ಲಾಕ್‌ಡೌನ್ ಬಂಡವಾಳ ಮಾಡಿಕೊಂಡು ಕಳ್ಳಭಟ್ಟಿ ಮಾರುತ್ತಿದ್ದ ಆರೋಪಿ ಅಂದರ್
*ಕಳ್ಳಭಟ್ಟಿ ಮಾರುತ್ತಿದ್ದ ಆರೋಪ ಅಂದರ್..!
* ಲಾಕ್ ಡೌನ್ ಸಮಯವನ್ನೇ ಬಂಡವಾಳ ಮಾಡಿಕೊಂಡಿದ್ದ ಆರೋಪಿ
*ಡಿವೈಎಸ್ ಪಿ ಶಿವಾನಂದ ಪವಾಡಶೆಟ್ಟಿ, ಗ್ರಾಮಾಂತರ ಪಿಎಸ್ ಐ ರವಿಕುಮಾರ್ ಕಪ್ಪತ್ತನವರ್ ನೇತೃತ್ವದಲ್ಲಿ ದಾಳಿ
ಗದಗ, (ಜೂನ್.03): ಲಾಕ್ ಡೌನ್ ಸಮಯವನ್ನೇ ಬಂಡವಾಳ ಮಾಡಿಕೊಂಡು ಗದಗ ನಗರದ ಕೂಗಳತೆ ದೂರದ ಮಲ್ಲಸಮುದ್ರ ಗ್ರಾಮದ ಹೊರವಲಯದಲ್ಲಿ ಕಳ್ಳಭಟ್ಟಿ ತಯಾರಿಸುತ್ತಿದ್ದ ಘಟಕಗಳ ಮೇಲೆ ಪೊಲೀಸರು ದಾಳಿ ನಡೆಸಿದ್ದಾರೆ.
ಗದಗ ನಗರದ ಕೂಗಳತೆ ದೂರದ ಮಲ್ಲಸಮುದ್ರ ಗ್ರಾಮದ ಹೊರವಲಯದಲ್ಲಿ ನಡೀತಿದ್ದ ದಂಧೆ ನಡೆಯುತ್ತಿರುವ ಬಗ್ಗೆ ಖಚಿತ ಮಾಹಿತಿ ಪಡೆದು ಎಸ್ ಪಿ ಎನ್ ಯತೀಶ್ ನೇತೃತ್ವದಲ್ಲಿ ಖಾಕಿ ತಂಡದಿಂದ ದಾಳಿ ನಡೆದಿದೆ.
ಕಳ್ಳಭಟ್ಟಿ ದುರಂತ: ಸಾವಿನ ಸಂಖ್ಯೆ 114ಕ್ಕೇರಿಕೆ!
ಈ ವೇಳೆ ಕಳ್ಳಭಟ್ಟಿ ಸಂಗ್ರಹಿಸಿದ್ದ ರಾಜು ಮಾಂತೇಶ್ ಚೌವ್ಹಾಣ್ ಎನ್ನುವರನ್ನ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ಧಾರವಾಡ ಜಿಲ್ಲೆಯ ಅಣ್ಣಿಗೇರಿ ಗ್ರಾಮದಿಂದ ಹೆಂಡ ತಂದು ಮಾರುತ್ತಿದ್ದ.
ಡಿವೈಎಸ್ ಪಿ ಶಿವಾನಂದ ಪವಾಡಶೆಟ್ಟಿ, ಗ್ರಾಮಾಂತರ ಪಿಎಸ್ ಐ ರವಿಕುಮಾರ್ ಕಪ್ಪತ್ತನವರ್ ಮತ್ತು ಅವರ ಸಿಬ್ಬಂದಿ ದಾಳಿ ಮಾಡಿದ್ದು,
ಆರೋಪಿಯಿಂದ 10 ಲೀಟರ್ ಕಳ್ಳಭಟ್ಟಿ ಸಾರಾಯಿ, ಸಾಮಾಗ್ರಿಗಳ ವಶ ಪಡೆದುಕೊಂಡಿದ್ದಾರೆ.