ಅಶ್ಲೀಲ ಗೋಡೆಬರಹ ಬರೆದು ಶಿಕ್ಷಕಿಗೆ ಚಾರಿತ್ರ್ಯವಧೆ ಮಾಡಿದ್ದ ಸಹಶಿಕ್ಷಕ ನಿಸ್ಸಾರ ಅಹ್ಮದ್‌ಗೆ ಜೈಲೂಟ

 ತಾಲೂಕಿನ ಹೆಡಿಯಾಲ ಗ್ರಾಮದ ಉರ್ದು ಶಾಲೆಯ ಶಿಕ್ಷಕಿಗೆ ಚಾರಿತ್ರ್ಯವಧೆ ಮಾಡಿದ ಆರೋಪಿ ಸಹೋದ್ಯೋಗಿ ಶಿಕ್ಷಕನಿಗೆ ಸ್ಥಳೀಯ ಜೆಎಂಎಫ್‌ಸಿ ನ್ಯಾಯಾಲಯದ ನ್ಯಾಯಾಧೀಶರು ಬುಧವಾರ ದಂಡ ಮತ್ತು ಶಿಕ್ಷೆ ವಿಧಿಸಿ ತೀರ್ಪು ನೀಡಿದ್ದಾರೆ.

Punishment for the person who mentally harassed the teacher at haveri rav

ರಾಣಿಬೆನ್ನೂರು (ಫೆ.23) : ತಾಲೂಕಿನ ಹೆಡಿಯಾಲ ಗ್ರಾಮದ ಉರ್ದು ಶಾಲೆಯ ಶಿಕ್ಷಕಿಗೆ ಚಾರಿತ್ರ್ಯವಧೆ ಮಾಡಿದ ಆರೋಪಿ ಸಹೋದ್ಯೋಗಿ ಶಿಕ್ಷಕನಿಗೆ ಸ್ಥಳೀಯ ಜೆಎಂಎಫ್‌ಸಿ ನ್ಯಾಯಾಲಯದ ನ್ಯಾಯಾಧೀಶರು ಬುಧವಾರ ದಂಡ ಮತ್ತು ಶಿಕ್ಷೆ ವಿಧಿಸಿ ತೀರ್ಪು ನೀಡಿದ್ದಾರೆ.

ನಿಸ್ಸಾರ್‌ಅಹಮ್ಮದ್‌ ಅಲ್ಲಾಭಕ್ಷಸಾಬ್‌ ಬಣಕಾರ(Nissar Ahmad Allahbakhsaab was a banker) ಆರೋಪಿ ಶಿಕ್ಷಕ. ಆರೋಪಿಯು ತನ್ನ ಶಾಲೆಯ ಸಹೋದ್ಯೋಗಿ ಶಿಕ್ಷಕಿಗೆ ಮಾನಸಿಕ ಕಿರಕುಳ(Mental harassment) ನೀಡುವ ದುರುದ್ದೇಶದಿಂದ ಹೆಡಿಯಾಲ ಉರ್ದು ಶಾಲೆ(Hediala Urdu School)ಯ ಕನ್ನಡ ಶಿಕ್ಷಕನಿಂದ ಉರ್ದು ಶಿಕ್ಷಕಿ ಮೇಲೆ ಅತ್ಯಾಚಾರ ನಡೆದಿದೆ ಎಂಬ ಬರವಣಿಗೆಯನ್ನು ತಾಲೂಕಿನ ಎಲ್ಲ ಉರ್ದು ಶಾಲೆಗಳಿಗೆ ಪೊಸ್ಟ್‌ ಮುಖಾಂತರ ಕಳುಹಿಸಿದ್ದರು.

ಕೊಪ್ಪಳ: ಹಾಸ್ಟೆಲ್‌ ವಿದ್ಯಾರ್ಥಿನಿಯರಿಗೆ ಸ್ಯಾನಿಟರಿ ಪ್ಯಾಡ್‌ಗೂ ತತ್ವಾರ!

ಪ್ರಕರಣದ ವಿಚಾರಣೆ ನಡೆಸಿದ ಸ್ಥಳೀಯ ಜೆಎಂಎಫ್‌ಸಿ ನ್ಯಾಯಾಲಯ(JMFC Court)ದ ನ್ಯಾಯಾಧೀಶ ಬಿ. ಸಿದ್ಧರಾಜು ಆರೋಪಿಗೆ . 10 ಸಾವಿರ ದಂಡ ಮತ್ತು ಆರು ತಿಂಗಳು ಸಾದಾ ಜೈಲು ಶಿಕ್ಷೆ ವಿಧಿಸಿ ತೀರ್ಪು ನೀಡಿದ್ದಾರೆ. ಈ ಪ್ರಕರಣದಲ್ಲಿ ಸರ್ಕಾರದ ಪರವಾಗಿ ಸಹಾಯಕ ಸರ್ಕಾರಿ ಅಭಿಯೋಜಕಿ ಮಧುಮತಿ ಸಿದ್ನೂರಕರ ವಾದ ಮಂಡಿಸಿದ್ದರು.

ಲೈಂಗಿಕ ದೌರ್ಜನ್ಯ ಎಸಗಿದ ಆರೋಪಿಗೆ ಶಿಕ್ಷೆ

ಹಾವೇರಿ: ಅಪ್ರಾಪ್ತ ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪಿಗೆ 10 ವರ್ಷ ಕಠಿಣ ಕಾರಾವಾಸ ಶಿಕ್ಷೆ ಹಾಗೂ . 1.11 ಲಕ್ಷ ದಂಡ ವಿಧಿಸಿ ಹಾವೇರಿಯ ವಿಶೇಷ ಸತ್ರ ನ್ಯಾಯಾಲಯದ (ಶೀಘ್ರಗತಿ ನ್ಯಾಯಾಲಯ-1) ನ್ಯಾಯಾಧೀಶ ನಿಂಗೌಡ ಪಾಟೀಲ ತೀರ್ಪು ನೀಡಿದ್ದಾರೆ.

ಅಪ್ರಾಪ್ತರಿಗೆ 'ಬಾ ಬಾ' ಎಂದು ಕರೆಯುವುದು ಲೈಂಗಿಕ ಕಿರುಕುಳ: ನ್ಯಾಯಾಲಯ

ಮಧು ದೇವರಾಜ ಹಳೇಮನಿ(Madhu devaraj halemani) ಶಿಕ್ಷೆಗೊಳಗಾದ ವ್ಯಕ್ತಿ. ಅಲ್ಪವಯಿ ಬಾಲಕಿಯನ್ನು ಅಪಹರಿಸಿಕೊಂಡು ಬೆಂಗಳೂರಿಗೆ ಹೋಗಿ, ಸಂಬಂಧಿಕರ ಮನೆಯಲ್ಲಿ ಬಾಲಕಿಯ ಇಚ್ಛೆಗೆ ವಿರುದ್ಧವಾಗಿ ಲೈಂಗಿಕ ದೌರ್ಜನ್ಯ ಎಸಗಿದ ಕುರಿತು ಹಂಸಭಾವಿ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಿಸಲಾಗಿತ್ತು. ಹಂಸಭಾವಿ ವೃತ್ತದ ತನಿಖಾಧಿಕಾರಿ ಸಿಪಿಐ ಮಂಜುನಾಥ ಪಂಡಿತ ದೋಷಾರೋಪಣಾ ಪತ್ರವನ್ನು ನ್ಯಾಯಾಲಯಕ್ಕೆ ಸಲ್ಲಿಸಿದ್ದರು. ಆರೋಪಿತ ಮಧು ದೇವರಾಜ ಹಳೇಮನಿ ಮೇಲೆ ಹೊರಿಸಲಾದ ಆಪಾದನೆಗಳು ರುಜುವಾತಾದ ಹಿನ್ನಲೆಯಲ್ಲಿ ಆರೋಪಿಗೆ ನ್ಯಾಯಾಧೀಶರು 10 ವರ್ಷ ಕಠಿಣ ಕಾರಾವಾಸ ಶಿಕ್ಷೆ ಹಾಗೂ ದಂಡ ವಿಧಿಸಿ ತೀರ್ಪು ನೀಡಿದ್ದಾರೆ. ದಂಡದ ಹಣದಲ್ಲಿ ಸಂತ್ರಸ್ತ ಬಾಲಕಿಗೆ . 1 ಲಕ್ಷ ಪರಿಹಾರ ಹಾಗೂ ನೊಂದವರ ಪರಿಹಾರ ನಿಧಿ ಯೋಜನೆಯಡಿ ಇರುವ ಪರಿಹಾರ ನಿಧಿಯಿಂದ ಕರ್ನಾಟಕ ಸರ್ಕಾರವು ನೊಂದ ಬಾಲಕಿಗೆ . 4 ಲಕ್ಷ ಪರಿಹಾರ ನೀಡಬೇಕೆಂದು ಆದೇಶ ಮಾಡಿ ತೀರ್ಪು ನೀಡಿದ್ದಾರೆ. ಸರ್ಕಾರದ ಪರವಾಗಿ ಸರ್ಕಾರಿ ಅಭಿಯೋಜಕ ವಿಜಯಕುಮಾರ ಎಸ್‌. ಪಾಟೀಲ ವಾದ ಮಂಡಿಸಿರುವುದಾಗಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Latest Videos
Follow Us:
Download App:
  • android
  • ios