Asianet Suvarna News Asianet Suvarna News

ರಾಜಕೀಯ ಸಂಚಲನ; ಪತ್ನಿಗೆ ನಕಲಿ ಸರ್ಟಿಫಿಕೇಟ್ ಮಾಡಿಸಿ ಜೈಲು ಸೇರಿದ ಬಿಜೆಪಿ ನಾಯಕ

* ಪೋರ್ಜರಿ ಪ್ರಕರಣದಲ್ಲಿ ಜೈಲು ಸೇರಿದ ಬಿಜೆಪಿ ನಾಐಖ
* ಪತ್ನಿಗೆ ನಕಲಿ ಸರ್ಟಿಫಿಕೇಟ್ ಮಾಡಿಸಿಕೊಟ್ಟಿದ್ದರು
* ರಾಜಸ್ಥಾನದಲ್ಲಿ ರಾಜಕಾರಣ ಸಂಚಲನ
* ಕನಿಷ್ಠ ಶಿಕ್ಷಣ ನೀತಿ ಜಾರಿ ಮಾಡಿದ್ದ ಬಿಜೆಪಿ ಸರ್ಕಾರ

Rajasthan BJP lawmaker sent to prison in forgery case mah
Author
Bengaluru, First Published Jul 13, 2021, 6:34 PM IST

ಜೈಪುರ(ಜು.  13)  ರಾಜಸ್ಥಾನದಲ್ಲಿ ದೊಡ್ಡ ರಾಜಕಾರಣದ ಬೆಳವಣಿಗೆ ಆಗಿದೆ. ವಿರೋಧ ಪಕ್ಷದ ನಾಯಕ ಬಿಜೆಪಿ ಮುಖಂಡ ಅಮೃತ್ ಲಾಲ್ ಮೀನಾ ಜೈಲು ಸೇರಿದ್ದಾರೆ. 
ಮಂಗಳವಾರ ನ್ಯಾಯಾಲಯದ ಮುಂದೆ ಪೋರ್ಜರಿ ಪ್ರಕರಣಕ್ಕೆ ಸಂಬಂಧಿಸಿ ಮೀನಾ ಶರಣಾಗಿದ್ದಾರೆ. 

ರಾಜಸ್ಥಾನದ ಉದಯಪುರದ ಸ್ಥಳೀಯ ನ್ಯಾಯಾಲಯಕ್ಕೆ ಶರಣಾಗಿದ್ದು ಜೈಲಿಗೆ ಕಳುಹಿಸಲಾಗಿದೆ. 2015 ರಲ್ಲಿ ಸ್ಥಳೀಯ ಸಂಸ್ಥೆ ಚುನಾವಣೆ ವೇಳೆ ನಕಲಿ ದಾಖಲೆ ಸೃಷ್ಟಿ ಮಾಡಿದ್ದ ಆರೋಪ ಅವರ ಮೇಲೆ ಇದೆ.

ದರ್ಶನ್ ಹೆಸರಿನಲ್ಲಿ ವಂಚನೆ ..ಪ್ರಕರಣ ಎಲ್ಲಿಗೆ ಬಂತು?

ಪತ್ನಿಯ ಐದನೇ ತರಗತಿ ಮಾರ್ಕ್ ಕಾರ್ಡ್ ನಕಲಿ ಮಾಡಿಸಿ ಚುನಾವಣೆಗೆ ಸ್ಪರ್ಧೆ ಮಾಡಲು ಅನುವು ಮಾಡಿಕೊಟ್ಟಿದ್ದರು ಎಂಬ ಆರೋಪ ಕೇಳಿಬಂದಿತ್ತು. ಈ ಬಗ್ಗೆ ಪೊಲೀಸ್ ತನಿಖೆ ನಡೆದು ಅಂಕಪಟ್ಟಿ ನಕಲಿ ಎನ್ನುವುದು ಸಾಬೀತಾಗಿತ್ತು. 

ಹಿಂದೆ ಇದ್ದ  ಬಿಜೆಪಿ ಸರ್ಕಾರ ಸ್ಥಳೀಯ ಸಂಸ್ಥೆ ಚುನಾವಣೆಗೆ ಸ್ಪರ್ಧೆ ಮಾಡವುದಕ್ಕೂ ಶಿಕ್ಷಣ ಮಿತಿಯನ್ನು ನಿಗದಿ ಮಾಡಿತ್ತು.  ಸಾಮಾನ್ಯ ವರ್ಗದವರಿಗೆ  8  ನೇ ತರಗತಿ, ಎಸ್ ಸಿ, ಎಸ್‌ಟಿ ವರ್ಗದವರಿಗೆ  5 ನೇ ತರಗತಿ ಪಾಸ್ ಆಗಿರಬೇಕು ಎಂದು ನಿಯಮ ರೂಪಿಸಿತ್ತು. ಆದರೆ ನಂತರ ಅಧಿಕಾರಕ್ಕೆ ಬಂದ   ಕಾಂಗ್ರೆಸ್ ಈ ನಿಯಮಾವಳಿಯನ್ನು ಕೈಬಿಟ್ಟಿತ್ತು. 

 

Follow Us:
Download App:
  • android
  • ios