ಪಟ್ಟಣದಲ್ಲಿ ಹಾಡುಹಗಲೇ ಯುವಕನನ್ನು ಗುಡ್ಡದ ಬಳಿ ಹೊತ್ತೊಯ್ದು ಆತನ ಬಳಿ ಇದ್ದ 60 ಸಾವಿರ ರು. ಹಣ ಮತ್ತು ಮೊಬೈಲ್‌ ದೋಚಿಕೊಂಡು ಪರಾರಿಯಾದ ಘಟನೆ ಬುಧವಾರ ಮಧ್ಯಾಹ್ನ 3 ಗಂಟೆ ಸುಮಾರಿಗೆ ಜರುಗಿದೆ.

ಮಸ್ಕಿ (ಜೂ.23) :

ಪಟ್ಟಣದಲ್ಲಿ ಹಾಡುಹಗಲೇ ಯುವಕನನ್ನು ಗುಡ್ಡದ ಬಳಿ ಹೊತ್ತೊಯ್ದು ಆತನ ಬಳಿ ಇದ್ದ 60 ಸಾವಿರ ರು. ಹಣ ಮತ್ತು ಮೊಬೈಲ್‌ ದೋಚಿಕೊಂಡು ಪರಾರಿಯಾದ ಘಟನೆ ಬುಧವಾರ ಮಧ್ಯಾಹ್ನ 3 ಗಂಟೆ ಸುಮಾರಿಗೆ ಜರುಗಿದೆ.

ಘಟನೆಯ ವಿವರ:

ಯುವಕ ರಾಹುಲ್‌ ಕೆಳೂತ್‌ ಮಧ್ಯಾಹ್ನ 2-30 ರ ಸುಮಾರಿಗೆ ಸುಕೋ ಬ್ಯಾಂಕಿನ ಎಟಿಎಂ ನಿಂದ 40 ಸಾವಿರ ರೂ ಡ್ರಾ ಮಾಡಿದ್ದಾನೆ. ತನ್ನಲ್ಲಿದ್ದ 20 ಸಾವಿರ ರು. ಸೇರಿಸಿ ಒಟ್ಟು 60 ಸಾವಿರ ತೆಗೆದುಕೊಂಡು ಮನೆಗೆ ಹೋಗುವಾಗ ಈ ಘಟನೆ ನಡೆದಿದೆ.

ಚಾಕು ತೋರಿಸಿ ಖ್ಯಾತ Rapper ದೇವ್ ಆನಂದ್ ಅಪಹರಣ: 5 ಮಂದಿಯ ಬಂಧನ

ರಾಹುಲ್‌ ಸುಕೋ ಬ್ಯಾಂಕಿನಿಂದ ಹಣ ಡ್ರಾ ಮಾಡಿಕೊಂಡು ಬಾಲಕಿಯರ ಸರ್ಕಾರಿ ಪ್ರೌಢಶಾಲೆಯ ಹಿಂಭಾಗದಿಂದ ನಡೆದುಕೊಂಡು ಹೋಗುತ್ತಿರುವಾಗ ಅಪರಿಚಿತ ನಾಲ್ವರು ಮುಖಕ್ಕೆ ಬಟ್ಟೆಕಟ್ಟಿಕೊಂಡು ಬೈಕ್‌ ಮೇಲೆ ಬಂದು ರಾಹುಲನನ್ನು ಸಮೀಪದಲ್ಲಿರುವ ಗುಡ್ಡದ ಜಾಲಿಗಿಡಗಳ ಮರೆಯಲ್ಲಿ ಹೊತ್ತುಕೊಂಡು ಹೋಗಿದ್ದಾರೆ. ಅಲ್ಲಿ ಕಲ್ಲಿನಿಂದ ತಲೆಗೆ ಜಜ್ಜಿ ರಾಹುಲ್‌ ಬಳಿಯಿದ್ದ ಹಣ ಮತ್ತು ಮೊಬೈಲ್‌ನ್ನು ಕಿತ್ತುಕೊಂಡು ಪರಾರಿಯಾಗಿದ್ದಾರೆ.

ಈ ಕುರಿತು ಮಸ್ಕಿ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಿಸಿಕೊಂಡಿರುವ ಪಿಎಸ್‌ಐ ಸಿದ್ದರಾಮ ಬಿದರಾಣಿ ತನಿಖೆ ಕೈ ಕೊಂಡಿದ್ದಾರೆ.

ಎಸ್ಪಿ ಭೇಟಿ:

ವಿಷಯ ತಿಳಿದು ರಾಯಚೂರು ಜಿಲ್ಲಾ ಎಸ್ಪಿ ನಿಖಿಲ್‌ ಬಿ.ಗುರುವಾರ ಘಟನೆ ನಡೆದ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು. ಹಣ ಕಳೆದುಕೊಂಡ ಯುವಕ ರಾಹುಲ್‌ನನ್ನು ವಿಚಾರಿಸಿದ ಎಸ್ಪಿ ಆರೋಪಿಗಳನ್ನು ಪತ್ತೆಹಚ್ಚಿ ಸೂಕ್ತ ಕಾನೂನು ಕ್ರಮ ಕೈಗೊಳ್ಳುವುದಾಗಿ ತಿಳಿಸಿದರು. ಡಿವೈಎಸ್ಪಿ ಮಂಜುನಾಥ, ಸಿಪಿಐ ಸಂಜೀವ್‌ ಬಳಿಗಾರ ಮತ್ತು ಪಿಎಸ್‌ಐ ಸಿದ್ದರಾಮ ಬಿದರಾಣಿ ಇದ್ದರು.

ವಿದ್ಯುತ್‌ ತಂತಿ ಕಳವು ಮಾಡುತ್ತಿದ್ದ ಕಳ್ಳರ ಬಂಧನ

ಲಕ್ಷ್ಮೇಶ್ವರ: ವಿದ್ಯುತ್‌ ತಂತಿ ಕಳ್ಳತನ ಮಾಡುತಿದ್ದ ಮೂವರು ಕಳ್ಳರನ್ನು ಪಟ್ಟಣದ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಸುಮಾರು . 2.4 ಲಕ್ಷ ಮೌಲ್ಯದ ವಿದ್ಯುತ್‌ ತಂತಿಯನ್ನು ವಶಪಡಿಸಿಕೊಂಡು ಕಳ್ಳರನ್ನು ಜೈಲಿಗೆ ಕಳುಹಿಸುವ ಕಾರ್ಯ ಮಾಡಲಾಗಿದೆ ಎಂದು ಸಿಪಿಐ ವಿಕಾಸ ಲಮಾಣಿ ತಿಳಿಸಿದ್ದಾರೆ.

ಲಕ್ಷ್ಮೇಶ್ವರ ತಾಲೂಕಿನ ವಿವಿಧ ಭಾಗಗಳಲ್ಲಿ ಗಂಗಾಕಲ್ಯಾಣ ಯೋಜನೆ ಅಡಿಯಲ್ಲಿ ವಿದ್ಯುತ್‌ ಪಂಪ್‌ ಸೆಟ್‌ಗಳಿಗೆ ಬಳಸುತ್ತಿದ್ದ ಅಲುಮಿನಿಯಂ ತಂತಿಯನ್ನು ಕಳವು ಮಾಡುತ್ತಿದ್ದರು. ಕಳ್ಳರು ಲಕ್ಷ್ಮೇಶ್ವರ ತಾಲೂಕಿನ ಗೊಜನೂರ, ನಾರಾಯಣಪುರ ಹಾಗೂ ಸುಗ್ನಳ್ಳಿ ಗ್ರಾಮದ ಜಮೀನುಗಳಲ್ಲಿ ತಂತಿಯನ್ನು ಕಳವು ಮಾಡಿದ್ದಾರೆ. ಕಳ್ಳರನ್ನು ಹೂವಿನಶಿಗ್ಲಿ ಗ್ರಾಮದ ಮಂಜುನಾಥ ನಿಂಗಪ್ಪ ಶೆಟ್ಟಣ್ಣವರ, ಜಗದೀಶ ಹನಮಂತಪ್ಪ ಕನಕಮ್ಮನವರ ಹಾಗೂ ತಿಪ್ಪಣ್ಣ ಮಲಕಪ್ಪ ಕಾಳೆ ಎಂದು ಗುರುತಿಸಲಾಗಿದೆ. ಕಳ್ಳರು 900 ಕೆಜಿ ವಿದ್ಯುತ್‌ ತಂತಿಯನ್ನು ಕಳವು ಮಾಡಿದ್ದು, ವಿದ್ಯುತ್‌ ತಂತಿಯ ಮೌಲ್ಯವು ಸುಮಾರು . 2.47 ಸಾವಿರ ಎಂದು ಅಂದಾಜು ಮಾಡಿದ್ದಾರೆ.

Bengaluru: ಯುವತಿಯನ್ನು ಕಿಡ್ನಾಪ್ ಮಾಡಿದವರನ್ನು ರೆಡ್‌ ಹ್ಯಾಂಡ್ ಆಗಿ ಹಿಡಿದ ಕೇಂದ್ರ ಪಡೆ

ವಿದ್ಯುತ್‌ ತಂತಿ ಕಳುವಿನ ಮಾಹಿತಿ ಅರಿತ ಗದಗ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿಗಳು, ಡಿವೈಎಸ್‌ಪಿ ಹಾಗೂ ಸಿಪಿಐ ವಿಕಾಸ ಲಮಾಣಿ ಅವರ ಮಾರ್ಗದರ್ಶನದಲ್ಲಿ ಲಕ್ಷ್ಮೇಶ್ವರ ಪೊಲೀಸ್‌ ಠಾಣೆಯ ಪಿಎಸ್‌ಐ ಯೂಸುಫ್‌ ಜಮೂಲಾ, ವಿ.ಜಿ. ಪವಾರ ಅವರ ನೇತೃತ್ವದ ತಂಡವು ಎಎಸ್‌ಐ ಎನ್‌.ಎ. ಮೌಲ್ವಿ, ಟಿ.ಕೆ. ರಾಠೋಡ, ವೈ.ಎಸ್‌. ಕೂಬಿಹಾಳ ಸಿಬ್ಬಂದಿಗಳಾದ ಎಂ.ಎ. ಶೇಖ್‌, ಎಂ.ಡಿ. ಲಮಾಣಿ, ಬಿ.ಎಚ್‌.ಬಾರಕೇರ, ಡಿ.ಎಸ್‌. ನದಾಫ್‌, ಜಿ.ಆರ್‌. ಗ್ರಾಮಪುರೋಹಿತ್‌, ಎಚ್‌.ಐ. ಕಲ್ಲಣ್ಣವರ, ಎಂ.ಎಸ್‌. ಬಳ್ಳಾರಿ, ಎಸ್‌.ಎಫ್‌. ತಡಸಿ, ಮಂಜು ಲಮಾಣಿ, ಆರ್‌.ಎಚ್‌. ಮುಲ್ಲಾ, ಎಸ್‌.ಎಚ್‌. ರಾಮಗೇರಿ ಅವರು ಕಳ್ಳರನ್ನು ಟಾಟಾ ಏಸ್‌ ಜೊತೆಯಲ್ಲಿ ಮಾಲು ಸಮೇತ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.