Asianet Suvarna News Asianet Suvarna News

ರಾಮನಗರದಲ್ಲಿ ಹಾಡಹಗಲೇ ಮನೆಗೆ ನುಗ್ಗಿ ಗೃಹಣಿಯ ಕೊಲೆ

ರೇಷ್ಮೆ ನಗರಿ ರಾಮನಗರದ ಚನ್ನಪಟ್ಟಣದಲ್ಲಿ ಹಾಡಹಗಲೇ ಮನೆಗೆ ನುಗ್ಗಿ ಗೃಹಣಿಯೊಬ್ಬಳನ್ನು ಬರ್ಬರವಾಗಿ ಹತ್ಯೆಗೈಯಲಾಗಿದೆ.  ಈ ಭಯಾನಕ ಘಟನೆಯಿಂದ ಇಡೀ ನಗರ ಬೆಚ್ಚಿ ಬಿದ್ದಿದೆ. 

Ramanagar housewife killed in broad daylight, robber escape with gold akb
Author
Channapatna, First Published Jul 15, 2022, 11:49 PM IST

ರಾಮನಗರ: ರೇಷ್ಮೆ ನಗರಿ ರಾಮನಗರದ ಚನ್ನಪಟ್ಟಣದಲ್ಲಿ ಹಾಡಹಗಲೇ ಮನೆಗೆ ನುಗ್ಗಿ ಗೃಹಣಿಯೊಬ್ಬಳನ್ನು ಬರ್ಬರವಾಗಿ ಹತ್ಯೆಗೈಯಲಾಗಿದೆ.  ಈ ಭಯಾನಕ ಘಟನೆಯಿಂದ ಇಡೀ ನಗರ ಬೆಚ್ಚಿ ಬಿದ್ದಿದೆ. ಬೊಂಬೆನಗರಿ ಚನ್ನಪಟ್ಟಣ ನಗರದ ಹೌಸಿಂಗ್ ಬೋರ್ಡ್ ನ ಮಹದೇಶ್ವರ ಬಡಾವಣೆಯಲ್ಲಿ ಈ ಅನಾಹುತ ನಡೆದಿದೆ. 

ಘಟನಾ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿದ ವೇಳೆ ಮಂಚದ ಮೇಲೆ ಗೃಹಿಣಿ ಶವವಾಗಿ ಬಿದ್ದಿದ್ದು, ಮನೆಯೊಳಗೆ ವಸ್ತುಗಳೆಲ್ಲವೂ ಚೆಲ್ಲಾಪಿಲ್ಲಿಯಾಗಿ ಬಿದ್ದಿದ್ದವು. ಹಾಡಹಗಲೇ ಮನೆಗೆ ನುಗ್ಗಿದ ದುಷ್ಕರ್ಮಿ ಗೃಹಣಿಯ ಕತ್ತು ಕೊಯ್ದು ಬರ್ಬರವಾಗಿ ಹತ್ಯೆ ಮಾಡಿದ್ದ. ಮೃತ ಮಹಿಳೆಯನ್ನು ಚನ್ನಪಟ್ಟಣ ಎಲೆ ಮಂಡಿಯಲ್ಲಿ ರೈಟರ್ ಆಗಿ ಕೆಲಸ ಮಾಡುತ್ತಿರುವ ವೆಂಕಟೇಶ್ ಅವರ ಪತ್ನಿ ಗೀತಾ(32) ಎಂದು ಗುರುತಿಸಲಾಗಿದೆ.

ಗೀತಾಳ ಪತಿ ವೆಂಕಟೇಶ್ ಮಧ್ಯಾಹ್ನ ಮನೆಯಲ್ಲಿ ಊಟ ಮಾಡಿ, ಕೆಲಸಕ್ಕೆಂದು ಹೋದ ನಂತರ ಸುಮಾರು ಮಧ್ಯಾಹ್ನ 2.30 ರಿಂದ 3 ಗಂಟೆ ಸುಮಾರಿಗೆ ಬೈಕ್ ನಲ್ಲಿ ಬಂದಿದ್ದ ದುಷ್ಕರ್ಮಿ ಈ ಕೃತ್ಯವೆಸಗಿದ್ದಾನೆ. ಗೀತಾಳನ್ನ ಮನೆಯಲ್ಲಿ ಕತ್ತುಕುಯ್ದು ಬರ್ಬರವಾಗಿ ಹತ್ಯೆ ಮಾಡಿದ್ದಾನೆ. ಇದಾದ ಬಳಿಕ ಗೀತಾಳ ಪತಿಯ ಅಣ್ಣ ಹಾಗೂ ಅಣ್ಣನ ಮಗ ಬಂದು ಬಾಗಿಲು ತಟ್ಟಿದ್ದು, ಬಾಗಿಲು ತೆಗೆದಿಲ್ಲ. ಹೀಗಾಗಿ ಗೀತಾ ಮಲಗಿರಬೇಕು ಎಂದು ಇಬ್ಬರು ವಾಪಾಸ್ ಹೋಗಿದ್ದಾರೆ. ಇನ್ನು ಸಂಜೆ ಶಾಲೆ ಮುಗಿಸಿಕೊಂಡು ಗೀತಾಳ ಮಗ ಸಮರ್ಥ ಮನೆಗೆ ಬಂದಾಗ ಕೊಲೆ ವಿಚಾರ ಬಯಲಾಗಿದೆ. ಮನೆಯ ರೂಮ್‌ ಒಳಗೆ ಹೋಗಿ ನೋಡಿದಾಗ ರಕ್ತದ ಮಡುವಿನಲ್ಲಿ ತಾಯಿ ಮಲಗಿರುವುದನ್ನ ಗಮನಿಸಿದ ಬಾಲಕ ತನ್ನ ಸಂಬಂಧಿಕರಿಗೆ ಮಾಹಿತಿ ಮುಟ್ಟಿಸಿದ್ದಾನೆ.  

ರಾಮನಗರ: 2 ವರ್ಷಗಳ ಬಳಿಕ ದೇವರಹೊಸಹಳ್ಳಿ ಬ್ರಹ್ಮರಥೋತ್ಸವಕ್ಕೆ ಭರದ ಸಿದ್ಧತೆ

ಅಂದಹಾಗೆ ಗೀತಾಳ ಹತ್ಯೆ ಸಾಕಷ್ಟು ಅನುಮಾನಗಳಿಗೆ ಎಡೆ ಮಾಡಿಕೊಟ್ಟಿದೆ. ಗೀತಾಳನ್ನು ಮಧ್ಯಾಹ್ನದ ವೇಳೆ ಭೀಕರವಾಗಿ ಹತ್ಯೆ ಮಾಡಲಾಗಿದೆ. ಮನೆಯಲ್ಲಿ ಇರುವ ವಸ್ತು ಹಾಗೂ ಬೀರುವಿನಲ್ಲಿ ಇರುವ ವಸ್ತುಗಳು ಚೆಲ್ಲಾಪಿಲ್ಲಿ ಆಗಿದೆ. ಆದರೆ ಹಣ ಆಗಲಿ, ಚಿನ್ನಾಭರಣವಾಗಲಿ ಕಳ್ಳತನವಾಗಿಲ್ಲ. ಎಲ್ಲ ವಸ್ತುಗಳು ಮನೆಯಲ್ಲಿಯೇ ಇವೆ. ಪೊಲೀಸರ ದಿಕ್ಕು ತಪ್ಪಿಸಲು ಆರೋಪಿ ವಸ್ತುಗಳನೆಲ್ಲಾ ಚೆಲ್ಲಾಪಿಲ್ಲಿ ಮಾಡಿ ಹೋಗಿದ್ದಾನೆ ಎನ್ನಲಾಗಿದೆ. ಜೊತೆಗೆ ಗೊತ್ತಿರುವ ವ್ಯಕ್ತಿಯೇ ಹತ್ಯೆ ಮಾಡಿರಬಹುದು ಎಂಬ ಶಂಕೆ ವ್ಯಕ್ತವಾಗಿದೆ. ಮನೆಯೊಳಗೆ ಟೀ ಕುಡಿದ ಕಪ್‌ ಇದ್ದು, ಪರಿಚಯದ ವ್ಯಕ್ತಿಯೇ ಹತ್ಯೆ ಮಾಡಿ, ಪೊಲೀಸರ ದಿಕ್ಕು ತಪ್ಪಿಸಲು ಈ ರೀತಿ ಮನೆಯಲ್ಲಿದ್ದ ವಸ್ತುಗಳನ್ನು ಚೆಲ್ಲಾಪಿಲ್ಲಿಯಾಗಿ ಎಸೆದು ಹೋಗಿದ್ದಾನೆ. ಹತ್ಯೆ ವಿಚಾರ ತಿಳಿಯುತ್ತಿದ್ದಂತೆ ಸಾರ್ವಜನಿಕರ ದಂಡು ಸ್ಥಳದಲ್ಲಿ ನೆರೆದಿತ್ತು. 

ಘಟನಾ ಸ್ಥಳಕ್ಕೆ ಚನ್ನಪಟ್ಟಣ ಗ್ರಾಮಾಂತರ ಠಾಣೆ ಪೊಲೀಸರು, ರಾಮನಗರ ಎಸ್ ಪಿ ಸಂತೋಷ್ ಬಾಬು, ಬೆರಳಚ್ಚು ತಜ್ಞರು, ಶ್ವಾನದಳ ಕೂಡ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಒಟ್ಟಾರೆ ಪರಿಚಯಸ್ಥನೇ ಗೃಹಣಿಯನ್ನ ಭೀಕರವಾಗಿ ಹತ್ಯೆ ಮಾಡಿ ಪರಾರಿಯಾಗಿದ್ದಾನೆ. ಇನ್ನು ಹಾಡಹಗಲೇ ನಡೆದಿರೋ ಗೃಹಣಿಯ ಕೊಲೆ ಇಡೀ ಬೊಂಬೆನಗರಿಯ ಜನರನ್ನ ಬೆಚ್ಚಿ ಬೀಳಿಸಿದೆ. ಈ ಬಗ್ಗೆ ಚನ್ನಪಟ್ಟಣ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಆರೋಪಿಯ ಬಂಧನಕ್ಕೆ ಬಲೆ ಬೀಸಿದ್ದಾರೆ.

ರಾಮನಗರ: 2 ವರ್ಷಗಳ ಬಳಿಕ ದೇವರಹೊಸಹಳ್ಳಿ ಬ್ರಹ್ಮರಥೋತ್ಸವಕ್ಕೆ ಭರದ ಸಿದ್ಧತೆ

Follow Us:
Download App:
  • android
  • ios