Asianet Suvarna News Asianet Suvarna News

ಚಿಕ್ಕಬಳ್ಳಾಪುರ: ಜೆಡಿಎಸ್ ಕಾರ್ಯಕರ್ತನದ್ದು ಆಕ್ಸಿಡೆಂಟ್ ಅಲ್ಲ ಕೊಲೆ..!

*  ಆಂಜಿನಪ್ಪ ಸಾವಿನ ಪ್ರಕರಣ ಭೇದಿಸಿದ ಶಿಡ್ಲಘಟ್ಟ ಗ್ರಾಮಾಂತರ ಪೊಲೀಸರು
*  ಪೊಲೀಸರ ತನಿಖೆಯಲ್ಲಿ ಕೊಲೆ ಎಂದು ಸಾಬೀತು
*  ಪೋನ್ ಕಾಲ್‌ನಿಂದ ಸಿಕ್ಕಿಬಿದ್ದ ವೆಂಕಟೇಶ್
 

police who broke the JDS Activist suspicious death case in Chikkaballapur grg
Author
Bengaluru, First Published Jun 15, 2022, 9:10 PM IST

ವರದಿ- ರವಿಕುಮಾರ್ ವಿ, ಏಷ್ಯಾನೆಟ್‌ ಸುವರ್ಣ ನ್ಯೂಸ್‌, ಚಿಕ್ಕಬಳ್ಳಾಪುರ

ಚಿಕ್ಕಬಳ್ಳಾಪುರ(ಜೂ.15): ಇತ್ತೀಚಿಗಷ್ಟೆ ಚಿಕ್ಕಬಳ್ಳಾಪುರ ಜಿಲ್ಲೆಯ ಶಿಡ್ಲಘಟ್ಟದಲ್ಲಿ ನಡೆದಿದ್ದ ಜೆಡಿಎಸ್ ಕಾರ್ಯಕರ್ತ ಆಂಜಿನಪ್ಪ ಅನುಮಾನಸ್ಪದ ಸಾವಿನ ಪ್ರಕರಣ ಶಿಡ್ಲಘಟ್ಟ ಗ್ರಾಮಾಂತರ ಪೊಲೀಸರು ಭೇಧಿಸಿದ್ದು, ಪೊಲೀಸರ ತನಿಖೆಯಲ್ಲಿ ಕೊಲೆ ಎಂದು ಸಾಬೀತಾಗಿದೆ.

ಹೌದು, ಕಳೆದ ಜೂ.2  ರಂದು ಶಿಡ್ಲಘಟ್ಟ ತಾಲೂಕಿನ ಕನ್ನಂಗಲ ಗ್ರಾಮದ ಜೆಡಿಎಸ್ ಕಾರ್ಯಕರ್ತ ಆಂಜಿನಪ್ಪ ಗ್ರಾಮಕ್ಕೆ ಬೈಕ್‌ನಲ್ಲಿ ತೆರಳುತಿದ್ದಾಗ ಅನುಮಾನಸ್ಪದವಾಗಿ ಸಾವನ್ನಪ್ಪಿದ್ದನು, ಆಕ್ಸಿಡೆಂಟ್ ಡೆತ್ ಅಥವಾ ಮರ್ಡರ್ ಆಗಿದೆಯಾ ಎಂದು ಪೊಲೀಸರು ಮಹಜರ್ ಮಾಡಿಕೊಂಡು ತನಿಖೆ ಮುಂದುವರೆಸಿದ್ದರು, ಇನ್ನೂ ಇದು ಕೊಲೆ ಆಗಿದೆ ಎಂದು ಆಂಜಿನಪ್ಪ ಸಹೋದರ ಅಶ್ವಥ್ ಶಿಡ್ಲಘಟ್ಟ ಗ್ರಾಮಾಂತರ ಪೊಲೀಸರಿಗೆ ದೂರು ನೀಡಿದ್ದರು. 

ತನಿಖೆ ಮುಂದುವರೆಸಿದ ಪೊಲೀಸರಿಗೆ ಕನ್ನಮಂಗಲ ಗ್ರಾಮದ ವೆಂಕಟೇಶ್ ಎಂಬಾತನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಕೊಲೆ ಮಾಡಿರುವುದಾಗಿ ತಪ್ಪೊಪ್ಪಿಕೊಂಡಿದ್ದಾನೆ. ಇದೀಗ ವೆಂಕಟೇಶ್ ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ. ಕೊಲೆ ಮಾಡಿ ಆಕ್ಸಿಡೆಂಟ್ ಆಗಿದೆ ಎಂದು ಬಿಂಬಿಸಿದ್ದ ಆಂಜಿನಪ್ಪ ಪ್ರತಿನಿತ್ಯ ಶಿಡ್ಲಘಟ್ಟಗೆ ಬಂದು ತಾಲೂಕು ಕಚೇರಿ ಬಳಿ ಸಣ್ಣ ಪುಟ್ಟ ಕೆಲಸಗಳನ್ನು ಮಾಡಿಸಿಕೊಡೊ ಕೆಲಸವನ್ನು ಮಾಡುತ್ತಿದ್ದ ಜೂನ್ 2 ರಂದು ರಾತ್ರಿ ಮನೆಗೆ ವಾಪದಸಾಗುತ್ತಿದ್ದ ವೇಳೆ ನಾರಾಯಣ ದಾಸರಹಳ್ಳಿ ಗ್ರಾಮದ ಬಳಿ ಅನುಮಾನಸ್ಪದವಾಗಿ ಸಾವನ್ನಪ್ಪಿದ್ದ, ಬೈಕ್ ನಲ್ಲಿ ತೆರಳುತಿದ್ದ ಆಂಜಿನಪ್ಪಗೆ ಅಪಘಾತ ಆಗಿದೆ ಎಂಬಂತೆ ರಸ್ತೆ ಪಕ್ಕದಲ್ಲೇ ಶವ ಬಿದ್ದಿತ್ತು. ಆದ್ರೆ ಆರೋಪಿ ವೆಂಕಟೇಶ್ ದೊಣ್ಣೆಯಿಂದ ಹೊಡೆದು ಕೊಲೆ ಮಾಡಿರುವುದಾಗಿ ವಿಚಾರಣೆ ವೇಳೆ ಬಾಯ್ಬಿಟ್ಟಿದ್ದಾನೆ.

ಚಿಕ್ಕಬಳ್ಳಾಪುರ: ಪ್ರೀತಿಸಿ ಮದುವೆಯಾದ ಮಹಿಳೆ ಅನುಮಾನಾಸ್ಪದ ಸಾವು, ಕೊಲೆ ಶಂಕೆ

ಆಸ್ತಿ ವಿಚಾರಕ್ಕಾಗಿ ಅಣ್ಣನ ಪರ ಇದ್ದಿದ್ದಕ್ಕೆ ತಮ್ಮನಿಂದ ಕೊಲೆ

ಹೌದು, ಆಂಜಿನಪ್ಪ ತಮ್ಮದೇ ಗ್ರಾಮದ ನಾಗೇಶ್ ಹಾಗೂ ವೆಂಕಟೇಶ್ ಎಂಬ ಇಬ್ಬರು ಸಹೋದರರ ನಡುವೆ ಆಸ್ತಿ ವಿವಾದ ಇದ್ದು, ಆಂಜಿನಪ್ಪ ನಾಗೇಶ್ ಎಂಬಾತನ ಪರ ಇದ್ದು, ತಾಲೂಕು ಕಚೇರಿ ಬಳಿ ಓಡಾಡಿಕೊಂಡಿದ್ದಾನೆ.. ನನಗೆ ಜಮೀನು ಇಲ್ಲದೇ, ನನ್ನ ಅಣ್ಣ ನಾಗೇಶ್‌ನಿಗೆ ಮಾಡಿಕೊಟ್ಟುಬಿಡ್ತಾನೆ ಎಂದು ಭಾವಿಸಿಕೊಂಡು ವೆಂಕಟೇಶ್ ಆಂಜಿನಪ್ಪನನ್ನು ಕೊಲೆ ಮಾಡದೇ ಹೋದ್ರೆ ನನಗೆ ಜಮೀನು ಸಿಗಲ್ಲ ಎಂದುಕೊಂಡು ಆಂಜಿನಪ್ಪನನ್ನು ಕೊಲೆ ಮಾಡಿಬಿಟ್ಟಿದ್ದಾನೆ.

ಪೋನ್ ಕಾಲ್‌ನಿಂದ ಸಿಕ್ಕಿಬಿದ್ದ ವೆಂಕಟೇಶ್

ಆಂಜಿನಪ್ಪನ ಮೃತದೇಹ ಬಳಿ ಪೊಲೀಸರು ಪರಿಶೀಲನೆ ನಡೆಸಿದಾಗ ಅನುಮಾನಸ್ಪದ ಸಾವು ಎಂದು ನಿಖೆ ನಡೆಸಿದಾಗ, ಆಂಜಿನಪ್ಪನಿಗೆ ಕೊಲೆಯಾದ ದಿನ ಸಾಕಷ್ಟು ಬಾರಿ ಕರೆ ಮಾಡಿದ ನಂಬರ್ ರಿಶೀಲಿಸಿದಾಗ ಅದು ಅದೇ ಗ್ರಾಮದ ವೆಂಕಟೇಶ್ ಎಂಬಾತನದ್ದಾಗಿದ್ದು, ಆತನದ್ದೆ ಅಂತಿಮ ರೆ ಕೂಡ ಆಗಿರುತ್ತದೆ. ಈ ಹಿನ್ನೆಲೆ ವೆಂಕಟೇಶ್ ನನ್ನು ವಶಕ್ಕೆ ಪಡೆದು ಪೊಲೀಸರು ಚಾರಣೆ ನಡೆಸಿದಾಗ ಪ್ರಕರಣ ಬಯಲಿಗೆ ಬಂದಿದೆ. ಆಸ್ತಿ ವಿಚಾರಕ್ಕಾಗಿ ಕೊಲೆ ಡಿರೋದಾಗಿ ಬೆಳಕಿಗೆ ಬಂದಿದೆ. ಇನ್ನೂ ಈ ಈ ಪ್ರಕರಣವನ್ನು ಪತ್ತೆ ಹಚ್ಚಿದ ನ್ಸಪೆಕ್ಟರ್ ಧರ್ಮೆಗೌಡ, ಪಿಎಸ್ಐ ಸತೀಶ್ ಹಾಗೂ ಸಿಬ್ಬಂದಿಯನ್ನು ಎಸ್‌ಪಿ  ಮಿಥುನ್ ಮಾರ್ ಅಭಿನಂಧಿಸಿದ್ದಾರೆ.
 

Follow Us:
Download App:
  • android
  • ios