Asianet Suvarna News Asianet Suvarna News

Bengaluru ;ಬರೋಬ್ಬರಿ 928 ಕದ್ದ ಮೊಬೈಲ್ ಫೋನ್‌ಗ ಜಪ್ತಿ, 105 ಆರೋಪಿಗಳ ಬಂಧನ!

ಬೆಂಗಳೂರು ಪಶ್ಚಿಮ ವಲಯದ ಪೊಲೀಸರು ಭರ್ಜರಿ ಕಾರ್ಯಾಚರಣೆ ನಡೆಸಿ ಬರೋಬ್ಬರಿ 928 ಕದ್ದ ಮೊಬೈಲ್ ಫೋನ್‌ಗಳು ಜಪ್ತಿ ಮಾಡಿ 105 ಆರೋಪಿಗಳ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

Bengaluru  police  massive operation seized 928 stolen mobile phones and 105 accused arrested gow
Author
First Published Sep 16, 2022, 3:36 PM IST

ಕಿರಣ್.ಕೆ.ಎನ್.ಏಷ್ಯಾನೆಟ್ ಸುವರ್ಣ ನ್ಯೂಸ್

ಬೆಂಗಳೂರು (ಸೆ.16): ಬೆಂಗಳೂರು ಪಶ್ಚಿಮ ವಲಯದ ಪೊಲೀಸರು ಭರ್ಜರಿ ಕಾರ್ಯಾಚರಣೆ ನಡೆಸಿ ಬರೋಬ್ಬರಿ 928 ಕದ್ದ ಮೊಬೈಲ್ ಫೋನ್‌ಗಳು ಜಪ್ತಿ ಮಾಡಿ 105 ಆರೋಪಿಗಳ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಇಂದು ಬೆಂಗಳೂರಿನಲ್ಲಿ ಸುದ್ದಿಗೋಷ್ಠಿ ನಡೆಸಿದ ಬೆಂಗಳೂರು ನಗರ ಪೊಲೀಸ್ ಆಯುಕ್ತ ಪ್ರತಾಪ್ ರೆಡ್ಡಿ , ಕೇಂದ್ರ, ಪಶ್ಚಿಮ, ದಕ್ಷಿಣ, ಹಾಗೂ ಉತ್ತರ ವಿಭಾಗದ ವಿವಿಧ ಠಾಣಾ ವ್ಯಾಪ್ತಿಯ ರಾಜಾಜಿನಗರ, ನಂದಿನಿ ಲೇಔಟ್ ,ಜೆ.ಜೆ.ನಗರ ,ಉಪ್ಪಾರಪೇಟೆ, ಕಬ್ಬನ್ ಪಾರ್ಕ್ ಸೇರಿದಂತೆ ಹಲವು ಪೊಲೀಸ್ ಠಾಣೆಗಳಲ್ಲಿ ಮೊಬೈಲ್ ರಾಬರಿ ಪ್ರಕರಣಗಳು ದಾಖಲಾಗಿದ್ದವು. ಮೊಬೈಲ್ ಕಳುವು ಪ್ರಕರಣಗಳ ಪತ್ತೆಗೆ ವಿಶೇಷ ಕಾರ್ಯಾಚರಣೆ ಕೈಗೊಂಡ ಪೊಲೀಸರು ಕಳೆದ 1 ತಿಂಗಳ ಅವಧಿಯಲ್ಲಿ 105 ಜನ ಆರೋಪಿಗಳ ಬಂಧಿಸಿದ್ದಾರೆ. ಮೊಬೈಲ್ ನಲ್ಲಿ ಮಾತನಾಡಿಕೊಂಡು ಹೋಗುವವರನ್ನು ಟಾರ್ಗೇಟ್ ಮಾಡಿ ಬೈಕ್ ನಲ್ಲಿ ಬರುತ್ತಿದ್ದ  ಆರೋಪಿಗಳು ಮೊಬೈಲ್ ಕಸಿಯುತ್ತಿದ್ದರು. ಹಾಗೇ ಬಸ್ ಗಳಲ್ಲಿ ಓಡಾಡುವ ಪ್ರಯಾಣಿಕರ ಜೇಬು ಕತ್ತರಿಸಿ ಅಥವಾ ಇನ್ಯಾವುದೋ ಮಾರ್ಗದಲ್ಲಿ ಮೊಬೈಲ್ ಕಸಿದು ಪರಾರಿಯಾಗುತ್ತಿದ್ದರು. ಇತ್ತೀಚಿನ ದಿನದಲ್ಲಿ ದುಬಾರಿ ಬೆಲೆಯ ಮೊಬೈಲ್ ರಾಬರಿ ಕೇಸ್ ಗಳು ಹೆಚ್ಚಾಗಿದ್ದವು.

ಮುರುಘಾ ಶ್ರೀಗಳ ವಿರುದ್ಧದ ಪತ್ರ ವೈರಲ್:ಸ್ವಾಮೀಜಿ ಬಳಿ ಹೆಲಿಕಾಪ್ಟರ್ ಇದೆಯೇ?

ಹೀಗಾಗಿ ಮೊಬೈಲ್ ರಾಬರಿ ಸಂಬಂಧ ಎಫ್ ಐಆರ್ ದಾಖಲಿಸುವಂತೆ ಬೆಂಗಳೂರು ನಗರ ಪೊಲೀಸ್ ಆಯುಕ್ತ ಪ್ರತಾಪ್ ರೆಡ್ಡಿ ಅಧಿಕಾರಿ ಹಾಗೂ ಸಿಬ್ಬಂದಿಗೆ ಸೂಚಿಸಿದ್ರು. ಅದರಂತೆ ಪ್ರಕರಣ ದಾಖಲಿಸಿ ಕ್ರಮ ಕೈಗೊಂಡಿದ್ದಾರೆ. ಮೊಬೈಲ್ ಲೋಕೇಷನ್ ,ಸಿಸಿಟಿವಿ ಹಾಗೂ ರಿಸಿವರ್ ಗಳನ್ನು ಅರೆಸ್ಟ್ ಮಾಡುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ. ಕಾಮಾಕ್ಷಿಪಾಳ್ಯ ಒಂದೇ ಠಾಣೆಯಲ್ಲಿ ಇನ್ಸ್ ಪೆಕ್ಟರ್ ಲೋಹಿತ್ ಹಾಗೂ ತಂಡ ಒಬ್ಬನಿಂದಲೇ ನೂರಾರು ಮೊಬೈಲ್ ಜಪ್ತಿ ಮಾಡಿದ್ದಾರೆ. ಮೊಬೈಲ್ ಗಳನ್ನು ಪ್ಯಾಕ್ ಮಾಡಿ ಆಂದ್ರಗೆ ಸರಬರಾಜು ಮಾಡುತ್ತಿದ್ದರು ಎಂದು ತನಿಖೆ ವೇಳೆ ಬಯಲಾಗಿದೆ.

Vijayapura; ಚೆಲುವಿನ ಚಿತ್ತಾರ ರೀತಿ ಹುಡುಗಿ ಜೊತೆಗೆ ಮಗ ಪರಾರಿ, ಮಗನ ತಪ್ಪಿಗೆ ಅಪ್ಪನಿಗೆ

ಕೇಂದ್ರ ವಿಭಾಗದಲ್ಲಿ 121, ಪಶ್ಚಿಮ ವಿಭಾಗದಲ್ಲಿ 334, ದಕ್ಷಿಣ ವಿಭಾಗದಲ್ಲಿ 342, ಉತ್ತರ ವಿಭಾಗದಲ್ಲಿ 131 ಮೊಬೈಲ್ ಗಳು ಜಪ್ತಿ ಮಾಡಲಾಗಿದೆ.. ವಶಪಡಿಸಿಕೊಂಡ ಮೊಬೈಲ್ ಗಳ ಮಾಹಿತಿಯನ್ನ ಪೊಲೀಸ್ ವೆಬ್‌ಸೈಟ್ ನಲ್ಲಿ ನಗರದ ಪೊಲೀಸರು  ಪ್ರಕಟಿಸಲಿದ್ದಾರೆ. ಐಎಂಇಐ ನಂಬರ್ ಪರಿಶೀಲಿಸಿ ಮಾಲೀಕರು ವಾಪಾಸ್ ಪಡೆಯಬಹುದಾಗಿದೆ. ವಿಶೇಷ ಅಂದ್ರೆ ಆರೋಪಿಗಳು ಕದ್ದ ಮೊಬೈಲ್ ಗಳನ್ನು ,25 ಸಾವಿರ 50 ಸಾವಿರ ,1 ಲಕ್ಷ,  ಎಷ್ಟೇ ಬೆಲೆ ಇರಲಿ ಕೇವಲ ಎರಡು ,ಮೂರು ಸಾವಿರಕ್ಕೆ ಮಾರಾಟ ಮಾಡುತ್ತಿದ್ದರು..ಬಳಿಕ ಆ ಹಣದಲ್ಲಿ ಮೋಜು ಮಸ್ತಿ ಮಾಡುತ್ತಿದ್ರು ಅಂತ ಪೊಲೀಸರು ತಿಳಿಸಿದ್ರು.

Follow Us:
Download App:
  • android
  • ios