ಬೆಂಗಳೂರು (  ಡಿ. 03)  ಸ್ಯಾಂಡಲ್ ವುಡ್ ಡ್ರಗ್ಸ್ ಪ್ರಕರಣದಲ್ಲಿ ಜೈಲು ಸೇರಿರುವ ನಟಿ ರಾಗಿಣಿ ಇದೀಗ ಸುಪ್ರೀಂ ಕೋರ್ಟ್ ಮೊರೆ ಹೋಗಿದ್ದಾರೆ.    ಸುಪ್ರೀಂ  ಕೋರ್ಟ್ ನಲ್ಲಿ  ಅರ್ಜಿ ವಿಚಾರಣಗೆ ಬರಲಿದೆ.

ಕಳೆದ ಕೆಲ ತಿಂಗಳಿನಿಂದ ಸ್ಯಾಂಡಲ್ ವುಡ್ ಡ್ರಗ್ಸ್ ಪ್ರಕರಣದಲ್ಲಿ ನಟಿಮಣಿಯರು ಜೈಲು ಸೇರಿದ್ದಾರೆ.  ನ್ಯಾ. ಫಾಲಿ ನಾರಿಮನ್ ಅವರ ನೇತೃತ್ವದ ತ್ರಿಸದಸ್ಯ ಪೀಠದಲ್ಲಿ ವಿಚಾರಣೆ  ನಡೆಯಲಿದೆ. ನಶೆಡ ಕೇಸ್ ನಲ್ಲಿ ನಟಿಮಣಿ ವಿಚಾರಣೆ ಎದುರಿಸಲಿದ್ದಾರೆ.

ದೀಪಾವಳಿ ದಿನ ಜೈಲಿನಲ್ಲೆ ನಶೆ ರಾಣಿಯರ ಕಿರಿಕ್

ಸೆಪ್ಟೆಂಬರ್ ನಲ್ಲಿ ಡ್ರಗ್ಸ್ ಪ್ರಕರಣದಲ್ಲಿ ಬಂಧಿಯಾಗಿ ಪರಪ್ಪನ ಅಗ್ರಹರಾ ಜೈಲು ಸೇರಿದ್ದ ನಟಿ ರಾಗಿಣಿಗೆ ನವೆಂಬರ್​ 3ರಂದು ಹೈಕೋರ್ಟ್​ ಜಾಮೀನು  ನಿರಾಕರಿಸಿತ್ತು. ಸಧ್ಯ ಹೈಕೋರ್ಟ್ ತೀರ್ಪನ್ನು ಪ್ರಶ್ನಿಸಿ ರಾಗಿಣಿ ಸುಪ್ರೀಂ ಕೋರ್ಟ್ ಮೊರೆ ಹೋಗಿದ್ದು ಆ ಕುರಿತ ಅರ್ಜಿ ವಿಚಾರಣೆ ಡಿಸೆಂಬರ್ 4ರಂದು ನಡೆಯಲಿದೆ.  ರಾಗಿಣಿ ಪರ ವಕೀಲರು ಯಾವ ರೀತಿ ವಾದ ಮಂಡನೆ ಮಾಡಲಿದ್ದಾರೆ. ಇನ್ನು ಸಾಕ್ಷ್ಯ ನಾಶ ಮಾಡಲು ಸಾಧ್ಯವಿಲ್ಲ ಎಂದು ಹೇಗೆ ದಾಖಲೆ ಮಂಡಿಸಲಿದ್ದಾರೆ ಎಂಬುದನ್ನು ಕಾದು ನೋಡಬೇಕಿದೆ.

ಇನ್ನೊಬ್ಬ ನಟಿ ಸಂಜನಾ ಗಲ್ರಾನಿ ಸಹ ತಮಗೆ ಜಾಮೀನು ನೀಡುವಂತೆ ಮತ್ತೊಮ್ಮೆ ಹೈಕೋರ್ಟ್ ನಲ್ಲಿ ಅರ್ಜಿ ಸಲ್ಲಿಸಲು ಮುಂದಾಗಿದ್ದಾರೆ.  ಸಿಸಿಬಿ ಪ್ರಕರಣದ ವಿಚಾರಣೆ ನಡೆಸಿದ್ದು ಒಂದು  ಅನೇಕ ಸೆಬ್ರಿಟಿಗಳನ್ನು ವಿಚಾರಣೆಗೆ ಒಳಪಡಿಸಿವೆ.