Asianet Suvarna News Asianet Suvarna News

Road Accident: ಡಿವೈಡರ್ ದಾಟಿ ಬಂದಪ್ಪಳಿಸಿದ ಬಸ್, ಬೈಕ್‌ ಸವಾರ ದುರ್ಮರಣ

*‌ ಬೆಂಗಳೂರಿನಲ್ಲಿ  ಮತ್ತೊಂದು ರಸ್ತೆ  ಅಪಘಾತ
* ಡಿವೈಡರ್ ದಾಟಿ ಹಾರಿ ಬಂದ ಬಸ್ ಬೈಕ್ ಗೆ ಡಿಕ್ಕಿ ಸವಾರ ಸಾವು
* ಸಾಮೂಹಿಕ ಆಥ್ಮಹತ್ಯೆ ಪ್ರಕರಣ ವಿಚಾರಣೆ ಪೂರ್ಣ
* ಮಗುವನ್ನು ಕೊಲೆ ಮಾಡಿ ತಂದೆ ಸುಸೈಡ್

Private bus fatally runs over bike rider Bengaluru mah
Author
Bengaluru, First Published Dec 14, 2021, 12:58 AM IST | Last Updated Dec 14, 2021, 12:58 AM IST

ಬೆಂಗಳೂರು(ಡಿ. 14) ‌ಬೆಂಗಳೂರಿನಲ್ಲಿ (Bengaluru) ಮತ್ತೊಂದು ರಸ್ತೆ ಅವಘಡ ಸಂಭವಿಸಿದೆ. ಡಿವೈಡರ್ ದಾಟಿ ಹಾರಿ ಬಂದ ಬಸ್ ಬೈಕ್ ಗೆ (Private Bus)ಡಿಕ್ಕಿ ಹೊಡೆದ ಪರಿಣಾಮ ಸವಾರ ಸಾವನಪ್ಪಿದ್ದಾನೆ. ಯಲಹಂಕ ನಿವಾಸಿ ನಿಖಿಲ್ (22) ಮೃತ ಬೈಕ್ ಸವಾರ. ಏರ್ಪೋರ್ಟ್ ರಸ್ತೆಯ ಫ್ಲೈಓವರ್ ನಲ್ಲಿ‌ ಅಪಘಾತ ಸಂಭವಿಸಿದೆ.

ಜಿಟಿ ಜಿಟಿ ಮಳೆ (Rain) ನಡುವೆ ವೇಗವಾಗಿ ದೇವನಹಳ್ಳಿ ಕಡೆಯಿಂದ ಬರುತಿದ್ದ ಖಾಸಗಿ ಬಸ್  ನಿಯಂತ್ರಣ ತಪ್ಪಿ ಡಿವೈಡರ್ ಗೆ ಡಿಕ್ಕಿಯಾಗಿದೆ. ಬಳಿಕ ಡಿವೈಡರ್ ಹಾರಿ ಮುಂದೆ ಸಾಗುತಿದ್ದ ಬೈಕ್ ಗೆ ಡಿಕ್ಕಿಯಾಗಿದೆ.  ಬ್ಯಾಟರಾಯನಪುರದ ಬಳಿ ಘಟನೆ ನಡೆದಿದೆ. ಘಟನೆ ಸಂಬಂಧ ಹೆಬ್ಬಾಳ ಸಂಚಾರಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಬಸ್ ಚಾಲಕ ನಾಪತ್ತೆಯಾಗಿದ್ದಾನೆ.

ಮಗು ಕೊಂದು ಸುಸೈಡ್:  10 ವರ್ಷದ ಮಗುವನ್ನ ಸಂಪಿಗೆ ಬಿಸಾಡಿ ಕೊಲೆ ಮಾಡಿದ್ದ ತಂದೆ ತಾನು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಎಸ್ ಆರ್ ನಗರದ ನಿವಾಸಿ ಸುರೇಶ್ ವಿರುದ್ಧ ಪೊಲೀಸರೇ ದೂರು ದಾಖಲಿಸಿಕೊಂಡಿದ್ದರು. ಮಗುವನ್ನ ಸಂಪಿಗೆ ಬಿಸಾಡಿ ಸುರೇಶ್  ಕಣ್ಮರೆಯಾಗಿದ್ದ. 10 ವರ್ಷದ ಮಗುವಿಗೆ ಮಾತು ಬಾರದೆ, ಕಿವಿಯೂ ಸಹ ಕೇಳುತ್ತಿರಲಿಲ್ಲ ಈ ಹಿನ್ನೆಲೆ ಮನನೊಂದಿದ್ದ ಸುರೇಶ್ ಇಂಥ ಕೃತ್ಯ ಮಾಡಿದ್ದ.

Horrific : ಮೈಸೂರು, ಬಿಸಿ ನೀರಿಗೆ ಬಿದ್ದು ದಾರುಣ ಸಾವು ಕಂಡ ಕಂದಮ್ಮ

ಇದೇ ವಿಷಯವಾಗಿ ಮನೆಯಲ್ಲಿ ಆಗಾಗ ಗಲಾಟೆ ಕೂಡಾ ಮಾಡುತ್ತಿದ್ದ. ಪತ್ನಿ ಜತೆಗೆ ಜಗಳ ತೆಗೆದಿದ್ದಾನೆ. ನಂತರ ಮಗುವನ್ನು ಸಂಪಿಗೆ ಬಿಸಾಡಿ ನಾಪತ್ತೆಯಾಗಿದ್ದ. ಸಂಜೆ ವೇಳೆ ಶೇಷಾದ್ರರಿಪುರಂ ಪೊಲೀಸರಿಂದ ಕರೆ ಬಂದಿದ್ದು ಶವ ಸಿಕ್ಕಿದೆ ಎಂದಿದ್ದಾರೆ.ಸ್ಥಳಕ್ಕೆ ಹೋಗಿ ನೋಡಿದಾಗ ಅದು ಸುರೇಶ್ ಶವ ಎಂಬುದು ಗೊತ್ತಾಗಿದೆ. ಬುದ್ಧಿಮಾಂದ್ಯ ಮಗು ಎನ್ನುವ ಕಾರಣಕ್ಕೆ ಹೆತ್ತ ಕಂದಮ್ಮನನ್ನೇ ಕೊಲೆ ಮಾಡಿದ್ದ  ಪಾಪಿ ತಂದೆ ತಾನು ಸಾವು ತಂದುಕೊಂಡಿದ್ದಾನೆ. 

ಪೂರ್ಣವಾದ ತನಿಖೆ:  ಬ್ಯಾಡರಹಳ್ಳಿ ಶಂಕರ್ ಕುಟುಂಬದ  ಆತ್ಮಹತ್ಯೆ ಪ್ರಕರಣ ತನಿಖೆಯನ್ನು ಪೊಲೀಸರು ಮುಕ್ತಾಯ ಮಾಡಿದ್ದಾರೆ.  ಘಟನೆಯ ದೋಷಾರೋಪಣ ಪಟ್ಟಿ ಕೋರ್ಟ್ ಗೆ ಸಲ್ಲಿಕೆ ಮಾಖಡಲಾಗಿದೆ.  ನ್ಯಾಯಾಲಯಕ್ಕೆ ಸುಮಾರು 400 ಪುಟದ ಚಾರ್ಜ್​​ಶೀಟ್ ಸಲ್ಲಿಕೆ  ಮಾಡಲಾಗಿದೆ.

ನ.17ರಂದು ಮಗುವನ್ನ ಕೊಂದು ಇಡೀ ಕುಟುಂಬ ಆತ್ಮಹತ್ಯೆಗೆ ಶರಣಾಗಿತ್ತು.  9 ತಿಂಗಳ ಮಗುವನ್ನ ಕೊಂದು ಆತ್ಮಹತ್ಯೆಗೆ ಶರಣಾಗಿದ್ದರು. ಭಾರತಿ, ಸಿಂಧು ರಾಣಿ, ಸಿಂಚನಾ, ಮಧುಸಾಗರ್ ಆತ್ಮಹತ್ಯೆ ಮಾಡಿಕೊಂಡಿದ್ದರು. ಆತ್ಮಹತ್ಯೆ ನಂತರ ಶಂಕರ್ ಅವರ ಮೇಲೆ ಆರೋಪ ಕೇಳಿ ಬಂದಿತ್ತು.

ಆತ್ಮಹತ್ಯೆ ಪ್ರಚೋದನೆ ಬಗ್ಗೆ ಪೊಲೀಸರು ಸಾಕ್ಷ್ಯ ಕಲೆಹಾಕಿದ್ದರು.  ಆಡಿಯೋ ಮತ್ತು ವಿಡಿಯೋಗಳ ಸಾಕ್ಷ್ಯಧಾರವನ್ನು ಸಲ್ಲಿಕೆ ಮಾಡಲಾಗಿದೆ.  ಮೃತ ಮಧು ಸಾಗರ್ ಬರೆದಿದ್ದ ಡೆತ್​ನೋಟ್ ಪ್ರಮುಖ ಸಾಕ್ಷ್ಯ​ವಾಗಿದೆ. ಮನೆ ಮಾಲೀಕ ಶಂಕರ್ ಬಗ್ಗೆ ಬರೆದಿದ್ದ ಡೆತ್ ನೋಟ್ ನಲ್ಲಿ ಅನೇಕ ವಿಚಾರಗಳು ಬಹಿರಂಗವಾಗಿದ್ದವು. ಈ ಎಲ್ಲ ಎಲ್ಲಾ ಮಾಹಿತಿಗಳನ್ನು ಪೊಲೀಸರು ನ್ಯಾಯಾಲಕ್ಕೆ ಸಲ್ಲಿಕೆ ಮಾಖಡಿದ್ದಾರೆ.

ಘಟನೆಯಲ್ಲಿ 9 ತಿಂಗಳ ಮಗುವಿನ ಸಾವು ದೊಡ್ಡ ಗೊಂದಲಕ್ಕೆ ಕಾರಣವಾಗಿತ್ತು. ಮಗುವಿನ ಸಾವಿನ ಕುರಿತು FSL ರಿಪೋರ್ಟ್ ನೀಡಿತ್ತು.  ಮಗುವಿನ ಸಾವು ಹಸಿವಿನಿಂದ ಅಲ್ಲ ಕೊಲೆ ಎಂದು ಕನ್ಫರ್ಮ್​​​ ಆಗಿದೆ.  ಆತ್ಮಹತ್ಯೆಗೆ ಪ್ರಚೋದನೆ ಅಡಿಯಲ್ಲಿ ಶಂಕರ್​​​ನನ್ನು ಬಂಧಿಸಲಾಗಿತ್ತು. 3 ಜನರ ಅರ್ಜಿಯನ್ನು  ಕೆಳ ನ್ಯಾಯಾಲಯ ವಜಾ ಮಾಡಿತ್ತು.  ಶಂಕರ್ ಹಾಗೂ ಅಳಿಯಂದಿರು ಹೈ ಕೋರ್ಟ್ ಮೆಟ್ಟಿಲು ಏರಿದ್ದಾರೆ. 

Latest Videos
Follow Us:
Download App:
  • android
  • ios