Bengaluru satish store:ತಡರಾತ್ರಿ ಭಾರೀ ಅಗ್ನಿ ಅವಘಡ: ಪೂಜಾ ಸಾಮಗ್ರಿ ಗೋದಾಮಿ ಬೆಂಕಿ!
ನಗರದ ಬಸವನಗುಡಿಯ ಡಿವಿಜಿ ರಸ್ತೆಯಲ್ಲಿರುವ ಪೂಜಾ ಸಾಮಗ್ರಿ ಗೋದಾಮಿನಲ್ಲಿ ಭಾನುವಾರ ತಡರಾತ್ರಿ ಅಗ್ನಿ ಅವಘಡ ಸಂಭವಿಸಿದೆ. ರಾತ್ರಿ 11.30ಕ್ಕೆ ಕಟ್ಟಡದ 3ನೇ ಮಹಡಿಯಲ್ಲಿ ಬೆಂಕಿ ಕಾಣಿಸಿಕೊಂಡಿದ್ದು ಗೋದಾಮಿನಲ್ಲಿದ್ದ ಪೂಜಾ ಸಾಮಗ್ರಿಗಳು ಅಗ್ನಿಗಾಹುತಿಯಾಗಿವೆ.
ಬೆಂಗಳೂರು (ಜ.9): ನಗರದ ಬಸವನಗುಡಿಯ ಡಿವಿಜಿ ರಸ್ತೆಯಲ್ಲಿರುವ ಪೂಜಾ ಸಾಮಗ್ರಿ ಗೋದಾಮಿನಲ್ಲಿ ಭಾನುವಾರ ತಡರಾತ್ರಿ ಅಗ್ನಿ ಅವಘಡ ಸಂಭವಿಸಿದೆ. ರಾತ್ರಿ 11.30ಕ್ಕೆ ಕಟ್ಟಡದ 3ನೇ ಮಹಡಿಯಲ್ಲಿ ಬೆಂಕಿ ಕಾಣಿಸಿಕೊಂಡಿದ್ದು ಗೋದಾಮಿನಲ್ಲಿದ್ದ ಪೂಜಾ ಸಾಮಗ್ರಿಗಳು ಅಗ್ನಿಗಾಹುತಿಯಾಗಿವೆ.
ಪೂಜಾ ಸಾಮಾಗ್ರಿಗಳಿದ್ದ ಸತೀಶ್ ಸ್ಟೋರ್(Satish store) ಎಂಬ ಗೋದಾಮಿಗೆ ದಿಢೀರ್ ಬೆಂಕಿ(FIRE) ತಗುಲಿದೆ. ನೋಡನೋಡುತ್ತಿದ್ದಂತೆಯೇ ಬೆಂಕಿ ಮುಗಿಲೆತ್ತರಕ್ಕೆ ಚಿಮ್ಮಿದೆ.. ಗೋದಾಮಿನಲ್ಲಿ ಕರ್ಪೂರ, ಊದಿನ ಕಡ್ಡಿ , ದೀಪದ ಎಣ್ಣೆ ಇದ್ದಿದ್ದರಿಂದ ಕೆಲವೇ ಕ್ಷಣಗಳಲ್ಲಿ ಬೆಂಕಿ ಮುಗಿಲೆತ್ತರಕ್ಕೆ ಚಿಮ್ಮಿದೆ.
ಗೋದಾಮಿನಲ್ಲಿ ಬೆಂಕಿ ಹೊತ್ತಿ ಉರಿಯುವುದಕ್ಕೆ ಆರಂಭವಾಗುತ್ತಿದ್ದಂತೆಯೇ ಅಕ್ಕಪಕ್ಕದ ಮೆನೆಯವರೆಲ್ಲಾ ಗಾಬರಿಯಾಗಿ ಹೊರ ಬಂದಿದ್ದಾರೆ. ಕೂಡಲೇ ಅಗ್ನಿಶಾಮಕ ದಳ ಸಿಬ್ಬಂದಿಗೆ ಮಾಹಿತಿ ನೀಡಿದ್ದಾರೆ. ವಿಷಯ ತಿಳಯುತ್ತಿದ್ದಂತೆ ಘಟನಾ ಸ್ಥಳಕ್ಕೆ ಅಗ್ನಿಶಾಮಕ ದಳ ಸಿಬ್ಬಂದಿ ದೌಡಾಯಿಸಿದ್ದಾರೆ.
ಕೂಡಲೇ ಮೂರು ಅಗ್ನಿ ಶಾಮಕ ವಾಹನಗಳು ಘಟನಾ ಸ್ಥಳಕ್ಕೆ ದೌಡಾಯಿಸಿದ್ವು. ಹೊತ್ತಿ ಉರಿಯುತ್ತಿದ್ದ ಬೆಂಕಿಯನ್ನ ನಂದಿಸೋಕೆ ಸಿಬ್ಬಂದಿ ಹರಸಾಹಸ ಪಟ್ಟರು. ಒಂದು ಗಂಟೆಗಳ ಸತತ ಕಾರ್ಯಾಚರಣೆ ಮೂಲಕ ಬೆಂಕಿ ನಂದಿಸಿದರು. ಶಾರ್ಟ್ ಸರ್ಕ್ಯೂಟ್(Short circuit)ನಿಂದಾಗಿ ಗೋದಾಮಿಗೆ ಬೆಂಕಿ ತಗುಲಿರಬಹುದು ಎಂದು ಶಂಕಿಸಲಾಗಿದೆ.
ನಿಲ್ಲಿಸಿದ್ದ ಕಾರಿಗೆ ರಾತ್ರಿ ಪೆಟ್ರೋಲ್ ಸುರಿದು ಬೆಂಕಿ ಇಟ್ಟದುರುಳರು