ಆರೋಪಿಗಳಿಂದ ಮಾರಾಟ ಮಾಡಲು ಯತ್ನಿಸುತ್ತಿದ್ದ 200 ಗ್ರಾಂ ಗಾಂಜಾವನ್ನು ವಶಪಡಿಸಿಕೊಂಡ ಪೊಲೀಸರು. 

ಹನೂರು(ಆ.09): ಚಾಮರಾಜನಗರ ಜಿಲ್ಲೆ ಮಲೆ ಮಹದೇಶ್ವರ ಬೆಟ್ಟದ ಮುಡಿಶೆಡ್‌ ಸಮೀಪದ ಹಣ್ಣು ಕಾಯಿ ಮಾರಾಟ ಕೇಂದ್ರದ ಬಳಿ ಗಾಂಜಾ ಮಾರಾಟಕ್ಕೆ ಯತ್ನಿಸುತ್ತಿದ್ದ ಮೂವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.

ಬೆಂಗಳೂರಿನ ಅಭಿಷೇಕ್‌ (23), ಹಾವೇರಿಯ ಆದರ್ಶ (22) ಹಾಗೂ ಮೈಸೂರಿನ ಉದಯಕುಮಾರ್‌ (22) ಬಂಧಿತ ಆರೋಪಿಗಳು. ಆರೋಪಿಗಳಿಂದ ಮಾರಾಟ ಮಾಡಲು ಯತ್ನಿಸುತ್ತಿದ್ದ 200 ಗ್ರಾಂ ಗಾಂಜಾವನ್ನು ವಶಪಡಿಸಿಕೊಳ್ಳಲಾಗಿದೆ.

ಚಾಮರಾಜನಗರ: ಶಿವನಸಮುದ್ರದಲ್ಲಿ ಸಿಲುಕಿದ 6 ಮಂದಿ ಕುಟುಂಬ, ಸ್ಥಳಿಯರಿಂದ ಬಚಾವ್‌

ಮಾದಪ್ಪನ ಹುಂಡಿಯಲ್ಲಿ 2.47 ಕೋಟಿ ಸಂಗ್ರಹ

ಹನೂರು : ಪ್ರಸಿದ್ಧ ಯಾತ್ರಾತಾಣ ಮಲೆಮಹದೇಶ್ವರ ಬೆಟ್ಟದ ಮಾದಪ್ಪನ ಸನ್ನಿಧಿಯ ಹುಂಡಿಯಲ್ಲಿ ಒಂದು ವಾರದ ಅವಧಿಯಲ್ಲಿ 2.47 ಕೋಟಿ ರು.ಸಂಗ್ರಹವಾಗಿದೆ. 2023ರ ಮೆ 30 ರಿಂದ ಜು.5 ರವರೆಗೆ ಸಂಗ್ರಹವಾಗಿದ್ದ ಕಾಣಿಕೆ ಹಣವನ್ನು ಮಲೆಮಹದೇಶ್ವರ ಬೆಟ್ಟದ ಬಸ್‌ ನಿಲ್ದಾಣದಲ್ಲಿರುವ ವಾಣಿಜ್ಯ ಸಂಕೀರ್ಣದಲ್ಲಿ ಬೆಳಗ್ಗೆ ಸಿಸಿ ಕ್ಯಾಮೆರಾ ಕಣ್ಗಾವಲಿನಲ್ಲಿ ಹಾಗೂ ಬಿಗಿ ಪೊಲೀಸ್‌ ಬಂದೋಬಸ್‌್ತನಲ್ಲಿ ಎಣಿಕೆ ಮಾಡಲಾಯಿತು. ಈ ಬಾರಿ ರಾಜ್ಯದ ಹಲವು ಜಿಲ್ಲೆಗಳು ಸೇರಿದಂತೆ ನೆರೆ ರಾಜ್ಯದಿಂದಲೂ ಲಕ್ಷಾಂತರ ಜನರು ಮಹದೇಶ್ವರ ಬೆಟ್ಟಕ್ಕೆ ಆಗಮಿಸಿದ್ದರು, ಶಕ್ತಿ ಯೋಜನೆಯ ಹಿನ್ನೆಲೆಯಲ್ಲಿ ಕಳೆದ 36 ದಿನ ಗಳ ಅವಧಿಯಲ್ಲಿ 2,4715,655 ರು. ಹಾಗೂ 77 ಗ್ರಾಂ ಚಿನ್ನ ಹಾಗೂ 2.250 ಗ್ರಾಂ ಬೆಳ್ಳಿ ಸಂಗ್ರಹವಾಗಿದೆ ಎಂದು ಪ್ರಾಧಿಕಾರ ತಿಳಿಸಿದೆ.