ಬೆಂಗ್ಳೂರಲ್ಲಿ ಪ್ರಭಾವಿ ರಾಜಕಾರಣಿ ಪುತ್ರರ ರೇವ್ ಪಾರ್ಟಿ,ಯುವತಿಯರೊಂದಿಗೆ ಮೋಜು ಮಸ್ತಿ

ಬೆಂಗಳೂರಿನ ಹೊರವಲಯದ ರೆಸಾರ್ಟ್‌ನಲ್ಲಿ ನಶೆ ಲೋಕ ರೇವ್ ಪಾರ್ಟಿ ನಡೆದಿದ್ದು, ಕಿಕ್ಕೇರಿಸೋ ರೇವ್ ಪಾರ್ಟಿಯಲ್ಲಿ ಪ್ರಭಾವಿ ರಾಜಕಾರಣಿಗಳು, ಉದ್ಯಮಿಗಳ ಪುತ್ರರು ಭಾಗಿಯಾಗಿದ್ರು ಎನ್ನಲಾಗಿದೆ. ಆದ್ರೆ, ಅವರನ್ನ ರಕ್ಷಿಸಲು ಪೊಲೀಸರು ಮುಂದಾಗಿದ್ದಾರೆ ಎನ್ನುವ ಆರೋಪ ಕೇಳಿಬಂದಿದೆ.

Politicians And Businessmen Sons In Rave Party Busted At JD Garden Resort  Sadahalli rbj

ಬೆಂಗಳೂರು, (ಸೆಪ್ಟೆಂಬರ್.16): ಬೆಂಗಳೂರು ಹೊರವಲಯದ ಸಾದಹಳ್ಳಿ ಜೆಡಿ ಗಾರ್ಡನ್ ರೆಸಾರ್ಟ್ ನಲ್ಲಿ ಮತ್ತೇರಿಸೋ ರೇವ್ ಪಾರ್ಟಿ ಮೇಲೆ ಪೊಲೀಸರು ದಾಳಿ ನಡೆದಿದ್ದು, ಈ ನಶೆ ಲೋಕದ ಪಾರ್ಟಿಯಲ್ಲಿ ಬಳ್ಳಾರಿ ಗಣಿ ಉದ್ಯಮಿ ಪುತ್ರ ಸೇರಿದಂತೆ ಪ್ರಭಾವಿ ರಾಜಕಾರಣಿಗಳ ಪುತ್ರರು ಭಾಗಿಯಾಗಿದ್ದಾರೆ ಎಂದು ತಿಳಿದುಬಂದಿದೆ.

ಸೆಪ್ಟೆಂಬರ್ 6ರಂದು ಕೆಐಎಎಲ್ ಏರ್​ ಪೋರ್ಟ್ ಠಾಣಾ ವ್ಯಾಪ್ತಿಯಲ್ಲಿ ಜೆಡಿ ಗಾರ್ಡನ್ ರೆಸಾರ್ಟ್ ನಲ್ಲಿ ಪಾರ್ಟಿ ಆಯೋಜಿಸಿದ್ದರ ಹಿನ್ನೆಲೆಯಲ್ಲಿ ಎಫ್‌ಐಆರ್ ದಾಖಲಾಗಿದ್ದು, ಎಫ್‌ ಐ ಆರ್‌ ದಾಖಲಾಗುತ್ತಿದ್ದಂತೆ ಪ್ರಕರಣವನ್ನು ಸಿಸಿಬಿಗೆ ಹಸ್ತಾಂತರ ಮಾಡಲಾಗಿದೆ. ಆದ್ರೆ, ಸಿಸಿಬಿ ಪೊಲೀಸರು ಪ್ರಭಾವಿಗಳ ಪುತ್ರರನ್ನು ರಕ್ಷಿಸಲು ಮುಂದಾಗಿದ್ದು, ಪ್ರಕರಣ ಮುಚ್ಚಿಹಾಕಲು ಪ್ಲಾನ್‌ ನಡೆಸಿದ್ದಾರೆ ಎಂಬ ಆರೋಪ ಕೇಳಿಬಂದಿದೆ.

Bengaluru ;ಬರೋಬ್ಬರಿ 928 ಕದ್ದ ಮೊಬೈಲ್ ಫೋನ್‌ಗ ಜಪ್ತಿ, 105 ಆರೋಪಿಗಳ ಬಂಧನ!

ಇದೀಗ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಲೀಕ ಶ್ರೀನಿವಾಸ್‌ ಸೇರಿ 9 ಮಂದಿ ಜನರ ವಿರುದ್ಧ ಎಫ್‌ ಐ ಆರ್‌ ದಾಖಲಾಗಿದೆ. ಪ್ರಭಾವಿ ರಾಜಕಾರಣಿ ಪುತ್ರರ ಹೆಸರು ನಾಪತ್ತೆಯಾಗಿದೆ.

ಹೊರ ದೇಶದ-ಹೊರ ರಾಜ್ಯದ ಯುವತಿಯರ ಕರೆ ತಂದು ವೇಶ್ಯಾವಾಟಿಕೆ ನಡೆದಿತ್ತು. ಆ ವೇಳೆ ಯುವತಿಯರು ವೀಸಾ-ಪಾಸ್ ಪೋರ್ಟ್ ಹಾಜರುಪಡಿಸಲು ನಿರಾಕರಿಸಿದ್ದಾರೆ. ಹಾಗಾಗಿ ಮಾನವ ಕಳ್ಳಸಾಕಣೆ ಕಾಯ್ದೆ ಅಡಿ ಎಫ್ ಐಆರ್ ದಾಖಲಾಗಿತ್ತು. ಜೆಡಿ ಗಾರ್ಡನ್ ಮಾಲೀಕ ಶ್ರೀನಿವಾಸ್ ಸುಬ್ರಮಣ್ಯ ಸೇರಿದಂತೆ 9 ಆರೋಪಿಗಳ ವಿರುದ್ದ ಮಾತ್ರ ಕೇಸ್ ದಾಖಲು ಮಾಡಿಕೊಳ್ಳಲಾಗಿದೆ.

40ಕ್ಕೂ ಹೆಚ್ಚು ಜನರ ರೇವ್ ಪಾರ್ಟಿಯಲ್ಲಿ ಭಾಗಿಯಾಗಿದ್ದರು. ಆದ್ರೆ, ಕೇವಲ 9 ಜನರ ವಿರುದ್ದ ಕೇಸ್ ದಾಖಲಾಗಿರುವುದು ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ. ಪ್ರಮುಖವಾಗಿ ಬಳ್ಳಾರಿ ಮೂಲದ ಗಣಿ ಉದ್ಯಮಿ ಪುತ್ರ ನಿತಿನ್ ಬಚಾವ್ ಮಾಡಲು ಯತ್ನಿಸಲಾಗುತ್ತಿದೆ ಎಂದು ತಿಳಿದುಬಂದಿದೆ.

Latest Videos
Follow Us:
Download App:
  • android
  • ios