Asianet Suvarna News Asianet Suvarna News

Bengaluru crime: ಕೆಲಸಕ್ಕೆ ಇದ್ದ ಮನೆಯಲ್ಲಿ 6 ತಿಂಗಳಿಂದ ಒಂದೊಂದೇ ಚಿನ್ನ ಕದ್ದ ಕಳ್ಳಿ ಪೊಲೀಸರ ಬಲೆಗೆ

ಕೆಲಸ ಮಾಡುತ್ತಿದ್ದ ಮನೆಯಲ್ಲಿ ಆರು ತಿಂಗಳು ಒಂದೊಂದೇ ಚಿನ್ನಾಭರಣ ಕಳವು ಮಾಡಿದ್ದ ಕಳ್ಳಿಯನ್ನು ಅಮೃತಹಳ್ಳಿ ಠಾಣೆ ಪೊಲೀಸರು ಬಂಧಿಸಿದ್ದಾರೆ. ಕೆಂಪಾಪುರ ನಿವಾಸಿ ಮೋನಿಕಾ(30) ಬಂಧಿತ ಆರೋಪಿ. ಈಕೆಯಿಂದ .2.30 ಲಕ್ಷ ಮೌಲ್ಯದ 40 ಗ್ರಾಂ ಚಿನ್ನಾಭರಣ ಜಪ್ತಿ ಮಾಡಲಾಗಿದೆ.

Police have arrested monika  who was stealing gold one after another for six months bengaluru rav
Author
First Published Jan 9, 2023, 10:52 AM IST

ಬೆಂಗಳೂರು (ಜ.9) : ಕೆಲಸ ಮಾಡುತ್ತಿದ್ದ ಮನೆಯಲ್ಲಿ ಆರು ತಿಂಗಳು ಒಂದೊಂದೇ ಚಿನ್ನಾಭರಣ ಕಳವು ಮಾಡಿದ್ದ ಕಳ್ಳಿಯನ್ನು ಅಮೃತಹಳ್ಳಿ ಠಾಣೆ ಪೊಲೀಸರು ಬಂಧಿಸಿದ್ದಾರೆ. ಕೆಂಪಾಪುರ ನಿವಾಸಿ ಮೋನಿಕಾ(30) ಬಂಧಿತ ಆರೋಪಿ. ಈಕೆಯಿಂದ .2.30 ಲಕ್ಷ ಮೌಲ್ಯದ 40 ಗ್ರಾಂ ಚಿನ್ನಾಭರಣ ಜಪ್ತಿ ಮಾಡಲಾಗಿದೆ. ಹೆಬ್ಬಾಳ ಕೆಂಪಾಪುರದ ಸರ್ವಿಸ್‌ ರಸ್ತೆ ನಿವಾಸಿ ಸಂಗೀತಾ ಪೊನ್ನಪ್ಪ ಅವರು ನೀಡಿದ ದೂರಿನ ಮೇರೆಗೆ ಈಕೆಯನ್ನು ಬಂಧಿಸಿ ಕದ್ದ ಮಾಲುಗಳನ್ನು ಜಪ್ತಿ ಮಾಡಲಾಗಿದೆ.

ಆಂಧ್ರಪ್ರದೇಶ(Andhra pradesh) ಮೂಲದ ಮೋನಿಕಾ(Monika) ಕಳೆದ ಸೆಪ್ಟೆಂಬರ್‌ನಲ್ಲಿ ಸಂಗೀತಾ ಪೊನ್ನಪ್ಪ(Sangeeta ponnappa) ಅವರ ಮನೆಗೆಲಸಕ್ಕೆ ಸೇರಿಕೊಂಡಿದ್ದಳು. ಸೆ.19ರಿಂದ ಜ.5ರ ವರೆಗೆ ಮನೆಯಲ್ಲಿದ್ದ ಚಿನ್ನದ ಸಾಯಿಬಾಬಾ, ಗಣಪತಿ ಪೆಂಡೆಂಟ್‌, ವಜ್ರದ ಪೆಂಡೆಂಟ್‌ ಸೇರಿದಂತೆ ಸುಮಾರು 40 ಗ್ರಾಂ ಚಿನ್ನಾಭರಣ ಕಳವು ಮಾಡಿದ್ದಳು. ಆದರೂ ಅನುಮಾನಬಾರದ ಹಾಗೆ ಕೆಲಸ ಮಾಡಿಕೊಂಡಿದ್ದಳು. ಮನೆಯ ಮಾಲಿಕರಾದ ಸಂಗೀತಾ ಪೊನ್ನಪ್ಪ ಮನೆಯಲ್ಲಿ ಒಂದೊಂದೇ ಆಭರಣ ನಾಪತ್ತೆಯಾಗುತ್ತಿರುವ ಬಗ್ಗೆ ಅನುಮಾನಗೊಂಡಿದ್ದರು. ಈ ಸಂಬಂಧ ಪೊಲೀಸ್‌ ಠಾಣೆಗೆ ದೂರು ನೀಡಿದ್ದರು. ಮೋನಿಕಾಳನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ಮಾಡಿದಾಗ ಕಳ್ಳತನ ಕೃತ್ಯ ಬಯಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

Bengaluru Crime: ನಿಲ್ಲಿಸಿದ್ದ ಕಾರಿಗೆ ರಾತ್ರಿ ಪೆಟ್ರೋಲ್‌ ಸುರಿದು ಬೆಂಕಿ ಇಟ್ಟದುರುಳರು

ಆನೇಕಲ್‌ ತಾಲೂಕನ್ನು ಅಪರಾಧ ತಾಣವಾಗಲು ಬಿಡಲ್ಲ: ಅಲೋಕ್‌

\ಉಪವಿಭಾಗದ ವಿವಿಧ ಠಾಣೆಗಳಲ್ಲಿ ಹಲವಾರು ರೀತಿಯ ಕ್ರೈಂಗಳು ವರದಿ ಆಗುತ್ತಿವೆ. ನೆರೆ ರಾಜ್ಯ ಹಾಗೂ ಗಡಿ ಹೊರಗಿನಿಂದ ಬಂದ ಅಪರಾಧಿಗಳು ಇಲ್ಲಿ ಹವಾ ಸೃಷ್ಟಿಸುವ ವ್ಯರ್ಥ ಪ್ರಯತ್ನ ಮಾಡುತ್ತಿದ್ದಾರೆ. ಯಾವುದೇ ಕಾರಣಕ್ಕೂ ಆನೇಕಲ್‌ ತಾಲೂಕನ್ನು ಕ್ರೈಂ ಕ್ಯಾಪಿಟಲ್‌ ಆಗಲು ಅವಕಾಶ ಕೊಡಬಾರದು ಎಂದು ಕಾನೂನು ಸುವ್ಯವಸ್ಥೆ ವಿಭಾಗದ ಎಡಿಜಿಪಿ ಅಲೋಕ್‌ ಕುಮಾರ್‌ ಅಧೀನ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.

ಅವರು ಆನೇಕಲ್‌ ಉಪವಿಭಾಗದ ಆನೇಕಲ್‌ ಠಾಣೆಯಲ್ಲಿ ಪ್ರತ್ಯೇಕವಾಗಿ ಏರ್ಪಡಿಸಿದ್ದ ನೊಂದವರ ದಿನ ಹಾಗೂ ರೌಡಿಗಳ ಪೆರೇಡ್‌ ನಡೆಸಿದ ನಂತರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಆನೇಕಲ್‌ ತಾಲೂಕು ಗಡಿ ಭಾಗದಲ್ಲಿ ಇದೆ. ಇದರಿಂದ ಜೊತೆಗೆ ಕೈಗಾರಿಕಾ ಪ್ರದೇಶಗಳಿಂದ ಆವೃತವಾಗಿದ್ದು, ವಿವಿಧ ರಾಜ್ಯಗಳ ಜನರು ಹೆಚ್ಚಾಗಿ ನೆಲೆಸುತ್ತಾರೆ. ರೌಡಿಗಳ ನಡುವಿನ ವಿವಿಧ ಬಣಗಳು ತಮ್ಮ ಅಧಿಪತ್ಯ ಸಾಧಿಸಲು ಹೀನಕೃತ್ಯ ನಡೆಸುತ್ತಾರೆ. ಚುನಾವಣೆಗಳು ಸಮೀಪಿಸುತ್ತಿದ್ದು, ಸಮಾಜ ಘಾತುಕ ಶಕ್ತಿಗಳನ್ನು ಬಗ್ಗು ಬಡಿದು ನೆಮ್ಮದಿಯ ಸಮಾಜ ಸೃಷ್ಟಿಗೆ ಆದ್ಯತೆ ನೀಡಬೇಕೆಂದು ತಿಳಿಸಿದರು.

Bengaluru satish store:ತಡರಾತ್ರಿ ಭಾರೀ ಅಗ್ನಿ ಅವಘಡ: ಪೂಜಾ ಸಾಮಗ್ರಿ ಗೋದಾಮಿ ಬೆಂಕಿ!

ಮರ್ಯಾದೆ ಜೀವನ ನಡೆಸಿ:

ಕೇಂದ್ರ ವಲಯದ ಐಜಿಪಿ ರವಿಕಾಂತೇಗೌಡ ರೌಡಿಗಳಿಗೆ ಪೊಲೀಸ್‌ ಭಾಷೆಯಲ್ಲೇ ಎಚ್ಚರಿಕೆ ನೀಡಿದರು. ಹಳೆಯ ಚಾಳಿಯನ್ನು ಬಿಟ್ಟು ಮರ್ಯಾದೆಯಾಗಿ ಬಾಳಿದರೆ ಮುಂದಿನ ದಿನಗಳು ಬೋನಸ್‌ ರೀತಿಯದಾಗಿರುತ್ತದೆ. ಇಲ್ಲದಿದ್ದಲ್ಲಿ ಕಾನೂನು ನಿರ್ದಯವಾಗಿ ತನ್ನ ಕೆಲಸ ಮಾಡುವ ಜೊತೆಗೆ ನಿಮಗಾಗಿ ಕೆಲಸ ಮಾಡುವ ಪುಡಿರೌಡಿಗಳ ಪಟ್ಟಿಯನ್ನೂ ಬಗ್ಗು ಬಡಿಯುತ್ತದೆ ಎಂದರು.ಸುದ್ದಿಗೋಯಲ್ಲಿ ವರಿಷ್ಠಾಧಿಕಾರಿ ಮಲ್ಲಿಕಾರ್ಜುನ ಬಾಲದಂಡಿ, ಅಡಿಷನಲ್‌ ಎಸ್ಪಿ ಪುರುಶೋತ್ತಮ್‌, ಡಿವೈಎಸ್ಪಿ ಲಕ್ಷ್ಮೇನಾರಾಯಣ, ಪೊಲೀಸ್‌ ಇನ್‌ಸ್ಪೆಕ್ಟರ್‌ಗಳಾದ ಚಂದ್ರಪ್ಪ, ವಿಶ್ವನಾಥ್‌, ಸುದರ್ಶನ್‌, ಉಮಾಮಹೇಶ್‌, ಜಗದೀಶ್‌, ಮಂಜು, ರಾಘವೇಂದ್ರ ಇದ್ದರು.

Follow Us:
Download App:
  • android
  • ios