ಬೆಂಗಳೂರು: ನಕಲಿ ಕಾಲ್‌ ಸೆಂಟರ್‌ಗೆ ಪೊಲೀಸರ ದಾಳಿ, ಇಬ್ಬರು ವಂಚಕರ ಬಂಧನ

ಬಿಹಾರದ ಜಿತೇಂದ್ರ ಕುಮಾ‌ರ್ ಹಾಗೂ ಆತನ ಪಾಲುದಾರ ಚಂದನ್ ಕುಮಾರ್‌ ಬಂಧಿತರಾಗಿದ್ದು, 5.5 ಕಂಪ್ಯೂಟರ್, 10 ಬೇಸಿಕ್ ಮೊಬೈಲ್ ಹಾಗೂ 20ಕ್ಕೂ ಹೆಚ್ಚಿನ ಆನ್‌ಡ್ರೈಡ್ ಮೊಬೈಲ್ ಸೇರಿ ಕೆಲ ದಾಖಲೆಗಳನ್ನು ಪೊಲೀಸರು ಜಪ್ತಿ ಮಾಡಿದ್ದಾರೆ. 

Police Raid Fake Call Center in Bengaluru grg

ಬೆಂಗಳೂರು(ಜ.04): ಅನಧಿಕೃತ ಕಾಲ್ ಸೆಂಟರ್‌ವೊಂದರ ಮೇಲೆ ದಾಳಿ ನಡೆಸಿದ ಆಗ್ನೆಯ ವಿಭಾಗದ ಪೊಲೀಸರು ಆನ್‌ಲೈನ್ ಟ್ರೇಡಿಂಗ್ ಹೆಸರಿನಲ್ಲಿ ಜನರಿಗೆ ಮಂಕೂಬೂದಿ ಎರಚಿ ದೋಚುತ್ತಿದ್ದ ಸೈಬರ್ ವಂಚಕರ ಜಾಲವನ್ನು ಶುಕ್ರವಾರ ಭೇದಿಸಿದ್ದಾರೆ. 

ಬಿಹಾರದ ಜಿತೇಂದ್ರ ಕುಮಾ‌ರ್ ಹಾಗೂ ಆತನ ಪಾಲುದಾರ ಚಂದನ್ ಕುಮಾರ್‌ ಬಂಧಿತರಾಗಿದ್ದು, 5.5 ಕಂಪ್ಯೂಟರ್, 10 ಬೇಸಿಕ್ ಮೊಬೈಲ್ ಹಾಗೂ 20ಕ್ಕೂ ಹೆಚ್ಚಿನ ಆನ್‌ಡ್ರೈಡ್ ಮೊಬೈಲ್ ಸೇರಿ ಕೆಲ ದಾಖಲೆಗಳನ್ನು ಪೊಲೀಸರು ಜಪ್ತಿ ಮಾಡಿದ್ದಾರೆ. 

ಮಧುಗಿರಿ ಡಿವೈಎಸ್‌ಪಿ ರಾಮಚಂದ್ರ ಅಮಾನತು; ದೂರು ಕೊಟ್ಟ ಮಹಿಳೆ ಮೇಲೆ ಲೈಂಗಿಕ ದೌರ್ಜನ್ಯ ಆರೋಪ!

ಹುಳಿಮಾವು ಸಮೀಪ ಷೇರು ಹೂಡಿಕೆ ಬಗ್ಗೆ ಸಲಹೆ ನೀಡುವ ನೆಪ ದಲ್ಲಿ ಅನಧಿಕೃತ ಕಾಲ್ ಸೆಂಟರ್ ಹಾಗೂ ಬಿಪಿಒ ಕಂಪನಿ ನಡೆಸುತ್ತಿರುವ ಬಗ್ಗೆ ಖಚಿತ ಮಾಹಿತಿ ಪಡೆದು ಡಿಸಿಪಿ ಸಾರಾ ಫಾತಿಮಾ ನೇತೃತ್ವದ ಪೊಲೀಸರ ತಂಡವು ಹಠಾತ್ ದಾಳಿ ನಡೆಸಿದೆ. ಆ ನಕಲಿ ಕಂಪನಿ ಸಿಬ್ಬಂದಿಯನ್ನು ಪೊಲೀಸರು ವಿಚಾರಣೆಗೊಳಪಡಿಸಿದಾಗ ಸೈಬರ್ ಮೋಸ ಜಾಲ ಬಯಲಾಗಿದೆ. 

ಠಾಣೆ ಸನಿಹದಲ್ಲೇ ವಂಚಕರ ಅಡ್ಡೆ: 

ಬಿಹಾರದ ಜಿತೇಂದ್ರ ಬಿಎಸ್ಸಿ ಪದವೀಧರನಾ ಗಿದ್ದು, ಕಳೆದೊಂದು ಹುಳಿಮಾವು ಪೊಲೀಸ್ ಠಾಣೆ ಸಮೀ ಪದಲ್ಲೇ ಕಾಲ್ ಸೆಂಟರ್‌ಹಾಗೂ ಬಿಪಿಓ ಕಂಪನಿ ನಡೆಸುತ್ತಿದ್ದ. ಷೇರು ಮಾರುಕಟ್ಟೆಯಲ್ಲಿ ಹೂಡಿಕೆ ಸಲಹೆ ನೀಡುವ ನೆಪದಲ್ಲಿ ಜನರಿಗೆ ವಂಚಿಸಿ ಹಣ ದೋಚುತ್ತಿದ್ದ. ಇದಕ್ಕೆ ಆತನ ಸ್ನೇಹಿತ ಚಂದನ್ ಸಾಥ್ ಕೊಟ್ಟಿದ್ದ. ಹುಳಿಮಾವಿನಲ್ಲಿ ಕಟ್ಟಡದ ಮಾಲಿಕರ ಜತೆ ಯಾವುದೇ ಒಡಂಬಡಿಕೆ ಮಾಡಿ ಕೊಳ್ಳದೆ ಹಾಗೂ ಸರ್ಕಾರಿ ಇಲಾಖೆಯಲ್ಲಿ ನೊಂದಾಯಿಸದೆ ಅನಧಿಕೃತ ವಾಗಿ ಸೆಂಟರ್‌ ನಡೆಸುತ್ತಿದ್ದ ಬಗ್ಗೆ ಖಚಿತ ಮಾಹಿತಿ ಪಡೆದು ದಾಳಿ ನಡೆಸಲಾಯಿತು. ಇಲ್ಲಿ 7 ಹುಡುಗಿಯರು ಹಾಗೂ 8 ಹುಡುಗರು ಕೆಲಸ ಮಾಡುತ್ತಿದ್ದು. ಇವರ ಮೂಲಕ ಗ್ರಾಹಕರಿಗೆ ಕರೆ ಮಾಡಿಸಿ ವಂಚನೆ ಮಾಡುತ್ತಿದ್ದರು. ಈ ಕೃತ್ಯಕ್ಕಾಗಿ ಕೆಲವರಿಂದ ಗ್ರಾಹಕರ ದತ್ತಾಂಶ (ಡಾಟಾ) ಜಿತೇಂದ್ರ ಖರೀದಿಸಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.

ಪೊಲೀಸ್‌ ಠಾಣೆಯಲ್ಲೇ ಕುಚ್‌ಕುಚ್‌: ಅಯ್ಯೋ ರಾಮಚಂದ್ರ... ಪರಮೇಶ್ವರನ ಭಯವೂ ನಿನಗೆ ಇಲ್ಲದಾಯಿತೇ!

ಬೇರೆ ಹೆಸರಿನಲ್ಲಿ ಕರೆ 

ಈ ಕಾಲ್ ಸೆಂಟರ್‌ನಲ್ಲಿ ಕೆಲಸ ಮಾಡುತ್ತಿದ್ದ ಹುಡುಗ-ಹುಡುಗಿಯರ ಪೈಕಿ ಬಹುತೇಕರು ಬಿಎಂ ಹಾಗೂ ಪಿಯುಸಿ ಓದಿದ್ದಾರೆ. ಆದರೆ ಕಾಮರ್ಸ್‌ಗೆ ಸಂಬಂಧಿಸಿದ ಬಗ್ಗೆ ಮಾಹಿತಿ ನೀಡುವ ಸಲಹೆಗಾರರಾಗಿದ್ದರು. ಇನ್ನು ಜನರಿಗೆ ಬೇರೆ ಬೇರೆ ಹೆಸರಿನಲ್ಲಿ ಕರೆ ಮಾಡಿ ತಮ್ಮ ಮೋಸದ ಬಲೆಗೆ ಬೀಳಿಸಿಕೊಳ್ಳುತ್ತಿದ್ದರು ಎನ್ನಲಾಗಿದೆ.

ಷೇರು ಟ್ರೇಡಿಂಗ್ ಹೂಡಿಕೆ ನೆಪದಲ್ಲಿ ಜನರಿಂದ ಎಷ್ಟು ಮೊತ್ತದ ಹಣವನ್ನು ವಸೂಲಿ ಮಾಡಿ ಆರೋಪಿ ಜಿತೇಂದ್ರ ವಂಚಿಸಿದ್ದಾನೆ ಎಂಬ ಬಗ್ಗೆ ತನಿಖೆ ನಡೆದಿದೆ. ದಾಳಿ ವೇಳೆ ಪತ್ತೆಯಾದ ಮೊಬೈಲ್, ಕಂಪ್ಯೂಟರ್ ಗಳು ಹಾಗೂ ಲ್ಯಾಪ್‌ಟಾಪ್ ಗಳನ್ನು ಪರಿಶೀಲಿಸಲಾಗುತ್ತಿದ್ದು, ಅಸಂಖ್ಯಾತ ಮೊಬೈಲ್ ಗಳಿಗೆ ಕರೆ ಮಾಡಿರುವುದು ಪ್ರಾಥಮಿಕ ಹಂತದಲ್ಲಿ ಗೊತ್ತಾಗಿದೆ ಎಂದು ಅಗ್ನೇಯ ವಿಭಾಗದ ಡಿಸಿಪಿ ಸಾರಾ ಫಾತಿಮಾ ತಿಳಿಸಿದ್ದಾರೆ. 

Latest Videos
Follow Us:
Download App:
  • android
  • ios