ಚಿಕ್ಕಬಳ್ಳಾಪುರ: ಬಂಧಿತರ ಬಳಿ ಇದ್ದ ಹಣ ದೋಚಿದ ಪೊಲೀಸರು
ಚಿಕ್ಕಬಳ್ಳಾಪುರ ಜಿಲ್ಲೆಯ ಬಾಗೇಪಲ್ಲಿ ಠಾಣೆಯ ಕೆಲವು ಪೊಲೀಸರು ಹಾಗೂ ಚೇಳೂರು ಪೊಲೀಸ್ ಠಾಣೆಯ ಪೊಲೀಸ್ ಇನ್ಸ್‌ಪೆಕ್ಟರ್ ಒಬ್ಬರು ಮಾಡಿದ ದರೋಡಿಯಿಂದಾಗಿ ಇಡೀ ಪೊಲೀಸ್ ಇಲಾಖೆ ತಲೆ ತಗ್ಗಿಸುವಂತಾಗಿದೆ.
ಚಿಕ್ಕಬಳ್ಳಾಪುರ(ಆ.10): ಕಳ್ಳ ಕಾಕರು, ದರೋಡೆಕೊರರು, ವಂಚಕರನ್ನು ಹೆಡೆಮುರಿ ಕಟ್ಟಿ ಅವರಿಗೆ ಕಾನೂನು ಪಾಠ ಕಲಿಸಬೇಕಾದ ಪೊಲೀಸರೇ ದರೋಡೆ ಮಾಡಿ ಸಿಕ್ಕಿಬಿದ್ದ ಘಟನೆ ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ನಡೆದಿದೆ.
ಜಿಲ್ಲೆಯ ಬಾಗೇಪಲ್ಲಿ ಠಾಣೆಯ ಕೆಲವು ಪೊಲೀಸರು ಹಾಗೂ ಚೇಳೂರು ಪೊಲೀಸ್ ಠಾಣೆಯ ಪೊಲೀಸ್ ಇನ್ಸ್‌ಪೆಕ್ಟರ್ ಒಬ್ಬರು ಮಾಡಿದ ದರೋಡಿಯಿಂದಾಗಿ ಇಡೀ ಪೊಲೀಸ್ ಇಲಾಖೆ ತಲೆ ತಗ್ಗಿಸುವಂತಾಗಿದೆ.
2000 ಮುಖಬೆಲೆಯ ನೋಟು ಬದಲಾವಣೆ
ಮಂಡ್ಯ ಮೂಲದ ತ್ರೀವೇಣಿ ಹಾಗೂ ಆಕೆಯ ತಂಡವನ್ನು ಪರಿಚಯ ಮಾಡಿಕೊಂಡ ಚಿಕ್ಕಬಳ್ಳಾಪುರ ಜಿಲ್ಲೆಯ ಬಾಗೇಪಲ್ಲಿ ಮೂಲದ ಕೆಲವು ವಂಚಕರು, ತಮ್ಮ ಬಳಿ ಇರುವ ಎರಡು ಸಾವಿರ ನೋಟುಗಳನ್ನು ಐನೂರು ರೂಪಾಯಿ ನೋಟುಗಳಿಗೆ ಬದಲಾಯಿಸಬೇಕಿದೆ. 10 ಲಕ್ಷ ರೂಪಾಯಿ ಮೌಲ್ಯದ .500 ಮುಖಬೆಲೆಯ ನೋಟುಗಳನ್ನು ನೀಡಿದರೆ ಅದಕ್ಕೆ 12.50 ಲಕ್ಷ ರೂಪಾಯಿ ನೀಡುವುದಾಗಿ ಡೀಲ್ ಕುದುರಿಸಿದ್ದಾರೆ. ಅದರಂತೆ ತ್ರೀವೇಣಿ ಹಾಗೂ ಆಕೆಯ ತಂಡ ವಂಚಕರನ್ನು ನಂಬಿ ಐನೂರು ನೋಟುಗಳ ಬ್ಯಾಗ್ ಸಮೇತ ಚಿಕ್ಕಬಳ್ಳಾಫುರ ಜಿಲ್ಲೆ ಬಾಗೇಪಲ್ಲಿ ತಾಲೂಕಿನ ಗಡಿದಂ ಗ್ರಾಮಕ್ಕೆ ಬಂದಿದ್ದಾರೆ.
ಚಾಮರಾಜನಗರ: ಮಾದಪ್ಪನ ಸನ್ನಿಧಿಯಲ್ಲಿ ಗಾಂಜಾ ಮಾರಾಟ, ಮೂವರ ಬಂಧನ
ಬಾಗೇಪಲ್ಲಿ ಪೊಲೀಸರ ಎಂಟ್ರಿ
ಅಷ್ಟೊತ್ತಿಗೆ ಅಲ್ಲಿಗೆ ಬಂದ ಸ್ಥಳಿಯ ಕೆಲವು ವಂಚಕರು ತಮ್ಮ ಬಳಿ ಇದ್ದ ಎರಡು ಸಾವಿರ ರೂಪಾಯಿ ಮುಖ ಬೆಲೆಯ ಬ್ಯಾಗ್ ಅನ್ನು ತೊರಿಸಿದ್ದಾರೆ. ಆಗ ಸ್ಥಳಿಯ ಬಾಗೇಪಲ್ಲಿ ಪೊಲೀಸ್ ಠಾಣೆಯ ಸಿಬ್ಬಂದಿ ಆರೋಪಿ ತ್ರೀವೇಣಿ ಹಾಗೂ ಆಕೆಯ ತಂಡವನ್ನು ವಶಕ್ಕೆ ಪಡೆದಿದ್ದಾರೆ. ಆದರೆ ವಂಚಕರ ತಂಡವನ್ನು ಬಂಧಿಸಲಿಲ್ಲ ಎನ್ನಲಾಗಿದೆ. ಮಹಿಳೆಯ ನೇತೃತ್ವದ ತಂಡವನ್ನು ಠಾಣೆಗೆ ಕರೆತಂದು ಎರಡು ದಿನ ಅಕ್ರಮವಾಗಿ ಇರಿಸಿದ್ದು, ಬಳಿಕ ಬಂಧಿತರ ಬಳಿ ಇದ್ದ ಕಂತೆ ಕಂತೆ ಹಣವನ್ನು ಪೊಲೀಸರು ಕಿತ್ತುಕೊಂಡು ಬಂಧಿತರನ್ನು ಠಾಣೆಯಿಂದ ಕಳುಹಿಸಿದ್ದಾರೆ.
ಕಲಬುರಗಿ: ಜೈಲಿನಲ್ಲಿರುವ ಗೆಳೆಯನಿಗೆ ಗಾಂಜಾ ಸರಬರಾಜು ಮಾಡಲು ಯತ್ನ, ಇಬ್ಬರು ವಶ
ಪ್ರಕರಣ ಬಯಲಾಗಿದ್ದು ಹೇಗೆ?
ಹಣ ಕಳೆದುಕೊಂಡು ಠಾಣೆಯಿಂದ ಆಚೆ ಬಂದ ಮಂಡ್ಯದ ತ್ರಿವೇಣಿ ನೇತೃತ್ವದ ತಂಡಕ್ಕೆ ಪೊಲೀಸರ ಮೇಲೆ ಅನುಮಾನ ಬಂದಿದೆ. ಅವರು ನೇರವಾಗಿ ಚಿಕ್ಕಬಳ್ಳಾಪುರ ಜಿಲ್ಲೆ ಶಿಡ್ಲಘಟ್ಟತಾಲೂಕಿನ ದಿಬ್ಬೂರಹಳ್ಳಿ ಪೊಲೀಸ್ ಠಾಣೆಗೆ ಆಗಮಿಸಿ ಪಿಎಸ್‌ಐ ರಾಜೇಶ್ವರಿಯನ್ನು ಭೇಟಿಯಾಗಿ ನಡೆದ ಘಟನೆಯನ್ನು ವಿವರಿಸಿದ್ದಾರೆ. ಆಗ ಈ ವಿಷಯವನ್ನು ಪಿಎಸ್‌ಐ ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿ ಡಿ.ಎಲ್.ನಾಗೇಶ್‌ರ ಗಮನಕ್ಕೆ ತಂದಿದ್ದಾರೆ.
ಎಸ್ಪಿ ನಾಗೇಶ್ ಗಮನಕ್ಕೆ ತಂದ ಎಸ್‌ಐ?
ಪ್ರಕರಣದ ಗಂಭೀರತೆ ಅರಿತ ಚಿಕ್ಕಬಳ್ಳಾಪುರ ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿ ಡಿ.ಎಲ್.ನಾಗೇಶ್ ದೂರುದಾರರಿಂದ ಮಾಹಿತಿ ಪಡೆದಿದ್ದಾರೆ. ನಂತರ ಪ್ರಕರಣದಲ್ಲಿ ಆರೋಪಿಗಳಾದ ಇಬ್ಬರು ಪೊಲೀಸ್ ಸಿಬ್ಬಂದಿಗಳನ್ನು ಕರೆಸಿ ತನಿಖೆ ನಡೆಸಿದ್ದಾರೆ. ಆಗ ಸಿಬ್ಬಂದಿ ಚೇಳೂರು ಪೊಲೀಸ್ ಠಾಣೆಯ ಪೊಲೀಸ್ ಇನ್ಸ್‌ಪೆಕ್ಟರ್ ಹಾಗೂ ಬಾಗೇಪಲ್ಲಿ ಠಾಣೆಯ ಪ್ರಭಾರ ಇನ್ಸ್‌ಪೆಕ್ಟರ್ ರವಿಕುಮಾರ್ ಹೇಳಿದಂತೆ ಮಾಡಿದ್ದಾಗಿ ಹೇಳಿ, ಮಾತುಕತೆಯ ಆಡಿಯೋ ಹಾಗೂ ಕೆಲ ದಾಖಲೆಗಳನ್ನು ಎಸ್ಪಿ ಯವರಿಗೆ ಒಪ್ಪಿಸಿದ್ದಾರೆ ಎನ್ನಲಾಗಿದೆ.