, ಬಳ್ಳಾರಿ ಸೇರಿದಂತೆ ಇತರೆಡೆ ತೀವ್ರ ತಪಾಸಣೆ ನಡೆಸಿದ್ದಾರೆ. ಆದರೆ ಬಳ್ಳಾರಿ ನಂತರ ಶಂಕಿತನ ಪ್ರಯಾಣದ ವಿವರ ಸಿಗದೆ ತನಿಖಾ ಸಂಸ್ಥೆಗಳಿಗೆ ಸವಾಲಾಗಿ ಪರಿಣಮಿಸಿದೆ. ಇನ್ನು ಬಳ್ಳಾರಿ ಬಸ್ ನಿಲ್ದಾಣದ ಸಿಸಿಟಿವಿ ಕ್ಯಾಮರಾದಲ್ಲಿನ ದೃಶ್ಯಾವಳಿ ಆಧರಿಸಿ ಶಂಕಿತನ ಕುರಿತು ಮಾಹಿತಿ ನೀಡುವಂತೆ ಸಾರ್ವಜನಿಕರಲ್ಲಿ ಮನವಿ ಮಾಡಿಕೊಂಡ ಎನ್‌ಐಎ
ಬೆಂಗಳೂರು(ಮಾ.10): ಬಳ್ಳಾರಿ ನಗರದಲ್ಲಿ ಪೂರ್ವಯೋಜಿತ ಸಂಚಿ ನಂತೆ ಪರಿಚಿತನ ಭೇಟಿ ಸಾಧ್ಯವಾಗದೆ ರಾಮೇಶ್ವರಂ ಕೆಫೆ ಬಾಂಬ್ ಸ್ಫೋಟ ಪ್ರಕರಣದ ಶಂಕಿತ ವ್ಯಕ್ತಿ ಬೇರೆಡೆ ತಪ್ಪಿಸಿಕೊಂಡಿರ ಬಹುದು ಎಂಬ ಅನುಮಾನವನ್ನು ಪೊಲೀ ಸರು ವ್ಯಕ್ತಪಡಿಸಿದ್ದಾರೆ.
ಶಂಕಿತ ವ್ಯಕ್ತಿ ಬೆನ್ನತ್ತಿರುವ ರಾಷ್ಟ್ರೀಯ ತನಿಖಾ ದಳ (ಎನ್‌ಐಎ) ಹಾಗೂ ಸಿಸಿಬಿ ಪೊಲೀಸರು, ಬಳ್ಳಾರಿ ಸೇರಿದಂತೆ ಇತರೆಡೆ ತೀವ್ರ ತಪಾಸಣೆ ನಡೆಸಿದ್ದಾರೆ. ಆದರೆ ಬಳ್ಳಾರಿ ನಂತರ ಶಂಕಿತನ ಪ್ರಯಾಣದ ವಿವರ ಸಿಗದೆ ತನಿಖಾ ಸಂಸ್ಥೆಗಳಿಗೆ ಸವಾಲಾಗಿ ಪರಿಣಮಿಸಿದೆ. ಇನ್ನು ಬಳ್ಳಾರಿ ಬಸ್ ನಿಲ್ದಾಣದ ಸಿಸಿಟಿವಿ ಕ್ಯಾಮರಾದಲ್ಲಿನ ದೃಶ್ಯಾವಳಿ ಆಧರಿಸಿಶಂಕಿತನ ಕುರಿತು ಮಾಹಿತಿ ನೀಡುವಂತೆ ಸಾರ್ವಜನಿಕರಲ್ಲಿ ಎನ್‌ಐಎ ಮನವಿ ಮಾಡಿಕೊಂಡಿದೆ.
Rameshwaram cafe blast: ಆರೋಪಿ ಸುಳಿವಿಗೆ ₹10 ಲಕ್ಷ ಬಹುಮಾನ, ಅಮಾಯಕರಿಗೆ ತೊಂದರೆ?
ಎರಡು ಬಸ್ ಬದಲಾಯಿಸಿ ಬಳ್ಳಾರಿ ತಲುಪಿದ:
ಕುಂದಲಹಳ್ಳಿ ರಾಮೇಶ್ವರಂ ಕೆಫೆಯಲ್ಲಿ ಮಾ.1 ರಂದು ಶುಕ್ರವಾರ ಮಧ್ಯಾಹ್ನ 12 ಗಂಟೆಗೆ ಬಾಂಬ್ ಇಟ್ಟ ಬಳಿಕ ಬಿಎಂಟಿಸಿ ಬಸ್ ಹತ್ತಿ ಮೆಜೆಸ್ಟಿಕ್‌ಗೆ ಶಂಕಿತ ವ್ಯಕ್ತಿ ಬಂದಿದ್ದಾನೆ. ಅಲ್ಲಿಂದ ಗೊರಗುಂಟೆಪಾಳ್ಯಕ್ಕೆ ತೆರಳಿದ ಆತ, ಅಲ್ಲಿಂದ ತುಮಕೂರಿಗೆ ಹೋಗಿದ್ದಾನೆ. ಆನಂತರ ಬೀದರ್-ಹುಮ್ನಾಬಾದ್ ಬಸ್ ಹತ್ತಿ ಬಳ್ಳಾರಿ: ತಲುಪಿದ್ದಾನೆ. ಬಳ್ಳಾರಿ ಪ್ರಯಾಣಕ್ಕೆ ಆತ 2 ಬಸ್ ಬದಲಿಸಿದ್ದಾನೆ ಎನ್ನಲಾಗಿದೆ. ಪೂರ್ವಯೋಜಿತ ಸಂಚಿನಂತೆ ಬಳ್ಳಾರಿ ಬಸ್ ನಿಲ್ದಾಣದಲ್ಲಿ ಆತನನ್ನು ಪರಿಚಿತ ವ್ಯಕ್ತಿ ಭೇಟಿಯಾಗಬೇಕಿತ್ತು ಅನಿಸುತ್ತದೆ. ಆದರೆ ಆತನ ಸುಳಿವು ಸಿಗದೆ ಶಂಕಿತ ವ್ಯಕ್ತಿ ಆತಂಕದಲ್ಲಿ ಅಡ್ಡಾಡಿದ್ದಾನೆ. ಹೀಗಾಗಿ ತಾನು ಸೇರಬೇಕಾದ ಅಡ ಗುದಾಣ ತಲುಪದೆ ಶಂಕಿತ ವ್ಯಕ್ತಿ ಬೇರೆಡೆ ಸಾಗಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ.
ಹೊರಟಿದ್ದು ಮೂರು ಬಸ್ಸುಗಳು:
ಬಳ್ಳಾರಿ ಕೆಎಸ್‌ಆರ್ ಟಿಸಿ ಬಸ್ ನಿಲ್ದಾಣದಲ್ಲಿ ರಾತ್ರಿ 9 ಗಂಟೆ ಬಳಿಕ ಗೋಕರ್ಣ, ಭಟ್ಕಳ ಹಾಗೂ ಮಂತ್ರಾಲಯಕ್ಕೆ 3 ಬಸ್‌ಗಳು ಹೊರಟಿ ದ್ದವು. ಈಮೂರರಪೈಕಿ ಯಾವ ಬಸ್ಸಿನಲ್ಲಿ ಆತ ಪ್ರಯಾಣಿಸಿ ದ್ದಾನೆ ಎಂಬುದು ಖಚಿತವಾಗಿಲ್ಲ. ಶಂಕೆ ಮೇರೆಗೆ ಭಟ್ಕಳ, ಮಂತ್ರಾಲಯ, ಗೋಕರ್ಣ ನಿಲ್ದಾಣಗಳ ಸಿಸಿಟಿವಿ ಪರಿಶೀ ಲಿಸಲಾಗಿದೆ. ಎಲ್ಲಿಯೂ ಆತನ ಸುಳಿವಿಲ್ಲ ಎನ್ನಲಾಗಿದೆ.
ರಾಮೇಶ್ವರಂ ಕೆಫೆ ಬಾಂಬರ್ ಕ್ಲಿಯರ್ ಪಿಕ್ಚರ್ ಬಿಡುಗಡೆ ಮಾಡಿದ ಎನ್‌ಐಎ!
ಕಲಬುರಗಿಯಲ್ಲೂ ಕೆಫೆ ಬಾಂಬರ್‌ಗಾಗಿ ಶೋಧ
ಕಲಬುರಗಿ: ರಾಮೇಶ್ವರಂ ಕೆಫೆ ಸ್ಫೋಟದ ಬಳಿಕ ಬಾಂಬರ್ ಬೆಂಗಳೂರಿನಿಂದ ಬಳ್ಳಾರಿಗೆ ಆಗಮಿಸಿ, ಇಲ್ಲಿಂದ ಬಸ್ ಹತ್ತಿ ಕಲಬುರಗಿಗೆ ಬಂದಿದ್ದನೆಂಬ ಬಲವಾದ ಶಂಕೆ ಹಿನ್ನೆಲೆಯಲ್ಲಿ ಎನ್‌ಐಎ ತಂಡ ಶನಿವಾರ ಕಲಬುರಗಿಗೆ ಬಂದು ಇಡೀ ದಿನ ಸ್ಥಳೀಯ ಪೊಲೀಸರ ನೆರವಿನಿಂದ ತೀವ್ರ ಶೋಧ ನಡೆಸಿತು.
ನಗರದ ರೈಲ್ವೇ, ಬಸ್ ನಿಲ್ದಾಣ ಮತ್ತು ಕೆಲವು ಲಾಡ್ಜ್ ಗಳಲ್ಲಿ ಎನ್‌ಐಎ ಅಧಿಕಾರಿಗಳು ಪರಿಶೀಲನೆ ನಡೆಸಿದರು. ಬಸ್ ನಿಲ್ದಾಣದ 15ಕ್ಕೂ ಹೆಚ್ಚು ರೈಲ್ವೇ ನಿಲ್ದಾಣ ಹಾಗೂ ಸುತ್ತಮುತ್ತಲಿರುವ 20ಕ್ಕೂ ಹೆಚ್ಚು ಸಿಸಿಟೀವಿ ಕ್ಯಾಮೆರಾಗಳ ದೃಶ್ಯಾವಳಿಗಳ ವೀಕ್ಷಣೆ ಮಾಡಿದರು. ಜೊತೆಗೆ ಇಲ್ಲಿನ ಸ್ಟೇಷನ್ ಬಜಾರ್‌ನ ಎಲ್ಲಾ ಲಾಡ್ಜ್ ಗಳಿಗೆ ಎನ್‌ಐಎ ತಂಡ ಭೇಟಿ ನೀಡಿ ವಿಚಾರಣೆ ನಡೆಸಿ, ಅಲ್ಲಿಯೂ ಸಿಸಿಟೀವಿ ದೃಶ್ಯಗಳನ್ನು ಪರಿಶೀಲನೆ ನಡೆಸಿತು ಎಂದು ತಿಳಿದುಬಂದಿದೆ.