ಶಿರಸಿ: ದ್ವಿತೀಯ ಪಿಯುಸಿ ಪರೀಕ್ಷೆ ರದ್ದು, ಮನನೊಂದು ವಿದ್ಯಾರ್ಥಿನಿ ಆತ್ಮಹತ್ಯೆ

* ಉತ್ತರ ಕನ್ನಡ ಜಿಲ್ಲೆಯ ಶಿರಸಿ ನಗರದಲ್ಲಿ ನಡೆದ ಘಟನೆ
* ಕಾಲೇಜಿಗೆ ಪ್ರಥಮ ರ‍್ಯಾಂಕ್ ಬರಬೇಕೆಂಬ ಆಸೆ ಹೊತ್ತಿದ್ದ ಧನ್ಯ ಆಚಾರಿ 
* ವರ್ಷಪೂರ್ತಿ ಓದಿರೋದು ವ್ಯರ್ಥವಾಯ್ತು ಎಂಬುದನ್ನು ಮನಸ್ಸಿಗೆ ಹಚ್ಕೊಂಡಿದ್ದ ವಿದ್ಯಾರ್ಥಿನಿ

PUC Student Comiited Suicide due to Cancelation of Exam at Sirsi in Uttara Kannada grg

ಕಾರವಾರ(ಜೂ.13): ದ್ವಿತೀಯ ಪಿಯುಸಿ ಅಂತಿಮ ಪರೀಕ್ಷೆ ರದ್ದಾದ ಹಿನ್ನೆಲೆಯಲ್ಲಿ ಮನನೊಂದು ವಿದ್ಯಾರ್ಥಿನಿಯೊಬ್ಬಳು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಉತ್ತರ ಕನ್ನಡ ಜಿಲ್ಲೆಯಶಿರಸಿ ತಾಲೂಕಿನ ಯಡಳ್ಳಿ ಸಮೀಪದ‌ ಸಹಸ್ರಳ್ಳಿಯಲ್ಲಿ ನಿನ್ನೆ(ಶನಿವಾರ) ನಡೆದಿದೆ.

ಧನ್ಯ ಆಚಾರಿ (18) ಆತ್ಮಹತ್ಯೆಗೆ ಶರಣಾದ ವಿದ್ಯಾರ್ಥಿನಿಯಾಗಿದ್ದಾಳೆ. ವರ್ಷಪೂರ್ತಿ ಓದಿರೋದು ವ್ಯರ್ಥವಾಯ್ತು ಎಂಬುದನ್ನು ಮನಸ್ಸಿಗೆ ಹಚ್ಕೊಂಡು ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂಬ ಶಂಕೆ ವ್ಯಕ್ತವಾಗಿದೆ. ಮೃತ ಧನ್ಯ ಆಚಾರಿ ಶಿರಸಿ ನಗರದ ಮಾರಿಕಾಂಬಾ ಕಾಲೇಜಿನಲ್ಲಿ ದ್ವಿತೀಯ ಪಿಯುಸಿ ವಿಜ್ಞಾನ ವಿಭಾಗದಲ್ಲಿ ಅಧ್ಯಯನ ಮಾಡುತ್ತಿದ್ದಳು ಎಂದು ತಿಳಿದು ಬಂದಿದೆ. 

ಶಿರಸಿ-ಸಿದ್ದಾಪುರ; ಪ್ರಿಯಕರನ ನಿರ್ಲಕ್ಷ್ಯ, ಯುವತಿ ಆತ್ಮಹತ್ಯೆ

ಧನ್ಯ ಆಚಾರಿ ಕಾಲೇಜಿಗೆ ಪ್ರಥಮ ರ‍್ಯಾಂಕ್ ಬರಬೇಕೆಂಬ ಆಸೆ ಹೊತ್ತಿದ್ದಳು. ಪರೀಕ್ಷೆ ರದ್ದಾಗಿ ಪ್ರಥಮ ಪಿಯು ಆಧಾರದ ಮೇಲೆ ಅಂಕ‌ ನೀಡುವ ಘೋಷಣೆಯಿಂದ ಚಿಂತೆಗೀಡಾಗಿದ್ದಳು. ಪರೀಕ್ಷೆ ರದ್ದಾದ ಕಾರಣ ನೋವಿನಿಂದ ಯುವತಿ ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂದು ಹೇಳಲಾಗುತ್ತಿದೆ. ಈ ಸಂಬಂಧ ಶಿರಸಿ ಗ್ರಾಮಿಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 
 

Latest Videos
Follow Us:
Download App:
  • android
  • ios