ಹಿಂದೂ ಯುವಕನ ತಲೆ ಕತ್ತರಿಸಿದ ಇಬ್ಬರು ಹಂತಕರ ಬಂಧನ, ಭಾರಿ ಪ್ರತಿಭಟನೆ!
- ಉದಯ್‌ಪುರದ ಹಿಂದೂ ಯವಕನ ತಲೆ ಕತ್ತರಿಸಿದ ಘಟನೆ
- ವಿಡಿಯೋ ಮಾಡಿ ಹರಿಬಿಟ್ಟಿದ್ದ ಆರೋಪಿಗಳು
- ಭಾರಿ ಪ್ರತಿಭಟನೆ, ಇಬ್ಬರು ಹಂತಕರು ಅರೆಸ್ಟ್
ಉದಯ್‌ಪುರ(ಜೂ.28): ಇಡೀ ದೇಶವನ್ನೇ ಬೆಚ್ಚಿ ಬೀಳಿಸಿದ ರಾಜಸ್ಥಾನ ಉದಯ್‌ಪುರದ ಹಿಂದೂ ಯುವಕನ ರುಂಡ ಕತ್ತರಿಸಿದ ಘಟನೆ ವಿರುದ್ಧ ಭಾರಿ ಪ್ರತಿಭಟನೆ ನಡೆಯುತ್ತಿದೆ. ಮುಸ್ಲಿಮ್ ಯುವಕರು ನೇರವಾಗಿ ಬಟ್ಟೆ ಅಂಗಡಿಗೆ ನುಗ್ಗಿ ಕನ್ನಯ್ಯ ಲಾಲ್ ಎಂಬಾತನನ್ನು ಬರ್ಬರವಾಗಿ ಹತ್ಯೆ ಮಾಡಿದ್ದಾರೆ. ಈ ಘಟನೆ ಸಂಬಂಧ ಇಬ್ಬರು ಹಂತಕರನ್ನು ರಾಜಸ್ಥಾನ ಪೊಲೀಸರು ಬಂಧಿಸಿದ್ದಾರೆ.
ರಾಜಸಮಂದ್ ಜಿಲ್ಲೆಯ ಭೀಮ್ ವಲಯದಲ್ಲಿ ಇಬ್ಬರು ಆರೋಪಿಗಳನ್ನು ಬಂಧಿಸಲಾಗಿದೆ. ಈ ಆರೋಪಿಗಳು ವಿಡಿಯೋದಲ್ಲಿ ಪತ್ತೆಯಾಗಿರುವ ಕೊಲೆ ಆರೋಪಿಗಳೇ ಅಥವಾ ಕೊಲೆಗೆ ಸಹಕರಿಸಿದವರೇ ಅನ್ನೋ ಮಾಹಿತಿಯನ್ನು ಪೊಲೀಸರು ಬಹಿರಂಗ ಪಡಿಸಿಲ್ಲ.
ನೂಪುರ್ ಶರ್ಮಾಗೆ ಬೆಂಬಲ ಸೂಚಿಸಿದ ಹಿಂದೂ ಯುವಕನ ತಲೆ ಕತ್ತರಿಸಿದ ಮುಸ್ಲಿಂ ಯುವಕರು, ವಿಡಿಯೋ ವೈರಲ್!
ಬಿಜೆಪಿ ನಾಯಕಿ ನೂಪುರ್ ಶರ್ಮಾ ವಿವಾದಿತ ಹೇಳಿಕೆಯಿಂದ ದೇಶದಲ್ಲಿ ಬಾರಿ ಕೋಮಸಂಘರ್ಷವೇ ನಡೆದು ಹೋಗಿದೆ. ನೂಪರು ಬೆಂಬಲಿಸಿ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಹಾಕಿದ್ದ ಹಿಂದೂ ಟೈಲರ್ ಕನ್ಹಯ್ಯ ಲಾಲ್ ವಿರುದ್ಧ ಮುಸ್ಲಿಮ್ ಯುವಕರು ಕಳೆದ ಎರಡು ವಾರಗಳಿಂದ ಬೆದರಿ ಹಾಕಿದ್ದರು. ಕೊಚ್ಚಿ ಕೊಲ್ಲುವುದಾಗಿ ಬೆದರಿಕೆ ಹಾಕಲಾಗಿತ್ತು. ಈ ಕುರಿತು ಪೊಲೀಸರಿದೆ ದೂರು ನೀಡಿದ್ದ ಕನ್ಹಯ್ಯ ಲಾಲ್ ರಕ್ಷಣೆಗೆ ಮನವಿ ಮಾಡಿದ್ದರು.
ಆದರೆ ರಾಜಸ್ಥಾನ ಪೊಲೀಸರು ಎಚ್ಟರಿಕೆಯಿಂದಿರಲು ಸೂಚಿಸಿದ್ದರೇ ಹೊರತು, ಆರೋಪಿಗಳನ್ನು ಬಂಧಿಸುವ ಅಥವಾ ಎಚ್ಚರಿಕೆ ನೀಡುವ ಗೋಜಿಗೆ ಹೋಗಿಲ್ಲ. ಕಳೆದ ಒಂದು ವಾರದಿಂದ ಟೈಲರ್ ಶಾಪ್ ತೆರೆಯದೇ ಜೀವಭಯದಿಂದ ಬದುಕುತ್ತಿದ್ದ ಕನ್ಹಯ್ಯ ಲಾಲ್ ಸೋಮವಾರ ಅಂಗಡಿ ತೆರೆದಿದ್ದಾರೆ.
ಕನ್ಹಯ್ ಲಾಲ್ ಅಂಗಡಿ ಬರುವುದನ್ನೇ ಕಾಯುತ್ತಾ ಕುಳಿದಿದ್ದ ಮುಸ್ಲಿಮ್ ಯುವಕರು ಬಟ್ಟೆ ಹೊಲಿಗೆ ಹಾಕುವ ನೆಪದಲ್ಲಿ ಅಂಗಡಿಗೆ ನುಗ್ಗಿದ್ದಾರೆ. ಬಳಿಕ ಬಟ್ಟೆ ಹೊಲಿಯಲು ಅಳತೆ ತೆಗೆಯುವಂತೆ ಸೂಚಿಸಿದ್ದಾರೆ. ಅಳತೆ ತೆಗೆಯತ್ತಿರುವಾಗಲೇ ರುಂಡ ಕತ್ತರಿಸಿದ್ದಾರೆ.
ಈ ಭೀಕರ ಕೊಲೆಯನ್ನು ಚಿತ್ರೀಕರಿಸಿಕೊಂಡಿದ್ದಾರೆ. ಬಳಿಕ ಪ್ರಧಾನಿ ಮೋದಿ ಹಾಗೂ ಹಿಂದೂ ಸಮುದಾಯಕ್ಕೆ ಎಚ್ಚರಿಕೆ ನೀಡಿದ್ದಾರೆ. ತಮ್ಮನ್ನು ತಾವು ಪರಿಚಯಿಸಿಕೊಂಡು ಪ್ರವಾದಿ ಮೊಹಮ್ಮದ್ ವಿರುದ್ಧ ಅವಹೇಳನ ಹೇಳಿಕೆ ನೀಡಿದರೆ ರುಂಡ ಕತ್ತರಿಸುವುದೇ ಶಿಕ್ಷೆ. ನಾವು ಆರಂಭಿಸಿದ್ದೇವೆ ಎಂದು ಆರೋಪಿಗಳು ವಿಡಿಯೋ ಸಂದೇಶ ಹರಿಬಿಟ್ಟಿದ್ದಾರೆ.
ಟೈಲರ್ ಕನ್ಹಯ್ಯಲಾಲ್‌ಗೆ ಸತತ 6 ದಿನಗಳಿಂದ ಬೆದರಿಕೆ, ಕ್ರಮ ಕೈಗೊಳ್ಳದ ಪೊಲೀಸರು!
ಉದಯ್‌ಪುರದಲ್ಲಿ ಭಾರಿ ಪ್ರತಿಭಟನೆ
ಉದಯ್‌ಪುರದಲ್ಲಿನ ಹಿಂದೂ ವ್ಯಕ್ತಿಯ ಹತ್ಯೆ ಖಂಡಿಸಿ ಬಾರಿ ಪ್ರತಿಭಟನೆ ನಡೆಯುತ್ತಿದೆ. ಉದಯ್‌ಪುರದಲ್ಲಿ ಇಂಟರ್ನೆಟ್ ಸೇವೆ ಸ್ಥಗಿತಗೊಳಿಸಲಾಗಿದೆ. ಹೆಚ್ಚುವರಿಯಾಗಿ 600 ಪೊಲೀಸರ ನಿಯೋಜನೆ ಮಾಡಲಾಗಿದೆ. ಉದಯ್‌ಪುರದಲ್ಲಿ 144 ಸೆಕ್ಷನ್ ಜಾರಿ ಮಾಡಲಾಗಿದೆ.
ಘಟನೆ ಕುರಿತ ವಿಡಿಯೋವನ್ನು ಹಂಚಿಕೊಳ್ಳದಂತೆ ರಾಜಸ್ಥಾನ ಪೊಲೀಸ್ ಸೂಚನೆ ನೀಡಿದ್ದಾರೆ. ವಿಡಿಯೋ ಹರಿಬಿಟ್ಟರೆ, ಹಂಚಿಕೊಂಡರೆ ಕ್ರಮ ಕೈಗೊಳ್ಳಲಾಗುವುದು ಎಂದಿದ್ದಾರೆ. ಕೋಮು ಸಂಘರ್ಷಕ್ಕೆ ಎಡೆ ಮಾಡಿದರೆ ಕ್ರಮ ಕೈಗೊಳ್ಳಲಾಗುವುದು. ಹೀಗಾಗಿ ಎಲ್ಲರೂ ಶಾಂತವಾಗಿರಬೇಕು. ಯಾರೂ ಕೂಡ ಕಾನೂನು ಕೈಗೆತ್ತಿಕೊಳ್ಳುವ ಸಾಹಸಕ್ಕೆ ಯತ್ನಿಸಬಾರದು ಎಂದು ಪೊಲೀಸ್ ಸೂಚಿಸಿದ್ದಾರೆ. ಇತ್ತ ರಾಜಸ್ಥಾನ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್, ಘಟನೆಯನ್ನು ಖಂಡಿಸಿದ್ದಾರೆ. ತಪ್ಪತಸ್ತರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವುದಾಗಿ ಹೇಳಿದ್ದಾರೆ.