ಪತ್ನಿಯೊಂದಿಗೆ ಜಗಳ: ಕಂದನನ್ನು ಬಾಲ್ಕನಿಯಿಂದ ಕೆಳಗೆಸೆದು ತಾನು ಹಾರಿದ
ತ್ನಿಯೊಂದಿಗೆ ಜಗಳವಾಡಿ ವ್ಯಕ್ತಿಯೊಬ್ಬ ತನ್ನ ಎರಡು ವರ್ಷದ ಕಂದನನ್ನು ಮೂರು ಮಹಡಿಯ ಕಟ್ಟಡದ ಬಾಲ್ಕನಿಯಿಂದ ಕೆಳಗೆ ಎಸೆದು ತಾನು ಕೆಳಗೆ ಹಾರಿದ ಆಘಾತಕಾರಿ ಘಟನೆ ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ನಡೆದಿದೆ. ಅಪ್ಪ ಮಗ ಇಬ್ಬರ ಸ್ಥಿತಿ ಗಂಭೀರವಾಗಿದ್ದು, ಇಬ್ಬರನ್ನು ಭಾರತೀಯ ವಿಜ್ಞಾನ ಸಂಸ್ಥೆಯ ಆಸ್ಪತ್ರೆಗೆ (AIIMS) ದಾಖಲಿಸಲಾಗಿದೆ.
ದೆಹಲಿ: ಪತ್ನಿಯೊಂದಿಗೆ ಜಗಳವಾಡಿ ವ್ಯಕ್ತಿಯೊಬ್ಬ ತನ್ನ ಎರಡು ವರ್ಷದ ಕಂದನನ್ನು ಮೂರು ಮಹಡಿಯ ಕಟ್ಟಡದ ಬಾಲ್ಕನಿಯಿಂದ ಕೆಳಗೆ ಎಸೆದು ತಾನು ಕೆಳಗೆ ಹಾರಿದ ಆಘಾತಕಾರಿ ಘಟನೆ ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ನಡೆದಿದೆ. ಅಪ್ಪ ಮಗ ಇಬ್ಬರ ಸ್ಥಿತಿ ಗಂಭೀರವಾಗಿದ್ದು, ಇಬ್ಬರನ್ನು ಭಾರತೀಯ ವಿಜ್ಞಾನ ಸಂಸ್ಥೆಯ ಆಸ್ಪತ್ರೆಗೆ (AIIMS) ದಾಖಲಿಸಲಾಗಿದೆ.
ನವದೆಹಲಿಯ (New delhi) ಕಲ್ಕಜಿ (Kalkaji) ಬಳಿ ಇರುವ ಸ್ಲಮ್‌ನಲ್ಲಿ (slum) ಈ ಘಟನೆ ನಡೆದಿದೆ. ಕೌಟುಂಬಿಕ ಕಲಹದಿಂದಾಗಿ ಪತಿ ಮಾನ್ ಸಿಂಗ್ (Man Singh) ಹಾಗೂ ಆತನ ಪತ್ನಿ ಪೂಜಾ (Puja) ಕೆಲವು ತಿಂಗಳಿಂದ ಪ್ರತ್ಯೇಕವಾಗಿ ಜೀವನ ನಡೆಸುತ್ತಿದ್ದರು. ಮಾನ್ ಸಿಂಗ್ ತನ್ನ ಮನೆಯಲ್ಲೇ ಇದ್ದರೆ, ಪತ್ನಿ ಪೂಜಾ ತನ್ನಿಬ್ಬರು ಮಕ್ಕಳನ್ನು ತೆಗೆದುಕೊಂಡು ತನ್ನ ಅಜ್ಜಿ (Grand mother house) ಮನೆ ಸೇರಿಕೊಂಡಿದ್ದಳು. ಮೊನ್ನೆ ರಾತ್ರಿ ಅಲ್ಲಿಗೆ ಬಂದ ಮಾನ್ ಸಿಂಗ್ ಪತ್ನಿಯೊಂದಿಗೆ ಜಗಳ ಶುರು ಮಾಡಿದ್ದಾನೆ. ದಂಪತಿ ನಡುವಿನ ಜಗಳ ವಿಕೋಪಕ್ಕೆ ಹೋಗಿದ್ದು, ಪತ್ನಿ ವಿರುದ್ಧ ಸೇಡು ತೀರಿಸಿಕೊಳ್ಳಲು ಮುಂದಾದ ಪತಿ ತನ್ನ ಎರಡು ವರ್ಷದ ಕಂದನನ್ನು 21 ಅಡಿ ಎತ್ತರದಿಂದ ಕೆಳಕ್ಕೆಸೆದಿದ್ದಾನೆ. ನಂತರ ತಾನೂ ಕೂಡ ಕೆಳಗೆ ಹಾರಿದ್ದಾನೆ.
21 ರ ಹುಡುಗಿ ಮೇಲೆ ಆಸೆ: ಗರ್ಭಿಣಿ ಪತ್ನಿಗೆ ಹೆಚ್‌ಐವಿ ರಕ್ತ ಇಂಜೆಕ್ಟ್ ಮಾಡಿಸಿದ ಪಾಪಿ ಪತಿ
ಮಾನ್ ಸಿಂಗ್ (Man Singh) ಬರುವಾಗಲೇ ಮದ್ಯ ಸೇವಿಸಿ ಬಂದಿದ್ದ, ಕುಡಿತದ ಅಮಲಿನಲ್ಲಿದ್ದ ಆತ ಈ ಭೀಕರ ಕೃತ್ಯವೆಸಗಿ ತಾನು ಮಹಡಿಯಿಂದ ಕೆಳಗೆ ಹಾರಿದ್ದಾನೆ. ಆತನ ವಿರುದ್ಧ ಪೊಲೀಸರು ಕೊಲೆ ಯತ್ನ ಪ್ರಕರಣ ದಾಖಲಿಸಿದ್ದಾರೆ. ಒಟ್ಟಿನಲ್ಲಿ ದಂಪತಿ ಜಗಳದಲ್ಲಿ ಕೂಸು ಬಡವಾಯ್ತು ಎಂಬಂತೆ ಎರಡು ವರ್ಷದ ಕಂದ ಏನು ಮಾಡದ ತಪ್ಪಿಗೆ ಶಿಕ್ಷೆ ಅನುಭವಿಸುವಂತಾಗಿದೆ.
Yadagiri Crime: ಹತ್ತಿ ಹೊಲದಲ್ಲಿ ಮೈ ಮರೆತಿದ್ದ ಜೋಡಿಯನ್ನು ಕೊಡಲಿಯಿಂದ ಕತ್ತರಿಸಿ ಕೊಂದ ಪತಿ