Bengaluru: ಸ್ನೇಹಿತನನ್ನೇ ಬ್ಲ್ಯಾಕ್‌ಮೇಲ್‌ ಮಾಡಿ 16 ಲಕ್ಷ ಸುಲಿಗೆ!

ಇನ್‌ಸ್ಟಾಗ್ರಾಮ್‌ನಲ್ಲಿ ಯುವತಿಯೊಂದಿಗೆ ಸ್ನೇಹಿತ ನಡೆಸಿದ ಖಾಸಗಿ ಚಾಟ್‌ ಹಾಗೂ ವಿಡಿಯೋ ಕರೆಗಳ ಸ್ಕ್ರೀನ್‌ಶಾಟ್‌ ಮುಂದಿಟ್ಟುಕೊಂಡು ಮೂವರು ಚಾಲಾಕಿ ಸ್ನೇಹಿತರು, ಯುವತಿ ಜೊತೆಗಿನ ವಿಡಿಯೋ ಸಂಬಂಧ ದೂರು ದಾಖಲಾಗಿದೆ ಎಂದು ಹೇಳಿ ಸಿಸಿಬಿ ಪೊಲೀಸರೊಂದಿಗೆ ಮಾತನಾಡಿ ಇತ್ಯರ್ಥ ಮಾಡಿಸುವುದಾಗಿ ನಂಬಿಸಿ 99 ಗ್ರಾಂ ತೂಕದ ಚಿನ್ನದ ಬಿಸ್ಕತ್ತು ಹಾಗೂ 15.90 ಲಕ್ಷ ನಗದು ಸುಲಿಗೆ ಮಾಡಿರುವ ಘಟನೆ ಚಾಮರಾಜಪೇಟೆ ಪೊಲೀಸ್‌ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. 

In The Name Of CCB Police Friends Extortion Rs 16 Lakhs From Friend Who Is Asking Help gvd

ಬೆಂಗಳೂರು (ನ.13): ಇನ್‌ಸ್ಟಾಗ್ರಾಮ್‌ನಲ್ಲಿ ಯುವತಿಯೊಂದಿಗೆ ಸ್ನೇಹಿತ ನಡೆಸಿದ ಖಾಸಗಿ ಚಾಟ್‌ ಹಾಗೂ ವಿಡಿಯೋ ಕರೆಗಳ ಸ್ಕ್ರೀನ್‌ಶಾಟ್‌ ಮುಂದಿಟ್ಟುಕೊಂಡು ಮೂವರು ಚಾಲಾಕಿ ಸ್ನೇಹಿತರು, ಯುವತಿ ಜೊತೆಗಿನ ವಿಡಿಯೋ ಸಂಬಂಧ ದೂರು ದಾಖಲಾಗಿದೆ ಎಂದು ಹೇಳಿ ಸಿಸಿಬಿ ಪೊಲೀಸರೊಂದಿಗೆ ಮಾತನಾಡಿ ಇತ್ಯರ್ಥ ಮಾಡಿಸುವುದಾಗಿ ನಂಬಿಸಿ 99 ಗ್ರಾಂ ತೂಕದ ಚಿನ್ನದ ಬಿಸ್ಕತ್ತು ಹಾಗೂ 15.90 ಲಕ್ಷ ನಗದು ಸುಲಿಗೆ ಮಾಡಿರುವ ಘಟನೆ ಚಾಮರಾಜಪೇಟೆ ಪೊಲೀಸ್‌ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. 

ಚಾಮರಾಜಪೇಟೆ ನಿವಾಸಿ ಬಿ.ವಿನೋದ್‌(20) ಬ್ಲ್ಯಾಕ್‌ಮೇಲ್‌ಗೆ ಒಳಗಾಗಿ ಚಿನ್ನ ಹಾಗೂ ಹಣ ಕಳೆದುಕೊಂಡವರು. ಈ ಸಂಬಂಧ ದಾಖಲಾದ ದೂರಿನ ಮೇರೆಗೆ ಚಾಮರಾಜಪೇಟೆ ಠಾಣೆ ಪೊಲೀಸರು ಆರೋಪಿಗಳಾದ ಸುನೀಲ್‌, ಹೇಮಂತ್‌, ಪ್ರವೀಣ್‌ ಎಂಬುವವರ ಬಂಧನಕ್ಕೆ ಬಲೆ ಬೀಸಿದ್ದಾರೆ.

ಪ್ರಕರಣದ ವಿವರ: ದೂರುದಾರ ವಿನೋದ್‌ಗೆ ಕಳೆದ ಏಪ್ರಿಲ್‌ನಲ್ಲಿ ಇನ್‌ಸ್ಟಾಗ್ರಾಮ್‌ನಲ್ಲಿ ಚಾಂದಿನಿ ಹೆಸರಿನ ಯುವತಿ ಪರಿಚಯವಾಗಿದ್ದು, ಚಾಟಿಂಗ್‌ ಆರಂಭಿಸಿದ್ದರು. ಪರಿಚಯ ಸ್ನೇಹಕ್ಕೆ ತಿರುಗಿ ಖಾಸಗಿಯಾಗಿ ಚಾಟಿಂಗ್‌ ಹಾಗೂ ವಿಡಿಯೋ ಕರೆ ಮಾಡಿ ಮಾತನಾಡುತ್ತಿದ್ದರು. ಈ ನಡುವೆ ವಿನೋದ್‌ಗೆ ಸೆಕ್ಸ್‌ಗೆ ಚಾಂದಿನಿ ಆಹ್ವಾನಿಸಿದ್ದಾಳೆ, ತನಗೆ ಇಷ್ಟವಿಲ್ಲ ಎಂದು ಆಕೆಗೆ ವಿನೋದ್‌ ತಿಳಿಸಿ ಇನ್ಸ್‌ಸ್ಟಾಗ್ರಾಮ್‌ನಲ್ಲಿ ಆಕೆಯ ಖಾತೆಯನ್ನು ಬ್ಲಾಕ್‌ ಮಾಡಿದ್ದಾನೆ. ಇದಾದ ಕೆಲ ದಿನಗಳ ಬಳಿಕ ವಿನೋದ್‌ ತಮ್ಮ ಸ್ನೇಹಿತ ಆರೋಪಿ ಪ್ರವೀಣ್‌ಗೆ ಚಾಂದಿನಿ ಜತೆಗೆ ತಾನು ಸ್ನೇಹ ಕಡಿದುಕೊಂಡಿರುವುದಾಗಿ ತಿಳಿಸಿ, ಆಕೆಯೊಂದಿಗೆ ಇನ್‌ಸ್ಟಾಗ್ರಾಮ್‌ನಲ್ಲಿ ನಡೆಸಿದ್ದ ಖಾಸಗಿ ಚಾಟ್‌ ಹಾಗೂ ವಿಡಿಯೋಗಳ ಸ್ಕ್ರೀನ್‌ಶಾಟ್‌ ಕಳುಹಿಸಿದ್ದಾನೆ. 

ಉರುಸ್ ವೇಳೆ ದಲಿತ ಯುವಕನನ್ನ ಕಟ್ಟಿ ಹಾಕಿ ಥಳಿತ: 14 ಜನರ ಬಂಧನ

ಕೆಲ ದಿನಗಳ ಬಳಿಕ ಆರೋಪಿಗಳಾದ ಸುನೀಲ್‌ ಮತ್ತು ಹೇಮಂತ್‌, ವಿನೋದ್‌ನ ಈ ಖಾಸಗಿ ಚಾಟ್‌ ಸ್ಕೀನ್‌ಶಾಟ್‌ ಮತ್ತು ವಿಡಿಯೋ ಬಗ್ಗೆ ಪ್ರವೀಣ್‌ನಿಂದ ತಿಳಿದುಕೊಂಡಿದ್ದಾರೆ. ಬಳಿಕ ಆರೋಪಿ ಸುನೀಲ್‌, ವಿನೋದ್‌ಗೆ ಕರೆ ಮಾಡಿ ‘ನೀನು ಚಾಂದಿನಿ ಜತೆಗೆ ನಡೆಸಿದ ಖಾಸಗಿ ಚಾಟ್‌ ಮತ್ತು ವಿಡಿಯೋ ಕರೆಗಳ ಬಗ್ಗೆ ಯಾರೋ ಪೊಲೀಸರಿಗೆ ದೂರು ನೀಡಿದ್ದಾರೆ. ಈ ಬಗ್ಗೆ ನನಗೆ ಪರಿಚಿತ ಐಪಿಎಸ್‌ ಅಧಿಕಾರಿಯೊಬ್ಬರು ಕರೆ ಮಾಡಿ ಮಾಹಿತಿ ನೀಡಿದ್ದಾರೆ. ಸೆಟಲ್‌ಮೆಂಟ್‌ ಮಾಡಿಕೊಳ್ಳದಿದ್ದಲ್ಲಿ ಪೊಲೀಸರು ನಿನ್ನನ್ನು ಕರೆದುಕೊಂಡು ಹೋಗಲಿದ್ದಾರೆ’ ಎಂದು ಹೆದರಿಸಿದ್ದಾನೆ.

ಸಿಸಿಬಿ ಪೊಲೀಸರ ಹೆಸರಿನಲ್ಲಿ ಸುಲಿಗೆ: ಇದಾದ ಕೆಲ ದಿನಗಳ ಬಳಿಕ ಮತ್ತೆ ವಿನೋದ್‌ಗೆ ಕರೆ ಮಾಡಿರುವ ಸುನೀಲ್‌, ‘ಬೇಗ ಸೆಟಲ್‌ಮೆಂಟ್‌ ಮಾಡು. ಇಲ್ಲವಾದರೆ, ನಾನೇ ಪೊಲೀಸರಿಗೆ ಹಿಡಿದುಕೊಡುತ್ತೇನೆ’ ಎಂದು ಬೆದರಿಸಿದ್ದಾನೆ. ಇದರಿಂದ ಆತಂಕಗೊಂಡ ವಿನೋದ್‌, ಪೊಲೀಸರು ನನ್ನನ್ನು ಬಂಧಿಸಿದರೆ ಮರ್ಯಾದೆ ಹೋಗಲಿದೆ ಎಂದು ಹೆದರಿ ಪೊಲೀಸರೊಂದಿಗೆ ಸೆಟಲ್‌ಮೆಂಟ್‌ ಮಾಡಿಕೊಳ್ಳಲು ಒಪ್ಪಿಸಿದ್ದಾನೆ. ಅದರಂತೆ ಮೊದಲಿಗೆ ಆರೋಪಿ ಸುನೀಲ್‌ಗೆ 99 ಗ್ರಾಂ ತೂಕದ ಚಿನ್ನದ ಬಿಸ್ಕತ್ತು ನೀಡಿದ್ದಾನೆ. ಕೆಲ ದಿನಗಳ ಬಳಿಕ ಮತ್ತೆ ಕರೆ ಮಾಡಿರುವ ಸುನೀಲ್‌, ‘ಸಿಸಿಬಿ ಪೊಲೀಸರು ಈ ಚಿನ್ನಕ್ಕೆ ಒಪ್ಪುತ್ತಿಲ್ಲ. ಮತ್ತಷ್ಟು ಹಣ ಕೊಡಬೇಕು’ ಎಂದು ಒತ್ತಾಯಿಸಿದ್ದಾನೆ. ಈ ವೇಳೆ ವಿನೋದ್‌ 3.50 ಲಕ್ಷ ಹಣವನ್ನು ಸುನೀಲ್‌ಗೆ ನೀಡಿದ್ದಾನೆ.

2ನೇ ಮದುವೆ ವೇಳೆ ರಾದ್ಧಾಂತ: ಮೊದಲ ಪತ್ನಿ ಜತೆ ಯೋಧ ಆತ್ಮಹತ್ಯೆ

ಅರೆಸ್ಟ್‌ ಮಾಡಿಸುವುದಾಗಿ ಬೆದರಿಕೆ: ಬಳಿಕ ಆರೋಪಿಗಳಾದ ಸುನೀಲ್‌, ಪ್ರವೀಣ್‌ ಹಾಗೂ ಹೇಮಂತ್‌ ಮತ್ತೆ ವಿನೋದ್‌ಗೆ ಕರೆ ಮಾಡಿ, ಸಿಸಿಬಿ ಪೊಲೀಸರು ಇಷ್ಟು ಹಣಕ್ಕೆ ಒಪ್ಪುತಿಲ್ಲ. ಮತ್ತಷ್ಟು ಹಣ ಕೊಡುವಂತೆ ಒತ್ತಾಯಿಸಿದ್ದಾರೆ. ಅಷ್ಟೇ ಅಲ್ಲದೆ, ಹಣ ಕೊಡದಿದ್ದರೆ ನಿನ್ನನ್ನು ಬಂಧಿಸಲು ಪೊಲೀಸರಿಗೆ ಹೇಳುವುದಾಗಿ ಬೆದರಿಸಿದ್ದಾರೆ. ಹೀಗೆಯೇ ಆರೋಪಿಗಳು ವಿನೋದ್‌ನನ್ನು ಹೆದರಿಸಿ ವಿವಿಧ ಹಂತಗಳಲ್ಲಿ ಬರೋಬ್ಬರಿ 15.90 ಲಕ್ಷವನ್ನು ಸುಲಿಗೆ ಮಾಡಿದ್ದಾರೆ. ಮೂವರು ಆರೋಪಿಗಳು ಪದೇ ಪದೇ ಹಣಕ್ಕೆ ಬೇಡಿಕೆ ಇರಿಸುತ್ತಿದ್ದರಿಂದ ರೋಸಿ ಹೋಗಿದ್ದ ವಿನೋದ್‌, ತನ್ನ ವಿರುದ್ಧ ಯಾರು ದೂರು ನೀಡಿದ್ದಾರೆಂಬುದನ್ನು ಪರಿಶೀಲಿಸಿದಾಗ ಯಾವುದೇ ದೂರು ದಾಖಲಾಗಿಲ್ಲ ಎಂಬುದು ಖಚಿತ ಪಡಿಸಿಕೊಂಡಿದ್ದಾನೆ. ಸ್ನೇಹಿತರೇ ಸಿಸಿಬಿ ಪೊಲೀಸರ ಹೆಸರು ಹೇಳಿಕೊಂಡು ಬೆದರಿಸಿ ಹಣ ಸುಲಿಗೆ ಮಾಡಿರುವುದು ಗೊತ್ತಾದ ಬಳಿಕ ಆರೋಪಿಗಳ ವಿರುದ್ಧ ಪೊಲೀಸರಿಗೆ ದೂರು ನೀಡಿದ್ದಾನೆ.

Latest Videos
Follow Us:
Download App:
  • android
  • ios