Asianet Suvarna News Asianet Suvarna News

Horrific : ಮೈಸೂರು, ಬಿಸಿ ನೀರಿಗೆ ಬಿದ್ದು ದಾರುಣ ಸಾವು ಕಂಡ ಕಂದಮ್ಮ

* ಇದಕ್ಕಿಂತ ಘೋರ ದುರಂತ ಇನ್ನೊಂದಿಲ್ಲ
* ಬಿಸಿನೀರಿಗೆ ಮುದ್ದು ಕಂದ ಬಲಿ! 
* ಮೈಸೂರಿನಲ್ಲೊಂದು ಹೃದಯವಿದ್ರಾವಕ ಘಟನೆ

Horrific Two year old falls into boiling water dies Mysuru mah
Author
Bengaluru, First Published Dec 13, 2021, 10:32 PM IST
  • Facebook
  • Twitter
  • Whatsapp

ಮೈಸೂರು(ಡಿ. 13) ಇದಕ್ಕಿಂತ ಘೋರ ದುರಂತ(Horrific Incident) ಇನ್ನೊಂದಿಲ್ಲ. ಬಿಸಿ ನೀರಿಗೆ(Hot Water) ಬಿದ್ದ ಮುದ್ದು ಮಗುವೊಂದು(Death) ಸಾವನ್ನಪ್ಪಿದ್ದು, ಕುಟುಂಬದ ಆಕ್ರಂದನ ಮುಗಿಲು ಮುಟ್ಟಿದೆ.  ದಾಸನಕೊಪ್ಪಲು (Mysuru)ನಿವಾಸಿಯಾದ ಪೋಟೊಗ್ರಾಫರ್ ರಾಮು ಅವರ 2 ವರ್ಷದ ಕಂದಮ್ಮ ದುರಂತ ಅಂತ್ಯ ಕಂಡಿದೆ. ಮುದ್ದು ಕಂದನ ಮನೆಯಲ್ಲಿ ತಾಯಿ ಹೊರಗೆ ಹೋದ ವೇಳೆ ಮುಗು ಬಿಸಿ ನೀರಿನಲ್ಲಿ ಮುಳುಗಿ ಒದ್ದಾಡಿದೆ. ಮಗುವಿನ ಚೀರಾಟ ಕೇಳಿ ಓಡಿಬಂದು ಕೆ.ಆರ್.ಆಸ್ಪತ್ರೆಗೆ ದಾಖಲಿಸಲಾಗಿಯಿತು. ಆದರೆ ಚಿಕಿತ್ಸೆ ಫಲಕಾರಿಯಾಗಿ ಆಗದೇ ಕಂದ ಸಾವನ್ನಪ್ಪಿದೆ. ಕಣ್ಣೀರಿನ ನಡುವೆಯೇ ಮಗುವಿನ ಅಂತಿಮ ವಿಧಿ ವಿಧಾನ ನೆರವೇರಿಸಲಾಗಿದೆ. 

ಬೆಳಗಾವಿ ದುರಂತ:  ಬೆಳಗಾವಿ ಜಿಲ್ಲೆಯ ರಾಯಬಾಗ ತಾಲೂಕಿನ ಆಲಖನೂರಿನಲ್ಲಿ  ಬೋರ್​ವೆಲ್​ಗೆ ಬಿದ್ದಿದ್ದ ಎರಡೂವರೆ ವರ್ಷದ ಮಗು ಸಾವನ್ನಪ್ಪಿತ್ತು.  ಅಗ್ನಿಶಾಮಕ ಸಿಬ್ಬಂದಿ ಮಗುವಿನ ಮೃತದೇಹವನ್ನು ಹೊರ ತೆಗೆದಿದಿತ್ತು. ಶರತ್ ಹಸಿರೆ ಎಂಬ ಎರಡೂವರೆ ವರ್ಷದ ಮಗು ಸಾವು ಕಂಡಿತ್ತು.

ಎರಡು ದಿನಗಳಿಂದ ಮಗು ನಾಪತ್ತೆಯಾಗಿತ್ತು. ಈ ಬಗ್ಗೆ ಮಗುವಿನ ತಂದೆ ಪೊಲಿಸ್ ಠಾಣೆಗೆ ಹೋಗಿ ಕಿಡ್ನಾಪ್ ದೂರು ನೀಡಿದ್ದರು. ಆದ್ರೆ, ಮಗು ಬೋರ್‌ವೆಲ್‌ಗೆ ಬಿದ್ದಿರುವುದು ನಂತರ ಗೊತ್ತಾಗಿತ್ತು. 

ಶಿವಮೊಗ್ಗದ ದುರಂತ: ಕುದಿಯುತ್ತಿರುವ ಅಡಕೆ ಬೇಯಿಸುವ ಹಂಡೆಗೆ ಬಿದ್ದ ಮಗು ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿತ್ತು.  ಭದ್ರಾಾವತಿ  ತಾಲೂಕಿನ ಹೊಳೆಹೊನ್ನೂರು ಪೊಲೀಸ್ ಠಾಣಾ ವ್ಯಾಪ್ತಿಯ ಅರಕೆರೆ ಗ್ರಾಮದಲ್ಲಿ ದುರ್ಘಟನೆ ನಡೆದಿತ್ತು.

ಸೇನಾ ಹೆಲಿಕಾಪ್ಟರ್ ಪತನದ ಹಿಂದಿನ ದುರಂತ ಕತೆಗಳು

ಮಂಜುನಾಥ್ ಎಂಬುವವರ ಪುತ್ರ 4 ವರ್ಷದ ಧನರಾಜ್ ಮೃತಪಟ್ಟ ಮಗುವಾಗಿದೆ. ಆ. 29ರಂದು ಧನರಾಜ್ ಕುದಿಯುತ್ತಿದ್ದ ನೀರಿದ್ದ ಹಂಡೆಯೊಳಕ್ಕೆ ಬಿದ್ದಿದ್ದ. ತಕ್ಷಣವೇ ಆತನನ್ನು ನಗರದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಿಸದೇ ಪ್ರಾಣ ಹೋಗಿತ್ತು.

ಮಂಜುನಾಥ್ ಅವರ ಮನೆ ಹಿಂಭಾಗ ಅಡಕೆ ಬೇಯಿಸುವ ಕೆಲಸ ನಡೆಯುತ್ತಿತ್ತು. ಅಡಕೆ ಬೇಯಿಸುವ ಹಂಡೆಯ ಪಕ್ಕದಲ್ಲಿಯೇ ಸ್ಟೂಲ್ ಒಂದನ್ನು ಇರಿಸಲಾಗಿತ್ತು. ಮನೆಯವರ ಗಮನಕ್ಕೆ ಬಾರದೆ ಈ ಕಡೆ ಬಂದ ಮಗು ಸ್ಟೂಲ್ ಹತ್ತಿಹಂಡೆಯ ಕಡೆ ಬಗ್ಗಿದಾಗ ಈ ಘಟನೆ ನಡೆದಿತ್ತು.

ಆಟವಾಡಲು ಬಲೂನು ಖರೀದಿಸಲು ಚಿಕ್ಕಪ್ಪನಿಂದ ಒಂದು ರು. ನಾಣ್ಯ ಪಡೆದ 4 ವರ್ಷದ ಮಗು ಆಟವಾಡುತ್ತಲೇ ನಾಣ್ಯವನ್ನು ನುಂಗಿ ಜೀವವನ್ನೇ ಕಳೆದುಕೊಂಡಿರುವ  ಘಟನೆ  ಹುಣಸೂರುತಾಲೂಕಿನ ಹಿರೀಕ್ಯಾತನಹಳ್ಳಿ ಗ್ರಾಮದಿಂದ ವರದಿಯಾಗಿತ್ತು.

ತಾಲೂಕಿನ ಬಿಳಿಕೆರೆ ಹೋಬಳಿ ಆಯರಹಳ್ಳಿ ಗ್ರಾಮದ ದಿನೇಶ್‌-ಸುಮ ದಂಪತಿ ಪುತ್ರಿ ಖುಷಿ ನಾಣ್ಯ ನುಂಗಿ ಜೀವ ಕಳೆದುಕೊಂಡಿತ್ತು.  ಹಿರಿಕ್ಯಾತನಹಳ್ಳಿಯ ಅಜ್ಜಿ ಮನೆಯಲ್ಲಿದ್ದ ಖುಷಿ ಬಲೂನು ಬೇಕೆಂದು ಹಠ ಹಿಡಿದ ಕಾರಣ ಚಿಕ್ಕಪ್ಪ ಒಂದು ರು. ನೀಡಿದ್ದರು. ಅದನ್ನು ಆಟವಾಡುತ್ತಲೇ ಬಾಯೊಳಗೆ ಹಾಕಿಕೊಂಡಿದ್ದಾಳೆ. ಆದರೆ ಇದನ್ನು ಮನೆಯವರಿಗೆ ತಿಳಿಸಿರಲಿಲ್ಲ. ಖುಷಿ ಆಗಾಗ ಕೆಮ್ಮು ಜ್ವರದಿಂದ ಬಳಲುತ್ತಿದ್ದಳು ಎನ್ನಲಾಗಿದ್ದು, ಕಳೆದೆರಡು ದಿನಗಳಿಂದ ಕೆಮ್ಮು ಉಲ್ಬಣವಾದ ಪರಿಣಾಮ ಮೈಸೂರು ಆಸ್ಪತ್ರೆಗೆ ದಾಖಲಿಸಿದ್ದಾರೆ. ಶಸ್ತ್ರಚಿಕಿತ್ಸೆಗೆ ತಯಾರಾದ ವೇಳೆ ನಾಣ್ಯ ನುಂಗಿದ್ದೇನೆಂದು ಮಗು ಹೇಳಿದೆ. ಆದರೆ ಅಷ್ಟರಲ್ಲಾಗಲೇ ಮಗುವಿನ ಪರಿಸ್ಥಿತಿ ತೀರ ಹದಗೆಟ್ಟು ಪ್ರಾಣಪಕ್ಷಿ ಹಾರಿ ಹೋಗಿತ್ತು.

ಕೊರೋನಾ ಕಾಲದ ನಂತರ  ಹಲವರು ವರ್ಕ್ ಫ್ರಾಂ ಹೋಂ ಕೆಲಸಕ್ಕೆ ಒಗ್ಗಿಕೊಂಡಿದ್ದಾರೆ. ಮನೆಯಲ್ಲೇ ಇದ್ದರೂ ಮಕ್ಕಳ ಮೇಲೆ ಗಮನ ಕೊಡಲಾಗದ ಸ್ಥಿತಿ ನಿರ್ಮಾಣವಾಗಿರುವುದು ಇದೆ. ಟೆರೆಸ್ ಮೇಲೆ ಮಕ್ಕಳು ಆಡುತ್ತಿರುವಾಗ ಎಚ್ಚರಿಕೆ ವಹಿಸಬೇಕಾದದ್ದು ಅಷ್ಟೇ ಮುಖ್ಯ. ಆಟವಾಡಲು ತೆರಳಿ  ಮನೆಯ ಟೆರೆಸ್ ನಿಂದ ಮಗು ಸಾವು ಕಂಡಿದ್ದ ಪ್ರಕರಣ ಬೆಂಗಳೂರಿನಲ್ಲಿ ನಡೆದಿತ್ತು.

 

 

Follow Us:
Download App:
  • android
  • ios