Asianet Suvarna News Asianet Suvarna News

ಬೆಂಗಳೂರು ಶಾಕ್, ಪ್ರಿನ್ಸಿಪಾಲ್ ಚೇಂಬರ್‌ಗೆ ಕರೆಸಿ ವಿದ್ಯಾರ್ಥಿನಿಗೆ ಲೈಂಗಿಕ ಕಿರುಕಳ

 ಬೆಂಗಳೂರಿನಲ್ಲಿ ಪ್ರಾಂಶುಪಾಲರೊಬ್ಬರು ತಮ್ಮ ಕಚೇರಿಯ ಕೊಠಡಿಯಲ್ಲಿ ಪಿಯುಸಿ ವಿದ್ಯಾರ್ಥಿಗೆ ಲೈಂಗಿಕ ಕಿರುಕುಳ ನೀಡಿದ್ದಾರೆ. ಇನ್ನೊಂದು ಕಡೆ ಕೆಲಸ ಕೊಡಿಸುವುದಾಗಿ ವಿದ್ಯಾರ್ಥಿನಿಗೆ ಉಪನ್ಯಾಸಕನ ಲೈಂಗಿಕ ದೌರ್ಜನ್ಯ ನೀಡಿ ವಿಡಿಯೋ ಚಿತ್ರೀಕರಿಸಿ ಹಿಂಸೆ ನೀಡಿದ್ದಾನೆ.

principal booked for sexually harassing to girl students in Bengaluru gow
Author
First Published Nov 24, 2023, 1:02 PM IST | Last Updated Nov 24, 2023, 1:03 PM IST

ಬೆಂಗಳೂರು (ನ.24): ಆಘಾತಕಾರಿ ಘಟನೆಯೊಂದರಲ್ಲಿ, ಬೆಂಗಳೂರಿನ ಪ್ರಾಂಶುಪಾಲರೊಬ್ಬರು ತಮ್ಮ ಕಚೇರಿಯ ಕೊಠಡಿಯಲ್ಲಿ ಪಿಯುಸಿ ವಿದ್ಯಾರ್ಥಿಗೆ ಲೈಂಗಿಕ ಕಿರುಕುಳ ನೀಡಿದ್ದಾರೆ ಎಂದು ಆರೋಪಿಸಲಾಗಿದೆ. ವಿದ್ಯಾರ್ಥಿ ಜೊತೆ ಪ್ರಾಂಶುಪಾಲರು  ಚೇಂಬರ್‌ನಲ್ಲಿ ಮಾತುಕತೆಗೆಂದು  ಕರೆದು ಈ ವೇಳೆ ಕೃತ್ಯ ಎಸಗಿದ್ದಾರೆ ಎನ್ನಲಾಗಿದೆ.

16 ವರ್ಷದ ವಿದ್ಯಾರ್ಥಿನಿಯೊಬ್ಬಳಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪದ ಮೇಲೆ   ಪಿಯು ಕಾಲೇಜಿನ 40 ವರ್ಷದ ಪ್ರಾಂಶುಪಾಲರ ವಿರುದ್ಧ ಪ್ರಕರಣ ಈ ದಾಖಲಾಗಿದೆ. ಬಾಲಕಿಯ ತಾಯಿ ವಯಾಲಿಕಾವಲ್  ಪೊಲೀಸರಿಗೆ ನೀಡಿದ ದೂರಿನ ಅನ್ವಯ ಕೇಸ್ ದಾಖಲಾಗಿದ್ದು,  ಪೊಲೀಸರು ಎರಡೂ ಕಡೆಯವರಿಗೆ ನೋಟಿಸ್ ಜಾರಿ ಮಾಡಿದ್ದಾರೆ. ಆಂತರಿಕ ಅಂಕಗಳ ಬಗ್ಗೆ ಚರ್ಚಿಸುವ ನೆಪದಲ್ಲಿ ಪ್ರಾಂಶುಪಾಲರು ಬಾಲಕಿಯನ್ನು ತಮ್ಮ ಚೇಂಬರ್‌ಗೆ ಕರೆಸಿಕೊಂಡು ಈ ಕೃತ್ಯ ಎಸಗಿದ್ದಾರೆ ಎಂದು ತಿಳಿದುಬಂದಿದೆ.

ರಾಜ್ಯದ ಸರ್ಕಾರಿ ಶಾಲಾ ಮಕ್ಕಳಿಗೆ ದೇಶಾದ್ಯಂತ ಶೈಕ್ಷಣಿಕ ಪ್ರವಾಸಕ್ಕೆ ಅವಕಾಶ

ಪೊಲೀಸರು ಲೈಂಗಿಕ ಕಿರುಕುಳ ಸಂಬಂಧಿತ ಕಾನೂನುಗಳ ಫೋಕ್ಸೋ  ಅಡಿಯಲ್ಲಿ ಪ್ರಾಂಶುಪಾಲರ ವಿರುದ್ಧ ಎಫ್‌ಐಆರ್‌ ದಾಖಲು ಮಾಡಿದ್ದಾರೆ. ಘಟನೆ ಸಂಬಂಧ ಎರಡೂ ಕಡೆಯವರಿಗೆ ನೋಟಿಸ್ ನೀಡಿದ್ದಾರೆ. ಘಟನೆ ಸಂಬಂಧ ಕಚೇರಿಯ ಸಿಸಿಟಿವಿ ದೃಶ್ಯಗಳನ್ನು ಸಂಗ್ರಹಿಸಿ ತನಿಖೆ ನಡೆಸುತ್ತಿದ್ದಾರೆ. ಪ್ರಾಂಶುಪಾಲರ ಕಚೇರಿಯಲ್ಲಿ ಮಾತ್ರವೇ ಸಿಸಿಟಿವಿ ಇದ್ದು, ಅವರ ಕೊಠಡಿಯಲ್ಲಿ ಅಳವಡಿಕೆ ಮಾಡಿಲ್ಲ. ವಿದ್ಯಾರ್ಥಿನಿಯನ್ನು ಕೆಸಿ ಜನರಲ್‌ ಆಸ್ಪತ್ರೆಯಲ್ಲಿ ವೈದ್ಯಕೀಯ ಪರೀಕ್ಷೆ ನಡೆಸಲಾಗಿದೆ.

ಡಿ.23ರಂದು ಪಿಎಸ್ಐ ಮರು ಪರೀಕ್ಷೆ, ದಿಢೀರ್‌ ನಿರ್ಧಾರಕ್ಕೆ ಆಕಾಂಕ್ಷಿಗಳ ವಿರೋಧ

ಕೆಲಸಕೊಡಿಸುವುದಾಗಿ ವಿದ್ಯಾರ್ಥಿನಿಗೆ ಉಪನ್ಯಾಸಕನ ಲೈಂಗಿಕ ದೌರ್ಜನ್ಯ, ವಿಡಿಯೋ ಚಿತ್ರೀಕರಿಸಿ ಹಿಂಸೆ
ಈ ಘಟನೆ ಕೂಡ ನಡೆಸಿರುವುದು ಬೆಂಗಳೂರಿನಲ್ಲಿಯೇ. ವಿದ್ಯಾರ್ಥಿನಿ ಮೇಲೆ ಲೈಂಗಿಕ ಕಿರುಳ ನೀಡಿದ ಆರೋಪದ ಮೇಲೆ ಖಾಸಗಿ ಕಾಲೇಜಿನ ಉಪನ್ಯಾಸಕನೋರ್ವನನ್ನು ಬಂಧಸಲಾಗಿದೆ. ಯಲಹಂಕದ ಖಾಸಗಿ ಕಾಲೇಜಿನಲ್ಲಿ ಉಪನ್ಯಾಸಕನಾಗಿದ್ದ ಮದನ್ ಕುಮಾರ್ ಬಂಧಿತ ಆರೋಪಿಯಾಗಿದ್ದಾನೆ. ಗಂಗಮ್ಮನಗುಡಿ ಪೊಲೀಸರಿಂದ ಮದನ್ ಕುಮಾರ್  ಬಂಧನವಾಗಿದ್ದು, ಆತನ ಬಳಿ ಪಾರ್ಟ್ ಟೈಮ್ ಕೆಲಸ ಕೊಡಿಸುವಂತೆ ವಿದ್ಯಾರ್ಥಿನಿ ಕೇಳಿದ್ದಳು. ಇದನ್ನ ಬಂಡವಾಳ ಮಾಡಿಕೊಂಡು ಕಾಮುಕ ವಿದ್ಯಾರ್ಥಿನಿ ವಿರುದ್ಧ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ. ಎಂಜಿ ರಸ್ತೆಯಲ್ಲಿ ಇಂಟರ್ ವ್ಯೂ ಇದೆ ಎಂದು ಹೊಟೇಲ್ ಗೆ ಕರೆದೊಯ್ದು ದೌರ್ಜನ್ಯ ಎಸಗಿದ್ದು,ವಿಡಿಯೋ ಮಾಡಿ ಬ್ಲಾಕ್ ಮೇಲ್ ಮಾಡಿದ್ದಾನೆ. ಮದನ್ ಕಿರುಕುಳದಿಂದ ಬೇಸತ್ತು ವಿದ್ಯಾರ್ಥಿನಿ ಗಂಗಮ್ಮನಗುಡಿ ಠಾಣೆಯಲ್ಲಿ ದೂರು ದಾಖಲಿಸಿದ್ದಾಳೆ. ಪ್ರಕರಣ ದಾಖಲಿಸಿಕೊಂಡು ಪೊಲೀಸರು ಆರೋಪಿ ಮದನ್ ಕುಮಾರ್ ಬಂಧಿಸಿದ್ದಾರೆ.

Latest Videos
Follow Us:
Download App:
  • android
  • ios