ಹುಬ್ಬಳ್ಳಿಯಲ್ಲಿ ಹೊತ್ತಿ ಉರಿದ ಖಾಸಗಿ ಬಸ್, ತಪ್ಪಿದ ಭಾರಿ ದುರಂತ!
ಟೈರ್ ಸ್ಫೋಟಗೊಂಡ ಪರಿಣಾಮ ಏಕಾಏಕಿ ಖಾಸಗಿ ಬಸ್ ಬೆಂಕಿಯಲ್ಲಿ ಹೊತ್ತಿ ಉರಿದಿದ್ದು, ಭಾರಿ ದುರಂತ ತಪ್ಪಿದೆ. ಹುಬ್ಬಳ್ಳಿ ಹೊರ ವಲಯದ ಬೈಪಾಸ್ ರಸ್ತೆಯಲ್ಲಿ ಬೆಳಗಿನ ಜಾವ ಘಟನೆ ನಡೆದಿದೆ.
ಹುಬ್ಬಳ್ಳಿ (ನ.13): ಟೈರ್ ಸ್ಫೋಟಗೊಂಡ ಪರಿಣಾಮ ಏಕಾಏಕಿ ಖಾಸಗಿ ಬಸ್ ಬೆಂಕಿಯಲ್ಲಿ ಹೊತ್ತಿ ಉರಿದಿದ್ದು, ಭಾರಿ ದುರಂತ ತಪ್ಪಿದೆ. ಹುಬ್ಬಳ್ಳಿ ಹೊರ ವಲಯದ ಬೈಪಾಸ್ ರಸ್ತೆಯಲ್ಲಿ ಬೆಳಗಿನ ಜಾವ ಘಟನೆ ನಡೆದಿದ್ದು, ಮುಂಬೈನಿಂದ ಮಂಗಳೂರಿನಿಂದ ಕಡೆಗೆ ಸುಖವಿಹಾರಿ ಖಾಸಗಿ ಬಸ್ ಚಲಿಸುತ್ತಿತ್ತು. ಕೆಎ 51/ 6293 ರೇಷ್ಮಾ ಟ್ರಾವೆಲ್ಸ್‌ಗೆ ಸೇರಿದ ಬಸ್ ಟೈರ್ ಸ್ಫೋಟಗೊಂಡು ಏಕಾಏಕಿ ಬೆಂಕಿ ಹತ್ತಿಕೊಂಡು ಉರಿದಿರುವ ಮಾಹಿತಿ ಲಭ್ಯವಾಗಿದೆ. ಇನ್ನು ಬೆಂಕಿ ಕಾಣಿಸಿಕೊಳ್ಳುತ್ತಿದ್ದಂತೆ ಪ್ರಯಾಣಿಕರನ್ನು ಚಾಲಕ ಬಸ್ಸಿನಿಂದ ಕೆಳಗೆ ಇಳಿಸಿದ್ದಾನೆ. ಸದ್ಯ ಘಟನೆಯಲ್ಲಿ ಬಸ್ ಸಂಪೂರ್ಣವಾಗಿ ಸುಟ್ಟು ಕರಕಲಾಗಿದೆ.
ಮನೆಗೆ ಆಕಸ್ಮಿಕ ಬೆಂಕಿ: ಕುಷ್ಟಗಿ ತಾಲೂಕಿನ ಚಳಗೇರಾ ಗ್ರಾಮದ ಶರಣಪ್ಪ ಬಾರಕೇರ ಅವರ ಮಣ್ಣಿನ(ಜಂತಿನ ಮನೆ) ಗೆ ಆಕಸ್ಮಿಕವಾಗಿ ಬೆಂಕಿ ತಗುಲಿ ಮನೆಯು ಸುಟ್ಟು ಭಸ್ಮವಾಗಿದೆ. ತಾಲೂಕಿನ ಚಳಗೇರಾ ಗ್ರಾಮದ ಶರಣಪ್ಪ ಬಾರಕೇರ ಅವರ ಮಣ್ಣಿನ ಮನೆಗೆ ಬೆಂಕಿ ತಗುಲಿದ್ದು, ಇದರಿಂದ ಬೆಂಕಿಯು ಸಂಪೂರ್ಣವಾಗಿ ಮನೆಯನ್ನು ಆವರಿಸಿದ್ದು, ಗ್ರಾಮಸ್ಥರು ಬೆಂಕಿ ಆರಿಸುವಲ್ಲಿ ಮುಂದಾದರು. ವಿಷಯ ತಿಳಿದು ಘಟನಾ ಸ್ಥಳಕ್ಕೆ ಆಗಮಿಸಿದ ಅಗ್ನಿಶಾಮಕ ದಳದವರು ಬೆಂಕಿ ನಂದಿಸಿ ಹೆಚ್ಚಿನ ಅನಾಹುತವನ್ನು ತಪ್ಪಿಸಿದ್ದಾರೆ. ಅಗ್ನಿಶಾಮಕ ಠಾಣಾಧಿಕಾರಿ ಪಿ. ರಾಜು ಮಾತನಾಡಿ, ಬೆಂಕಿಯಿಂದ ಮನೆಯ ಚಾವಣಿಗೆ ಅಳವಡಿಸಲಾಗಿದ್ದ ಕಟ್ಟಿಗೆಗಳು ಸುಟ್ಟುಹೋಗಿದ್ದು, ಸಕಾಲದಲ್ಲಿ ಅಗ್ನಿಶಾಮಕ ಠಾಣಾ ಅಧಿಕಾರಿಗಳು ಬೆಂಕಿಯನ್ನು ನಂದಿಸಿ ಹೆಚ್ಚಿನ ಅನಾಹುತವನ್ನು ತಪ್ಪಿಸುವಲ್ಲಿ ಯಶಸ್ವಿಯಾಗಿದ್ದಾರೆ ಎಂದರು.
ಸ್ನೇಹಿತನನ್ನೇ ಬ್ಲ್ಯಾಕ್‌ಮೇಲ್ ಮಾಡಿ 16 ಲಕ್ಷ ಸುಲಿಗೆ!
ಚಲಿಸುತ್ತಿದ್ದ ಕಾರಲ್ಲಿ ಬೆಂಕಿ: ಚಲಿಸುತ್ತಿದ್ದ ಕಾರು ಏಕಾಏಕಿ ಬೆಂಕಿ ಹೊತ್ತಿಕೊಂಡ ಪರಿಣಾಮ ಕಾರಿನ ಎಂಜಿನ್ ಸುಟ್ಟುಕರಕಲಾದ ಘಟನೆ ಸೋಮವಾರ ನಗರದ ಹಾಸನ ಸರ್ಕಲ್‌ನಲ್ಲಿ ನಡೆದಿದೆ. ಹೊಳೆನರಸೀಪುರದ ಅರುಣ್‌ಕುಮಾರ್ ಎಂಬುವವರು ತಮ್ಮ ಟಾಟಾ ಇಂಡಿಕಾವನ್ನು ರಿಪೇರಿ ಮಾಡಿಸಿಕೊಂಡು ಹೋಗುವಾಗ ನಗರದ ಹಾಸನ ಸರ್ಕಲ್‌ನ ಕಲ್ಪತರು ಎಂಜಿನಿಯರಿಂಗ್ ಕಾಲೇಜು ಮುಂಭಾಗದಲ್ಲಿ ಕಾರಲ್ಲಿ ಶಾರ್ಚ್‌ಸಕ್ರ್ಯೂಟ್‌ನಿಂದ ದಟ್ಟಹೊಗೆ ಕಾಣಿಸಿಕೊಂಡಿದೆ. ತಕ್ಷಣ ಡ್ರೈವರ್ ಕಾರು ನಿಲ್ಲಿಸಿ ಕಾರಲ್ಲಿದ್ದ ಮೂವರು ಇಳಿದು ಓಡಿಹೋಗಿದ್ದು ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ. ಸ್ಥಳೀಯರಾದ ಡೈರಿ ಭಾಸ್ಕರ್, ಮೆಕ್ಯಾನಿಕ್ ನಾಗರಾಜು, ತೇಜು ಮತ್ತಿತರರು ನೀರು ಹಾಕಿ ಬೆಂಕಿ ನಂದಿಸುತ್ತಿದ್ದರು. ಅಷ್ಟರಲ್ಲಿ ಅಗ್ನಿಶಾಮಕ ದಳ ಸಿಬ್ಬಂದಿ ಸ್ಥಳಕ್ಕೆ ಬಂದು ಬೆಂಕಿ ನಂದಿಸಿದರು. ಸ್ಥಳದಲ್ಲಿ ಕೆಲಕಾಲ ಆತಂಕ ಸೃಷ್ಟಿಯಾಯಿತು.
ಪತಿಗೆ ಮದ್ಯ ಕುಡಿಸಿ, ಕಬಾಬ್ ತಿನ್ನಿಸಿ ಕತ್ತು ಹಿಸುಕಿ ಹತ್ಯೆ!
ಹೊತ್ತಿ ಉರಿದ ಟಿಟಿ ವಾಹನ: ರಸ್ತೆಯಲ್ಲೇ ಟೆಂಪೋ ಟ್ರಾವಲ್‌ವೊಂದು ಧಗಧಗನೆ ಹೊತ್ತಿ ಉರಿದ ಘಟನೆ ತಾಲೂಕಿನ ಬಿದನಗೆರೆ ಕ್ರಾಸ್ ಬಳಿ ಇರುವ ಬೈಪಾಸ್‌ನಲ್ಲಿ ಸಂಜೆ ನಡೆದಿದೆ. ಹಾಸನದಿಂದ ಬೆಂಗಳೂರಿಗೆ ತೆರಳುತ್ತಿದ್ದ ಟಿಟಿ ವಾಹನದಲ್ಲಿ ಒಂದು ಮಗು ಸೇರಿ ಹತ್ತು ಜನ ಪ್ರಯಾಣಿಸುತ್ತಿದ್ದರು. ಬಿದನಗೆರೆ ಕ್ರಾಸ್ ಬೈಪಾಸ್‌ಗೆ ಬರುತ್ತಿದ್ದಂತೆ ಇದ್ದಕ್ಕಿದ್ದಂತೆ ಎಂಜಿನ್‌ನಲ್ಲಿ ಬೆಂಕಿ ಕಾಣಿಸಿಕೊಂಡಿತು. ಮುಂದಿನ ಅನಾಹುತದ ಬಗ್ಗೆ ಅರಿತ ಚಾಲಕ ಕೂಡಲೇ ಟಿಟಿ ನಿಲ್ಲಿಸಿ ವಾಹನದಲ್ಲಿದ್ದವರನ್ನೆಲ್ಲಾ ಕೆಳಗಿಳಿಸಿದ. ಕ್ಷಣಾರ್ಧದಲ್ಲೇ ಬೆಂಕಿ ಇಡೀ ಟಿಟಿ ವಾಹನಕ್ಕೆ ಆವರಿಸಿಕೊಂಡಿತು. ನೋಡನೋಡುತ್ತಿದ್ದಂತೆ ಟಿಟಿ ವಾಹನ ಹೊತ್ತಿ ಉರಿಯಿತು. ಚಾಲಕ ಸ್ವಲ್ಪ ಯಾಮಾರಿದರೂ ಕೂತಲ್ಲೇ ಹತ್ತು ಮಂದಿ ಸುಟ್ಟು ಕರಕಲಾಗಬೇಕಿತ್ತು. ಆದರೆ ಸಮಯ ಪ್ರಜ್ಞೆಯಿಂದ ದೊಡ್ಡ ಅನಾಹುತವೊಂದು ತಪ್ಪಿದಂತಾಯಿತು. ಘಟನೆಗೆ ಕಾರಣ ತಿಳಿದು ಬಂದಿಲ್ಲ. ಸದ್ಯ ಘಟನೆಯಿಂದ ಯಾವುದೇ ಪ್ರಾಣಾಪಾಯ ಆಗಿಲ್ಲ. ಕುಣಿಗಲ… ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.