ಶಿವಮೊಗ್ಗ: ವೇಶ್ಯಾವಾಟಿಕೆ ಅಡ್ಡೆ ಮೇಲೆ ದಾಳಿ: ಇಬ್ಬರು ಪುರಷರು ಸೇರಿ ಮೂವರು ಮಹಿಳೆಯರು ವಶಕ್ಕೆ
ವೇಶ್ಯಾವಾಟಿಕೆ ದಂಧೆ ನಡೆಸುತ್ತಿದ್ದ ಮನೆಯೊಂದರ ಮೇಲೆ ಪೊಲೀಸರು ದಾಳಿ ನಡೆಸಿ ಮೂವರು ಮಹಿಳೆಯರು ಸೇರಿದಂತೆ ಇಬ್ಬರು ಪುರುಷರನ್ನು ವಶಕ್ಕೆ ಪಡೆದಿದ್ದಾರೆ.
ಶಿವಮೊಗ್ಗ (ಜೂ.23) ವೇಶ್ಯಾವಾಟಿಕೆ ದಂಧೆ ನಡೆಸುತ್ತಿದ್ದ ಮನೆಯೊಂದರ ಮೇಲೆ ಪೊಲೀಸರು ದಾಳಿ ನಡೆಸಿ ಮೂವರು ಮಹಿಳೆಯರು ಸೇರಿದಂತೆ ಇಬ್ಬರು ಪುರುಷರನ್ನು ವಶಕ್ಕೆ ಪಡೆದಿದ್ದಾರೆ.
ತೀರ್ಥಹಳ್ಳಿ ಪಟ್ಟಣದ ಮಧ್ಯಭಾಗದಲ್ಲಿ ವೇಶ್ಯಾವಾಟಿಕೆ ನಡೆಸುತ್ತಿದ್ದರು. ಈ ಬಗ್ಗೆ ಖಚಿತ ಮಾಹಿತಿ ಪಡೆದು ರಾತ್ರಿ ವೇಳೆ ಮನೆಯ ಮೇಲೆ ದಾಳಿ ನಡೆಸಿದ ಪೊಲೀಸರು. ಕಮ್ಮರಡಿಯ ಪ್ರಶಾಂತ್ ಮತ್ತು ಮೇಲಿನ ಕುರುವಳ್ಳಿಯ ಮಂಜುನಾಥ್ ಎಂಬುವರು ವಶಕ್ಕೆ ಪಡೆದಿರುವ ಪೊಲೀಸರು. ಇನ್ನು ಇಲ್ಲಿ ಸಿಕ್ಕಿಬಿದ್ದ ಮೂವರು ಮಹಿಳೆಯರು ಬೆಂಗಳೂರು ಮೂಲದವರಾಗಿದ್ದು ರಕ್ಷಣೆ ಮಾಡಲಾಗಿದೆ.
ಬೆಂಗಳೂರು: ಲಾಡ್ಜ್‌ನಲ್ಲಿ ವೇಶ್ಯಾವಾಟಿಕೆ ಮಹಿಳೆ ರಕ್ಷಣೆ, ಓರ್ವ ಸೆರೆ
ಬಾಡಿಗೆ ಮನೆ ಪೆಡದು ವೇಶ್ಯಾವಾಟಿಕೆ:
ಆರೋಪಿ ಪ್ರಶಾಂತ ವೇಶ್ಯಾವಾಟಿಕೆ ನಡೆಸಲೆಂದೇ ಬಾಡಿಗೆ ಮನೆ ಪಡೆದುಕೊಂಡಿದ್ದ. ಬೆಂಗಳೂರಿನ ಯುವತಿಯರನ್ನು ಕರೆತಂದು ವೇಶ್ಯಾವಾಟಿಕೆ ನಡೆಸುತ್ತಿದ್ದ ಎನ್ನಲಾಗಿದೆ. ಸದ್ಯ ಈ ಘಟನೆ ಸಂಬಂಧ ತೀರ್ಥಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ವಿಚಾರಣೆ ಮುಂದುವರಿಸಿದ್ದಾರೆ. ಬಂಧಿತ ಮಹಿಳೆಯರನ್ನು ಸಾಂತ್ವನ ಕೇಂದ್ರಕ್ಕೆ ಕಳುಹಿಸಲಾಗಿದೆ.
ಶಿರಾಳಕೊಪ್ಪ ಪೋಲಿಸರ ಭರ್ಜರಿ ಕಾರ್ಯಾಚರಣೆ
ಶಿರಾಳಕೊಪ್ಪ (ಜೂ.23) :ಪಟ್ಟಣದ ರೆಹಮಾನಿಯಾ ಸಾಮೀಲ್ ಮೇಲೆ ಪೊಲೀಸರು ದಾಳಿ ನಡೆಸಿ ಅಕ್ರಮವಾಗಿ ಕೂಡಿಟ್ಟಿದ್ದ ಒಂಟೆಯನ್ನು ವಶಕ್ಕೆ ಪಡೆದಿದ್ದಾರೆ.
ಶಿವಮೊಗ್ಗದ ಶಿಕಾರಿಪುರ ತಾಲೂಕಿನ ಶಿರಾಳಕೊಪ್ಪ ಪಟ್ಟಣದಲ್ಲಿ ಇರುವ ಸೈಯದ್ ಬಿಲಾಲ್ ಎಂಬುವ ವ್ಯಕ್ತಿಗೆ ಸೇರಿದ ರೆಹಮಾನಿಯಾ ಸಾಮೀಲ್ ನಲ್ಲಿ ಅನಧಿಕೃತ ಒಂಟೆ ಸಾಕಿರುವ ಬಗ್ಗೆ ಖಚಿತ ಮಾಹಿತಿ ಮೇರೆಗೆ ಶಿರಾಳಕೊಪ್ಪ ಪಟ್ಟಣ ಪೋಲಿಸರು ದಾಳಿ ನಡೆಸಿ ಒಂಟೆ ವಶಕ್ಕೆ ಪಡೆದ ಪೊಲೀಸರು. ಬಳಿಕ ಶಿವಮೊಗ್ಗದ ಸಂತೆಕಡೂರಿನಲ್ಲಿರುವ ಅಮೃತ ಗೋಶಾಲೆಗೆ ಒಂಟೆ ರವಾನೆ ಮಾಡಿದ್ದಾರೆ.
Wildlife: ಸುಣ್ಣದ ಡಬ್ಬಿ ನುಂಗಿ ನರಳಾಡಿದ ನಾಗರಹಾವಿಗೆ ಡಾಕ್ಟರ್ ಯಶಸ್ವಿ ಶಸ್ತ್ರ ಚಿಕಿತ್ಸೆ!
ಬಕ್ರಿದ್ ಹಬ್ಬಕ್ಕೆ ಒಂಟೆಯನ್ನು ಕಡಿಯುವ ಉದ್ದೇಶದಿಂದ ಒಂಟೆಯನ್ನು ಆಕ್ರಮವಾಗಿ ತಂದು ಇಡಲಾಗಿತ್ತು ಎಂಬ ಆರೋಪ. ಆದರೆ ಬಿಲಾಲ್ ಈ ರೀತಿ ಪ್ರಾಣಿಗಳನ್ನ ತಂದು ಸಾಕುವುದು ಇದು ಎರಡನೇ ಪ್ರಕರಣವಾಗಿದೆ. ಈ ಹಿಂದೆ ಆಕ್ರಮವಾಗಿ ಜಿಂಕೆ ಮರಿಯನ್ನು ತನ್ನ ಸಾಮಿಲ್ ನಲ್ಲಿ ಕಟ್ಟಿ ಹಾಕಿದ್ದರ ಬಗ್ಗೆ ಪ್ರಕರಣ ದಾಖಲಾಗಿತ್ತು. ಇದೀಗ ಒಂಟಿಯನ್ನು ತಂದು ಶಾಮಿಲ್ ನಲ್ಲಿ ಆಕ್ರಮವಾಗಿ ತಂದಿಟ್ಟುಕೊಂಡು ಮತ್ತೊಂದು FIR ಹಾಕಿಸಿಕೊಂಡಿದ್ದಾರೆ. ಪ್ರಾಣಿ ಸಂರಕ್ಷಣಾ ಕಾಯ್ದೆಯ ಅಡಿಯಲ್ಲಿ ಪ್ರಕರಣ ದಾಖಲಿಸಿ ಒಂಟೆಯ ರಕ್ಷಣೆ ಮಾಡಲಾಗಿದೆ.