ಮಧುಗಿರಿ ಡಿವೈಎಸ್‌ಪಿ ರಾಮಚಂದ್ರ ಅಮಾನತು; ದೂರು ಕೊಟ್ಟ ಮಹಿಳೆ ಮೇಲೆ ಲೈಂಗಿಕ ದೌರ್ಜನ್ಯ ಆರೋಪ!
ತುಮಕೂರಿನ ಮಧುಗಿರಿ ಡಿವೈಎಸ್‌ಪಿ ರಾಮಚಂದ್ರ ಅವರನ್ನು ಮಹಿಳೆಯ ಮೇಲೆ ಲೈಂಗಿಕ ದೌರ್ಜನ್ಯ ಆರೋಪದ ಹಿನ್ನೆಲೆಯಲ್ಲಿ ಅಮಾನತುಗೊಳಿಸಲಾಗಿದೆ. ಜಮೀನು ವಿವಾದಕ್ಕೆ ಸಂಬಂಧಿಸಿದಂತೆ ದೂರು ನೀಡಲು ಬಂದ ಮಹಿಳೆಯನ್ನು ಪುಸಲಾಯಿಸಿ ರಾಸಲೀಲೆ ನಡೆಸಿದ ಆರೋಪದ ಮೇಲೆ ಕ್ರಮ ಕೈಗೊಳ್ಳಲಾಗಿದೆ. ಈ ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು.
ತುಮಕೂರು (ಜ.03): ನಮ್ಮ ಜಮೀನಿನ ವಿಚಾರವಾಗಿ ಸಮಸ್ಯೆ ಬಂದಿದ್ದು ನೀವೇ ನಮ್ಮ ಜಮೀನನ್ನು ಉಳಿಸಿಕೊಡಬೇಕು ಎಂದು ದೂರು ಕೊಟ್ಟು ಹೋಗಿದ್ದ ಮಹಿಳೆಯನ್ನು ವಿಚಾರಣೆಗೆಂದು ಕರೆದು ಆಕೆಯನ್ನು ಪುಸಲಾಯಿಸಿ ರಾಸಲೀಲೆ ನಡೆಸಿದ್ದ ಮಧುಗಿರಿ ಡಿವೈಎಸ್‌ಪಿ ರಾಮಚಂದ್ರ ಅವರನ್ನು ಅಮಾನತುಗೊಳಿಸಿ ಆದೇಶ ಹೊರಡಿಸಲಾಗಿದೆ.
ತುಮಕೂರು ಜಿಲ್ಲೆಯ ಮಧುಗಿರಿ ಪೊಲೀಸ್ ಠಾಣೆಯಲ್ಲಿ ಸ್ಥಳೀಯ ಮಹಿಳೆಯೊಬ್ಬರು ತಮ್ಮ ಜಮೀನಿನ ಕುರಿತಾಗಿ ವ್ಯಾಜ್ಯ ಆರಂಭವಾಗಿದ್ದು, ನೀವು ನಮಗೆ ನ್ಯಾಯ ಕೊಡಿಸಬೇಕು ಎಂದು ಮಹಿಳೆ ದೂರು ನೀಡಿದ್ದಾರೆ. ಆಗ ಮಹಿಳೆಗೆ ನಿಮಗೆ ನ್ಯಾಯ ಕೊಡಿಸುವುದಾಗಿ ಭರವಸೆ ನೀಡಿ ಧನಾತ್ಮಕವಾಗಿ ಮಾತನಾಡಿದ್ದ ಡಿವೈಎಸ್‌ಪಿ ರಾಮಚಂದ್ರಪ್ಪ ನಾವು ವಿಚಾರಣೆಗೆ ಕರೆದಾಗ ಪೊಲೀಸ್ ಠಾಣೆಗೆ ಬರಬೇಕು. ನಾವು ಕೇಳಿದಾಗ ನೀವು ಮಾಹಿತಿ ಕೊಡಬೇಕು ಎಂದು ಹೇಳಿರುತ್ತಾರೆ. ಇದಕ್ಕೆ ಮಹಿಳೆಯೂ ಒಪ್ಪಿಕೊಂಡಿದ್ದಾರೆ.
ಇನ್ನು ಮಹಿಳೆ ಜಮೀನಿನ ವಿಚಾರವಾಗಿ ಪೊಲೀಸ್ ಠಾಣೆಗೆ ಬಂದು ಹೋಗುವ ನಡುವೆ ಡಿವೈಎಸ್‌ಪಿ ಆ ಮಹಿಳೆಯನ್ನು ಪುಸಲಾಯಿಸಿದ್ದಾರೆ. ನಂತರ, ಸೀದಾ ಕಾಮತೃಷೆ ತೀರಿಸಿಕೊಳ್ಳಲು ಅವರನ್ನು ಬಳಸಿಕೊಳ್ಳಲು ಮುಂದಾಗಿದ್ದಾರೆ. ಕಾಮಾತುರಾಣಾಂ ನ ಭಯಂ ನ ಲಜ್ಜಾಃ ಎಂಬ ಸಂಸ್ಕೃತ ವಾಕ್ಯದಂತೆ ತನ್ನ ಕಾಮತೃಷೆ ತೀರಿಸಿಕೊಳ್ಳಲು ಸ್ವತಃ ಪೊಲೀಸ್ ಠಾಣೆಯಲ್ಲಿಯೇ ಜಾಗವನ್ನು ಸೆಟ್ ಮಾಡಿದ್ದಾನೆ. ಮಧುಗಿರಿಯ ಡಿವೈಎಸ್‌ಪಿ ಕಚೇರಿಯ ಶೌಚಾಲಯಕ್ಕೆ ಮಹಿಳೆಯನ್ನು ಕರೆದೊಯ್ದು ರಾಸಲೀಲೆ ಆರಂಭಿಸಿದ್ದಾರೆ. ಆಗ ಸ್ಥಳೀಯರೋ ಅಥವಾ ಅದೇ ಠಾಣೆಯ ಸಿಬ್ಬಂದಿ ಯಾರೋ ಒಬ್ಬರು ಮೊಬೈಲ್‌ನಲ್ಲಿ ಶೌಚಾಲಯದ ಕಿಟಕಿ ಮೂಲಕ ಅವರ ಡಿವೈಎಸ್‌ಪಿ ಮತ್ತು ಮಹಿಳೆ ನಡುವೆ ನಡೆಯುತ್ತಿದ್ದ ರಾಸಲೀಲೆಯ ದೃಶ್ಯವನ್ನು ಸೆರೆ ಹಿಡಿದಿದ್ದಾರೆ. ಈ ವೇಳೆ ಮಹಿಳೆ ಯಾರೋ ಮೊಬೈಲ್‌ನಲ್ಲಿ ದೃಶ್ಯ ಸೆರೆ ಹಿಡಿಯುವುದನ್ನು ನೋಡಿದ್ದು, ಕೂಡಲೇ ವಿಡಿಯೋ ಮಾಡುವ ವ್ಯಕ್ತಿ ಅಲ್ಲಿಂದ ಪರಾರಿ ಆಗಿದ್ದಾರೆ.
ಇದನ್ನೂ ಓದಿ: ಪೊಲೀಸ್ ಠಾಣೆಯಲ್ಲೇ ಕುಚ್‌ಕುಚ್: ಅಯ್ಯೋ ರಾಮಚಂದ್ರ... ಪರಮೇಶ್ವರನ ಭಯ ...
ನಂತರ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದ್ದಂತೆ ಡಿವೈಎಸ್‌ಪಿ ರಾಮಚಂದ್ರಪ್ಪ ರಾತ್ರೋ ರಾತ್ರಿ ತಾವು ಕೆಲಸ ಮಾಡುವ ಸ್ಥಳದಿಂದ ಪರಾರಿ ಆಗಿದ್ದಾರೆ. ಅದು ಕೂಡ ಗೃಹ ಸಚಿವ ಪರಮೇಶ್ವರ ಅವರ ತವರು ಜಿಲ್ಲೆಯಲ್ಲಿ ಈ ಘಟನೆ ನಡೆದಿದ್ದರಿಂದ ಸರ್ಕಾರಕ್ಕೆ ಭಾರೀ ಮುಖಭಂಗ ಉಂಟಾಗಿತ್ತು. ಈ ಹಿನ್ನೆಲೆಯಲ್ಲಿ ಸ್ವತಃ ರಾಜ್ಯ ಪೊಲೀಸ್ ಇಲಾಖೆ ಮಹಾ ನಿರ್ದೇಶಕ ಅಲೋಕ್ ಮೋಹನ್ ಅವರೇ ತುಮಕೂರು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅವರಿಂದ ವರದಿ ಕೇಳಿದ್ದಾರೆ.
ತುಮಕೂರು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಲ್ಲಿಸಿದ ವರದಿಯನ್ನು ಆಧರಿಸಿ ಮಧುಗಿರಿ ಡಿವೈಎಸ್‌ಪಿ ರಾಮಚಂದ್ರ ಅವರನ್ನು ಅಮಾನತು ಮಾಡಿ ಆದೇಶ ಹೊರಡಿಸಿದ್ದಾರೆ. ಪೊಲೀಸ್ ಠಾಣೆಗೆ ದೂರು ಕೊಡಲು ಬಂದ ಮಹಿಳೆಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪದ ಹಿನ್ನೆಲೆಯಲ್ಲಿ ಹಾಗೂ ವಿಡಿಯೋ ಸಾಕ್ಷಿಯನ್ನು ಆಧರಿಸಿ ಅಮಾನತು ಮಾಡಿ ಪೊಲೀಸ್ ಮಹಾನರ್ದೇಶಕರಿಂದ ಅಮಾನರು ಆದೇಶ ಹೊಡಿಸಲಾಗಿದೆ.
ಇದನ್ನೂ ಓದಿ: ಪೊಲೀಸ್ ಠಾಣೆಗೆ ದೂರು ಕೊಡಲು ಬಂದ ಮಹಿಳೆಯೊಂದಿಗೆ ರಾಸಲೀಲೆ ನಡೆಸಿದ ಡಿವೈಎಸ್‌ಪಿ; ವಿಡಿಯೋ ವೈರಲ್!