ಹೆಂಡತಿ..ಕಾಡುತಿ.. ಪತ್ನಿ ಕಿರುಕುಳಕ್ಕೆ 21 ಕೆಜಿ ಕಳಕೊಂಡವನಿಗೆ ಕೊನೆಗೂ ಡಿವೋರ್ಸ್ ಸಿಕ್ತು!
* ಹೆಂಡತಿ ಯಾಕೆ ಹಿಂಗೆ ಕಾಡುತಿ!
* ಹೆಂಡತಿಯ ಕಿರುಕುಳಕ್ಕೆ 21 ಕೆಜಿ ತೂಕ ಕಳೆದುಕೊಂಡ
* ಹೈಕೋರ್ಟ್ ನಿಂದ ಕೊನೆಗೂ ಸಿಕ್ಕಿತು ವಿಚ್ಛೇದನ
* ಮಹಿಳೆಯಿಂದ ವರದಕ್ಚಿಣೆ ಆರೋಪ ನಿರಾಧಾರ
ಪಂಜಾಬ್(ಸೆ. 09) ಹೆಂಡತಿ ಯಾಕೆ ಹೀಗೆ ಕಾಡುತಿ ಎನ್ನುವ ಹಳೆ ಮಾತೊಂದಿದೆ. ಅದಕ್ಕೆ ಈ ಘಟನೆ ತಕ್ಕ ಉದಾಹರಣೆಯಂತಿದೆ.
ಈತನ ಪರಿಸ್ಥಿತಿ ನೋಡಿ ಪಂಜಾಬ್ ಮತ್ತು ಹರ್ಯಾಣ ಹೈಕೋರ್ಟ್ ಮರು ಮಾತನಾಡದೆ ಡೀವೋರ್ಸ್ ನೀಡಿದೆ. ಹಿಸ್ಸಾರ್ ಕೌಟಂಬಿಕ ನ್ಯಾಯಾಲಯದ ಆದೇಶವನ್ನು ವ್ಯಕ್ತಿ ಪ್ರಶ್ನೆ ಮಾಡಿದ್ದರು. ಅಷ್ಟಕ್ಕೂ ಏನಾಗಿತ್ತು?
ಬೇರೆಯಾದ ಅಮೀರ್-ಕಿರಣ್ ಲವ್ ಸ್ಟೋರಿ ಹೇಗಿತ್ತು?
ಹೆಂಡತಿಯಿಂದ ನಿರಂತರ ಮಾನಸಿಕ ಹಿಂಸೆ ಆಗುತ್ತಿದೆ ಎಂದು ವ್ಯಕ್ತಿ ವಿಚ್ಛೇದನಕ್ಕೆ ಅರ್ಜಿ ಹಾಕಿದ್ದ. ಹೆಂಡತಿ ಕಾಟದಿಂದ 74 ಕೆಜಿಯಿಂದ 53 ಕೆಜಿಗೆ ಇಳಿದಿದ್ದೇನೆ. ದಿನೇ ದಿನೇ ಹೈರಾಣವಾಗಿದ್ದು 21 ಕೆಜಿ ಕಳೆದುಕೊಂಡಿದ್ದೇನೆ. ಸಿಕ್ಕಾಪಟ್ಟೆ ಸಿಟ್ಟು ಮಾಡಿಕೊಳ್ಳುತ್ತಾಳೆ ಆಕೆಯ ಜತೆ ಇನ್ನು ಮುಂದೆ ಜೀವನ ಮಾಡಲು ಸಾಧ್ಯವಿಲ್ಲ. ವಿಚ್ಚೇದನ ನೀಡಿ ಎಂದು ಕೇಳಿಕೊಂಡಿದ್ದ. ಚಿಕ್ಕ ಪುಟ್ಟ ವಿಚಾರಕ್ಕೆ ಕ್ಯಾತೆ ತೆಗೆದು ಎಲ್ಲರ ಮುಂದೆ ಮುಜುಗರ ತರುತ್ತಾಳೆ ಎಂದು ಆರೋಪಿಸಿದ್ದ.
ಆದರೆ ಈ ಎಲ್ಲ ಆರೋಪಗಳನ್ನು ತಳ್ಳಿಹಾಕಿದ್ದ ಮಹಿಳೆ, ಗಂಡ ಮತ್ತು ಆತನ ಕುಟುಂಬಸ್ಥರು ವರದಕ್ಷಿಣೆ ಕಿರುಕುಳ ನೀಡುತ್ತಿದ್ದಾರೆ ಎಂದು ಆರೋಪಿಸಿದ್ದಳು. ಆದರೆ ವಿಚಾರಣೆ ವೇಳೆ ಮಹಿಳೆಯ ಎಲ್ಲ ಆರೋಪಗಳು ನಿರಾಧಾರ ಎನ್ನುವುದು ಗೊತ್ತಾಗಿದೆ. ವರದಕ್ಷಿಣೆ ಕೇಳುವ ಬದಲು ಗಂಡನ ಕುಟುಂಬದವರು ಮಹಿಳೆಯ ಹೆಚ್ಚಿನ ವಿದ್ಯಾಭ್ಯಾಸಕ್ಕೂ ನೆರವು ನೀಡಿದ್ದರು ಎಂಬ ಮಾಹಿತಿ ಗೊತ್ತಾಗಿದೆ. ನ್ಯಾಯಮೂರ್ತಿಗಳಾದ ರಿತು ಬಹ್ರಿ, ಅರ್ಚನಾ ಪುರಿ ಮಹಿಳೆಯ ಆರೋಪ ವಜಾ ಮಾಡಿ ತಕ್ಷಣವೇ ವಿಚ್ಛೇದನಕ್ಕೆ ಅನುಮತಿ ನೀಡಿದರು.