Asianet Suvarna News Asianet Suvarna News

ಬಾಲಕಿಯ ಬೆತ್ತಲೆ ಫೋಟೋ ತೆಗೆದು ವೈರಲ್‌ ಮಾಡಿದ ಪಕ್ಕದ ಮನೆ ಯುವಕ: ಜೀವವನ್ನೇ ಕಳ್ಕೊಂಡ ಅಪ್ರಾಪ್ತೆ!

ತನ್ನ ಖಾಸಗಿ ಫೋಟೋಗಳನ್ನು ಯುವಕ ಆನ್‌ಲೈನ್‌ನಲ್ಲಿ ಅಪ್‌ಲೋಡ್ ಮಾಡಿದ್ದು, ಇದರಿಂದ ಮನನೊಂದ ಅಪ್ರಾಪ್ತ ಬಾಲಕಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. 

17 years old girl hangs self over leaked photos in uttar pradesh kaushambi ash
Author
First Published Aug 26, 2023, 1:20 PM IST

ಕೌಶಂಬಿ (ಆಗಸ್ಟ್‌ 26, 2023): ಪಕ್ಕದ ಮನೆಯ ಯುವಕ 17 ವರ್ಷದ ಬಾಲಕಿಯ ಖಾಸಗಿ ಫೋಟೋಗಳನ್ನು ಆನ್‌ಲೈನ್‌ನಲ್ಲಿ ಸೋರಿಕೆ ಮಾಡಿದ ನಂತರ ಮನನೊಂದ ಅಪ್ರಾಪ್ತೆ ಆತ್ಮಹತ್ಯೆ ಮಾಡಿಕೊಂಡ ಘಟನೆ ಇಲ್ಲಿ ನಡೆದಿದೆ. ಉತ್ತರ ಪ್ರದೇಶದ ಕೌಶಂಬಿ ಬಳಿಯ ಗ್ರಾಮವೊಂದರಲ್ಲಿ ಘಟನೆ ನಡೆದಿದ್ದು, ಅಪ್ರಾಪ್ತ ಬಾಲಕಿ ತನ್ನ ಮನೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ಪೊಲೀಸರು ಶುಕ್ರವಾರ ತಿಳಿಸಿದ್ದಾರೆ.

ಗುರುವಾರ ಬಾಲಕಿ ತನ್ನ ಮನೆಯ ಕೊಠಡಿಯಲ್ಲಿ ಸೀರೆಯಿಂದ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಹುಡುಗಿಯ ಫೋಟೋಗಳನ್ನು ಆನ್‌ಲೈನ್‌ನಲ್ಲಿ ಅಪ್‌ಲೋಡ್ ಮಾಡಿದ್ದಕ್ಕಾಗಿ ಯುವಕನ ವಿರುದ್ಧ ದೂರು ನೀಡಲು ಆಕೆಯ ಕುಟುಂಬ ಸದಸ್ಯರು ಯುವಕನ ಮನೆಗೆ ಹೋಗಿದ್ದರು, ಆದರೆ ಅವರು ನಿಂದಿಸಿದ್ದಾರೆ ಎಂದೂ ಪೊಲೀಸರು ತಿಳಿಸಿದ್ದಾರೆ. 

ಇದನ್ನು ಓದಿ: ಡೆಲಿವರಿ ಬಾಯ್ಸ್‌ ಜೀವಕ್ಕಿಲ್ವಾ ಬೆಲೆ? ಅಡ್ರೆಸ್‌ ಕೇಳಿದ್ದಕ್ಕೆ ಚಾಕುನಿಂದ ಚುಚ್ಚಿದ ಮಹಿಳೆ!

ಈ ಸಂಬಂಧ ಮಾತನಾಡಿದ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಸಮರ್ ಬಹದ್ದೂರ್ ಸಿಂಗ್, ಬಾಲಕಿಯ ಕುಟುಂಬವು ಈ ಹಿಂದೆ ಪೊಲೀಸರಿಗೆ ದೂರು ನೀಡಿತ್ತು. ಪ್ರಮುಖ ಆರೋಪಿಯನ್ನು ಜೈ ಸಿಂಗ್ ಎಂದು ಗುರುತಿಸಲಾಗಿದ್ದು, ಈತ ಬಾಲಕಿಗೆ ಕಿರುಕುಳ ನೀಡುತ್ತಿದ್ದ ಎಂದು ಅವರು ತಿಳಿಸಿದ್ದಾರೆ. ಈ ಬಗ್ಗೆ ಬಾಲಕಿಯ ಕುಟುಂಬವು ಜೈ ಸಿಂಗ್ ಅವರ ಕುಟುಂಬವನ್ನು ವಿಚಾರಿಸಿದಾಗ, ಅವರನ್ನು ನಿಂದಿಸಿದರು ಮತ್ತು ಕೊಲ್ಲುವುದಾಗಿ ಬೆದರಿಕೆ ಹಾಕಿದರು ಎಂದು ಪೊಲೀಸರು ತಿಳಿಸಿದ್ದಾರೆ.

ಇನ್ನು, ಈ ಸಂಬಂಧ ಪೊಲೀಸರು ಆರು ಮಂದಿಯ ವಿರುದ್ಧ ಐಪಿಸಿ ಹಾಗೂ ಪೋಕ್ಸೋ ಕಾಯ್ದೆಯ ಸೆಕ್ಷನ್ 147 (ಗಲಭೆ), 354 (ಸಿ) (ವಾಯೂರಿಸಂ), 306 (ಆತ್ಮಹತ್ಯೆಗೆ ಪ್ರಚೋದನೆ), 504 (ಶಾಂತಿ ಭಂಗ), 506 (ಅಪರಾಧ ಬೆದರಿಕೆ), 509 (ಮಹಿಳೆಯನ್ನು ಅವಮಾನಿಸುವುದು) ಅಡಿಯಲ್ಲಿ ಪ್ರಕರಣ ದಾಖಲಿಸಿದ್ದಾರೆ. ಈ ಹಿನ್ನೆಲೆ ಪೊಲೀಸರು ಬಾಲಕಿಯ ಶವವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದು, ಆರೋಪಿಯನ್ನು ಇನ್ನಷ್ಟೇ ಬಂಧಿಸಬೇಕಿದೆ ಎಂದು ತಿಳಿದುಬಂದಿದೆ. 

ಇದನ್ನೂ ಓದಿ: ಮಗಳ ಮೇಲೆ ಕಣ್ಣಾಕಿದ ಲಿವ್ ಇನ್ ಪಾರ್ಟ್‌ನರ್‌, 'ಅದನ್ನೇ' ಕಟ್‌ ಮಾಡಿ ಕೊಲೆ ಮಾಡಿದ ಮಹಿಳೆ!

Follow Us:
Download App:
  • android
  • ios