Asianet Suvarna News Asianet Suvarna News

Bengaluru: ದಿವಂಗತ ಪೊಲೀಸ್ ಅಧಿಕಾರಿಯೊಬ್ಬರ ಪತ್ನಿಯನ್ನು ಹತ್ಯೆಗೈದ ದುಷ್ಕರ್ಮಿಗಳು

 ರಾಜಧಾನಿ ಬೆಂಗಳೂರಲ್ಲಿ ಹೆಚ್ ಎಸ್ ಆರ್ ಲೇಔಟ್ ಎಂದರೆ ಪ್ರತಿಷ್ಠಿತ ಏರಿಯಾ. ಇಲ್ಲಿ ಅದೆಷ್ಟೋ ಬ್ಯುಸಿನೆಸ್ ಮ್ಯಾನ್‌ಗಳು. ಐಪಿಎಸ್, ಐಎಎಸ್ ಅಧಿಕಾರಿಗಳು ವಾಸವಿದ್ದಾರೆ. ಆದ್ರೆ ಈ ಏರಿಯಾದಲ್ಲಿ ಕಳೆದ ರಾತ್ರಿ ವೃದ್ದೆಯೊಬ್ಬಳನ್ನ ಬರ್ಬರವಾಗಿ ಹತ್ಯೆಯಾಗಿದೆ.

Police Officer Wife Murdered And Stolen Gold In HSR at Bengaluru rbj
Author
Bengaluru, First Published Aug 13, 2022, 9:21 PM IST

ವರದಿ: ಕಿರಣ್.ಕೆ.ಎನ್.ಏಷ್ಯಾನೆಟ್ ಸುವರ್ಣ ನ್ಯೂಸ್ .ಬೆಂಗಳೂರು


ಬೆಂಗಳೂರು, (ಆಗಸ್ಟ್.13) : ಒಂಟಿಯಾಗಿ ವಾಸವಾಗಿದ್ದ ದಿವಂಗತ ಪೊಲೀಸ್ ಅಧಿಕಾರಿಯೊಬ್ಬರ ಹೆಂಡತಿಯನ್ನು ಹತ್ಯೆಗೈದು ಚಿನ್ನಾಭರಣ ಹಾಗೂ ಹಣ ದೋಚಿ ಪರಾರಿಯಾಗಿರುವ ಘಟನೆ ಬೆಂಗಳೂರಿನ ಹೆಚ್ ಎಸ್ ಆರ್ ಲೇಔಟ್‌ನಲ್ಲಿ ನಡೆದಿದೆ.

 ಜಯಶ್ರೀ ಎಂಬುವರನ್ನ ಅವರು ವಾಸವಿದ್ದ ಮನೆಯಲ್ಲೇ ಉಸಿರುಗಟ್ಟಿಸಿ ಕೊಲೆ ಮಾಡಲಾಗಿದೆ.  ಜಯಶ್ರೀ ಹೆಚ್ ಎಸ್ ಆರ್ ಲೇಔಟ್ ನ 13 ನೇ ಅಡ್ಡ ರಸ್ತೆಯಲ್ಲಿ ಒಬ್ಬಂಟಿಯಾಗಿ ವಾಸವಾಗಿದ್ರು. ಗಂಡ ದಿವಂಗತ ಶ್ರೀನಿವಾಸನ್ ಇಂಟರ್ ಸ್ಟೇಟ್  ವೈರಲೆಸ್ ನಲ್ಲಿ ಪೊಲೀಸ್ ಆಗಿದ್ದವರು. ಅವರು ತೀರಿಕೊಂಡ ನಂತರ ಜಯಶ್ರೀ ಒಬ್ಬರೆ ವಾಸವಿದ್ರು. ಇಬ್ಬರು ಮಕ್ಕಳಿದ್ದರೂ ಒಬ್ಬರು ಕೆನಡಾ ಹಾಗೂ ಇನ್ನೊಬ್ಬರು ಬೆಂಗಳೂರಿನ ಕಮ್ಮನಹಳ್ಳಿಯಲ್ಲಿ ವಾಸವಿದ್ದಾರೆ. 

ವಿವಾಹ ವಿಚ್ಛೇದನ ಕೇಸ್: ಕೋರ್ಟ್‌ ಆವರಣದಲ್ಲೇ ಪತ್ನಿ ಕತ್ತು ಕೊಯ್ದು ಹತ್ಯೆಗೈದ ಪತಿ

ಮೂರು ಮನೆಗಳನ್ನ ಬಾಡಿಗೆ ನೀಡಿ ಒಂದು ಮನೆಯಲ್ಲಿ ತಾವು ವಾಸವಿದ್ದ ಜಯಶ್ರೀಯನ್ನ ಕಳೆದ ರಾತ್ರಿ ಯಾರೋ ಕೊಲೆ ಮಾಡಿ ಮನೆಯಲ್ಲಿದ್ದ ಹಣ ಹಾಗೂ ಚಿನ್ನಾಭರಣ ಕದ್ದು ಎಸ್ಕೇಪ್ ಆಗಿದ್ದಾರೆ. ಇವರ ಮನೆಯಲ್ಲಿದ್ದ ನೇಪಾಳ ಮೂಲದ ಸೆಕ್ಯೂರಿಟಿ ಗಾರ್ಡ್ ಸದ್ಯ ನಾಪತ್ತೆಯಾಗಿದ್ದು ಅವನ ಮೇಲೆ ಎಲ್ಲರ ಅನುಮಾನ ಇದೆ. ಇದಲ್ಲದೆ ಜಯಶ್ರೀ ಆಗಾಗ ಪೊಲೀಸ್ ಠಾಣೆಗೆ ಕರೆ ಮಾಡಿ ನನ್ನ ಕೊಲೆ ಮಾಡೋಕೆ ಬಂದಿದ್ದಾರೆ ಅಂತ ಪದೇ ಪದೇ ಹೇಳುತ್ತಿದ್ದರು. ಹೊಯ್ಸಳ ಪೊಲೀಸ್ರು ವಾರದಲ್ಲಿ ಮೂರ್ನಾಲ್ಕು ಬಾರಿ ಜಯಶ್ರೀ ಮನೆಗೆ ಬಂದು ಹೋಗ್ತಾ ಇದ್ದರಂತೆ...

ಸದ್ಯ ಆರೋಪಿ ಪತ್ತೆಗಾಗಿ ನಾಲ್ಕು ಪೊಲೀಸ್ ತಂಡಗಳನ್ನ ರಚನೆ ಮಾಡಲಾಗಿದ್ದು ಪೊಲೀಸ್ರು ಆರೋಪಿಯ ಹುಡುಕಾಟ ಶುರು ಮಾಡಿದ್ದಾರೆ. ಆದ್ರೆ ಇಳಿವಯಸ್ಸಿನಲ್ಲಿದ್ದ ಜೀವವನ್ನ ಚಿನ್ನಾಭರಣ ಹಾಗೂ ಹಣಕ್ಕೆ ಕೊಲೆ ಮಾಡಿರುವುದು ವಿಪರ್ಯಾಸವೇ ಸರಿ.

Follow Us:
Download App:
  • android
  • ios