Asianet Suvarna News Asianet Suvarna News

Bengaluru: ಯುವತಿಯನ್ನು ಕಿಡ್ನಾಪ್ ಮಾಡಿದವರನ್ನು ರೆಡ್‌ ಹ್ಯಾಂಡ್ ಆಗಿ ಹಿಡಿದ ಕೇಂದ್ರ ಪಡೆ

ಬೆಂಗಳೂರಿನಲ್ಲಿ ಯುವತಿಯನ್ನು ಕಿಡ್ನಾಪ್ ಮಾಡಲು ಯತ್ನಿಸಿದ ಆರೋಪಿಗಳನ್ನು ಕೇಂದ್ರ ಪಡೆ ರೆಡ್  ಹ್ಯಾಂಡ್ ಆಗಿ ಹಿಡಿದಿದೆ.

central force caught the accused who kidnapped girl in bengaluru Vidhana soudha metro gow
Author
First Published May 24, 2023, 10:45 PM IST

ಬೆಂಗಳೂರು (ಮೇ.24): ಬೆಂಗಳೂರಿನಲ್ಲಿ ಯುವತಿಯನ್ನು ಕಿಡ್ನಾಪ್ ಮಾಡಲು ಯತ್ನಿಸಿದ ಆರೋಪಿಗಳನ್ನು ಕೇಂದ್ರ ಪಡೆ ರೆಡ್  ಹ್ಯಾಂಡ್ ಆಗಿ ಹಿಡಿದಿದೆ. ವಿಧಾನಸೌದ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಬುಧವಾರ ಸಂಜೆ ಏಳು ಗಂಟೆಗೆ ಈ ಘಟನೆ ನಡೆದಿದ್ದು, ಸಮಾಜ ಕಲ್ಯಾಣ ಇಲಾಖೆಯಲ್ಲಿ ಕೆಲಸ ಮಾಡ್ತಿದ್ದ ಯುವತಿಯನ್ನ ಇಬ್ಬರು ಆರೋಪಿಗಳು ಕಿಡ್ನಾಪ್ ಮಾಡಲು ಯತ್ನಿಸಿದ್ದರು. ಕೆಲಸ ಮುಗಿಸಿಕೊಂಡು ಮನೆಗೆ ಹೋಗ್ತಿದ್ದ ಯುವತಿಯನ್ನು ಕಾರಿನಲ್ಲಿ ಫಾಲೋ ಮಾಡಿ ಕಿಡ್ನಾಪ್ ಮಾಡ್ತಿದ್ರು. ವಿಧಾನಸೌದ ಮೆಟ್ರೋ ನಿಲ್ದಾಣದ ಬಳಿ ಏಕಾ ಏಕಿ ಯುವತಿಯನ್ನ ಎಳೆದು ಕಾರಿನಲ್ಲಿ ಕೂರಿಸುತ್ತಿದ್ದರು. ಈ ವೇಳೆ ಅಲ್ಲೇ ಇದ್ದ ಕೆಎಸ್ ಐಎಸ್ ಎಫ್  ತಂಡ ಅಲರ್ಟ್ ಆಗಿ ಇಬ್ಬರನ್ನೂ ವಶಪಡೆದಿದೆ.  ಯುವತಿಯನ್ನ ರಕ್ಷಿಸಿ ಇಬ್ಬರೂ ಆರೋಪಿಗಳನ್ನ ಸಿಆರ್ ಪಿಎಫ್ ಪಡೆ ಹಿಡಿದಿದೆ.

ಕೆಎಸ್ ಐಎಸ್ ಎಫ್ ತಂಡ ಸದ್ಯ ಇಬ್ಬರನ್ನೂ ವಿಧಾನಸೌದ ಪೊಲೀಸರಿಗೆ ಒಪ್ಪಿಸಿದೆ. ಕೇಂದ್ರ ತಂಡದ  ಪಿಎಸ್ ಐ ನಾರಾಯಾಣ್ , ಪ್ರಶಾಂತ್  ನಾಗರಾಜ್ , ಸಿಬ್ಬಂದಿಯಿಂದ ಯುವತಿಯ ರಕ್ಷಣೆಯಾಗಿದೆ. ಇಬ್ಬರನ್ನೂ ವಶ ಪಡೆದಿರುವ ವಿಧಾನಸೌದ ಪೊಲೀಸರು ವಿಚಾರಣೆ  ನಡೆಸಿದಾಗ ಸತ್ಯಾಂಶ ಬಯಲಾಗಿದೆ.

Bus Accident: ರಾಮದುರ್ಗದಲ್ಲಿ ಕೆಎಸ್‌ಆರ್‌ಟಿಸಿ ಬಸ್ ಪಲ್ಟಿ, 7 ಜನ ಆಸ್ಪತ್ರೆಗೆ ದಾಖಲು

ಯುವತಿಯ ಸಂಬಂಧಿಕರಿಂದಲೇ ಈ ಕಿಡ್ನಾಪ್ ನಡೆದಿದೆ.  ಕಳೆದ ಕೆಲ ತಿಂಗಳ ಹಿಂದೆ ಯುವತಿಯ ತಂದೆ ತೀರಿಕೊಂಡಿದ್ದರು. ಹೀಗಾಗಿ
ತಂದೆಯ ಎಫ್‌ಡಿಎ ಕೆಲಸ ಮಗಳಿಗೆ ಬಂದಿತ್ತು. ಈ ವಿಚಾರಕ್ಕೆ ಯುವತಿಯ ಮೇಲೆ  ಸಂಬಂಧಿ ಕಣ್ಣಿಟ್ಟಿದ್ದ. ಈತ ಯುವತಿಯ ತಂದೆಯ ಎರಡನೇ ಪತ್ನಿಯ ತಮ್ಮ ಎಂದು ಮಾಹಿತಿ ಲಭ್ಯವಾಗಿದೆ. ಎಫ್ ಡಿಎ ಕೆಲಸ ತನ್ನ ಅಕ್ಕನಿಗೆ (ಯುವತಿ ಚಿಕ್ಕಮ್ಮ) ಬರಬೇಕಿತ್ತು ಎಂದು ಖ್ಯಾತೆ ತೆಗೆದಿದ್ದ. ಅಲ್ಲದೇ ಯುವತಿಯನ್ನ ಮದುವೆಯಾಗೋದಕ್ಕೆ  ಆರೋಪಿ ಪ್ಲಾನ್ ಮಾಡಿಕೊಂಡಿದ್ದ. ಆದ್ರೆ ಯುವತಿಗೆ ಆರೋಪಿ ಜೊತೆ ಮದುವೆ ಇಷ್ಟ ಇರಲಿಲ್ಲ. ಹೀಗಾಗಿ ಇಂದು ಕಿಡ್ನಾಪ್ ಗೆ ಪ್ಲಾನ್ ಮಾಡಿಕೊಂಡಿದ್ದ.

ಪಿತ್ರಾರ್ಜಿತ ಆಸ್ತಿಗಾಗಿ ಸಿನಿಮೀಯ ರೀತಿಯಲ್ಲಿ ಮಚ್ಚು ಹಿಡಿದು ಅಟ್ಟಾಡಿಸಿ ಹಲ್ಲೆ!

ವಿಧಾನಸೌದ ಮೆಟ್ರೋ ಸ್ಟೇಷನ್ ಬಳಿ ಕಿಡ್ನಾಪ್ ಮಾಡಿದ್ದಾಗ, ಯವತಿ  ಜೋರಾಗಿ ಕಿರುಚುತ್ತಿದ್ದಳು. ಈ ವೇಳೆ ಸಿಬ್ಬಂದಿ ಅಲರ್ಟ್ ಆಗಿ ಕಾರು ಅಡ್ಡ ಹಾಕಿದ್ದಾರೆ. ಕೆಎಸ್ ಐಎಸ್ ಎಫ್ ( ಕರ್ನಾಟಕ ಸ್ಟೇಟ್ ಇಂಡಸ್ಟ್ರಿಯಲ್ ಸೆಕ್ಯೂರಿಟಿ ಫೋರ್ಸ್). ಕೂಡಲೇ ಆರೋಪಿಗಳನ್ನ ವಶಪಡೆದು ಪೊಲೀಸರಿಗೆ ಒಪ್ಪಿಸಿದ್ದಾರೆ.

Follow Us:
Download App:
  • android
  • ios