ಖಾಸಗಿ ಬಸ್‌ನಲ್ಲಿ ಮಹಿಳೆಯ ರೇಪ್ ಮಾಡಿದ ಡ್ರೈವರ್, ನೋಡ್ತಾ ನಿಂತಿದ್ದ ಕಂಡಕ್ಟರ್!
ಗುರುಗ್ರಾಮದಲ್ಲಿ ಖಾಸಗಿ ಬಸ್ ಚಾಲಕನೊಬ್ಬ 56 ವರ್ಷದ ಮನೆಗೆಲಸದ ಮಹಿಳೆಯ ಮೇಲೆ ಅತ್ಯಾಚಾರ ಎಸಗಿದ್ದಾನೆ. ಫೆಬ್ರವರಿ 9 ರಂದು ಫರಿದಾಬಾದ್‌ನಲ್ಲಿ ಈ ಘಟನೆ ನಡೆದಿದೆ. ಬಸ್ ಕಂಡಕ್ಟರ್ ಕೃತ್ಯಕ್ಕೆ ಸಹಕರಿಸಿದ್ದು, ಇಬ್ಬರನ್ನೂ ಬಂಧಿಸಲಾಗಿದೆ.

ಗುರುಗ್ರಾಮ (ಫೆ.13): ಖಾಸಗಿ ಬಸ್ಸಿನಲ್ಲಿ ಮಹಿಳೆಯೊಬ್ಬರ ಮೇಲೆ ಚಾಲಕ ಅತ್ಯಾಚಾರವೆಸಗಿದ ಘಟನೆ ಫೆಬ್ರವರಿ 9 ರಂದು ಫರಿದಾಬಾದ್‌ನಲ್ಲಿ ನಡೆದಿದೆ. 56 ವರ್ಷದ ಮನೆಗೆಲಸದ ಮಹಿಳೆ ಈ ಕೃತ್ಯಕ್ಕೆ ಬಲಿಯಾಗಿದ್ದಾರೆ. ಚಾಲಕ ಅತ್ಯಾಚಾರ ಎಸಗುತ್ತಿದ್ದಾಗ ಕಂಡಕ್ಟರ್ ಕಾವಲು ಕಾಯುತ್ತಾ, ಡ್ರೈವರ್ ರೇಪ್ ಮಾಡೋದನ್ನ ನೋಡುತ್ತಾ ಕುಳಿತಿದ್ದ ಎನ್ನಲಾಗಿದೆ. ಇಬ್ಬರನ್ನೂ ಪೊಲೀಸರು ಬಂಧಿಸಿದ್ದಾರೆ. ಸಂಜೆ 6 ಗಂಟೆ ಸುಮಾರಿಗೆ ಮಹಿಳೆ ಕೆಲಸ ಮುಗಿಸಿ ಮನೆಗೆ ಹೋಗಲು ಬಸ್ ನಿಲ್ದಾಣದಲ್ಲಿ ಕಾಯುತ್ತಿದ್ದರು. ಈ ವೇಳೆ ಬಿಳಿ ಬಣ್ಣದ ಬಸ್ ಬಂದು ನಿಂತಿತು. ತಾನು ಅದೇ ದಾರಿಯಲ್ಲಿ ಹೋಗುವುದಾಗಿ ಚಾಲಕ ಹೇಳಿದ್ದರಿಂದ ಮಹಿಳೆ ಬಸ್ ಹತ್ತಿದ್ದರು ಎನ್ನಲಾಗಿದೆ.
ಬಸ್ಸಿನಲ್ಲಿ ತಾನೊಬ್ಬಳೇ ಪ್ರಯಾಣಿಕಳೆಂದು ಮಹಿಳೆಗೆ ಅರಿವಾದಾಗ ಹೆದರಿಕೆ ಉಂಟಾಗಿತ್ತು. ದಾರಿಯಲ್ಲಿ ಇನ್ನಷ್ಟು ಜನರು ಹತ್ತುವರೆಂದು ಕಂಡಕ್ಟರ್ ಹೇಳಿದ್ದ. ಆದರೆ ಚಾಲಕ ಬಸ್ಸನ್ನು ನಿರ್ಜನ ಪ್ರದೇಶದಲ್ಲಿ ನಿಲ್ಲಿಸಿ ಮಹಿಳೆಯ ಮೇಲೆ ಅತ್ಯಾಚಾರ ಎಸಗಿದ್ದಾನೆ. ಈ ವೇಳೆ ಕಂಡಕ್ಟರ್ ಎಲ್ಲಾ ಕಿಟಕಿಗಳನ್ನು ಮುಚ್ಚಿ ಯಾರಾದರೂ ಬರುತ್ತಿದ್ದಾರೆಯೇ ಎಂದು ಕಾವಲು ಕಾಯುತ್ತಿದ್ದ ಎನ್ನಲಾಗಿದೆ.
Video | ಬಸ್ ಚಾಲನೆ ವೇಳೆ ರೀಲ್ಸ್ ವಿಡಿಯೋ ನೋಡ್ತಾ ಕುಳಿತ ಡ್ರೈವರ್! ಭಯಂಕರ ದೃಶ್ಯ ವೈರಲ್!
ಅತ್ಯಾಚಾರದ ನಂತರ ಚಾಲಕ ಮಹಿಳೆಯನ್ನು ಸೆಕ್ಟರ್ 17 ರಲ್ಲಿ ಇಳಿಸಿ ಯಾರಿಗಾದರೂ ಹೇಳಿದರೆ ಗಂಭೀರ ಪರಿಣಾಮ ಎದುರಿಸಬೇಕಾಗುತ್ತದೆ ಎಂದು ಬೆದರಿಸಿದ್ದಾನೆ. ಆದರೆ ಮಹಿಳೆ ಪೊಲೀಸರಿಗೆ ದೂರು ನೀಡಿದ್ದಾರೆ. ಐಪಿಸಿ ಸೆಕ್ಷನ್ 376 ರ ಅಡಿ ಪ್ರಕರಣ ದಾಖಲಿಸಲಾಗಿದೆ. ಮಹಿಳೆಯನ್ನು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಲಾಗಿದ್ದು, ಸ್ಥಳದ ಸುತ್ತಲಿನ ಸಿಸಿಟಿವಿ ದೃಶ್ಯಾವಳಿಗಳನ್ನು ಪೊಲೀಸರು ಪರಿಶೀಲಿಸುತ್ತಿದ್ದಾರೆ. ಬಸ್ ಗುರುಗ್ರಾಮದ ಖಾಸಗಿ ಕಂಪನಿಯೊಂದರ ಉದ್ಯೋಗಿಗಳನ್ನು ಕರೆದೊಯ್ಯುತ್ತಿದ್ದದ್ದು ಎಂದು ತಿಳಿದುಬಂದಿದೆ. ಚಾಲಕ ರೋಶನ್ ಲಾಲ್ (35) ಮತ್ತು ಕಂಡಕ್ಟರ್ ನಾನ್ಹೆ ಅವರನ್ನು ಬಂಧಿಸಲಾಗಿದೆ. ಇಬ್ಬರೂ ಉತ್ತರ ಪ್ರದೇಶ ಮೂಲದವರು ಎಂದು ಪೊಲೀಸರು ತಿಳಿಸಿದ್ದಾರೆ.
ವೀರಪ್ಪನ್‌ಗೂ ಗುರು ಇದ್ನಂತೆ, ಇವ್ನಿಗೆ ಅವ್ನೇ ರೋಲ್ ಮಾಡೆಲ್ ಆಗಿದ್ನಂತೆ: ಅಚ್ಚರಿಯಾದ್ರೂ ಸತ್ಯ..!