ಮಗನ ದೇಹ ಮಣ್ಣು ಮಾಡಿದ ಪೋಷಕರು, 5 ವರ್ಷದ ನಂತರದ DNA ವರದಿ ಹೇಳಿದ್ದೇ ಬೇರೆ!
ಕಳೆದು ಹೋಗಿದ್ದ ಬಾಲಕನ ಕತೆ/ ಪೊಲೀಸರು ಕೊಟ್ಟ ಬಾಡಿಗೂ ಡಿಎನ್ ಎ ವರದಿಗೂ ಮ್ಯಾಚ್ ಆಗ್ತಿಲ್ಲ/ ಕುಟುಂಬ ಕಣ್ಣೀರ ಕತೆ ಯಾರಿಗೂ ಬೇಡ
ಬೆಂಗಳೂರು(ಜ. 29) 2014ರಲ್ಲಿ ನಾಪತ್ತೆಯಾದ 12 ವರ್ಷದ ಬಾಲಕನ ಶವದ ಸುತ್ತಲಿನ ಕತೆ. ಬಾಲಕ ನಾಪತ್ತೆಯಾಗಿದ್ದು ದೂರು ದಾಖಲಾದ ಮೇಲೆ ಪೊಲೀಸರು ಬಾಡಿಯೊಂದನ್ನು ಪತ್ತೆ ಮಾಡುತ್ತಾರೆ. ಹುಡುಗನ್ನದೇ ದೇಹ ಎಂದು ಅಂತಿಮ ಸಂಸ್ಕಾರವನ್ನು ನೆರವೇರಿಸಲಾಗುತ್ತದೆ. ಆದರೆ ಇದೀಗ ಬರೋಬ್ಬರಿ 5 ವರ್ಷದ ನಂತರ ಡಿಎನ್ ಎ ವರದಿ ಬಂದಿದ್ದು ವರದಿ ಅದು ಕಳೆದುಹೋಗಿದ್ದ ಹುಡುಗನದ್ದಲ್ಲ ಎಂದು ಹೇಳಿದೆ!
ಇದು ನಮ್ಮ ಹುಡುಗನ ದೇಹವಲ್ಲ. ಆತನ ಎತ್ತರಕ್ಕೂ ಸಿಕ್ಕಿರುವ ಹೆಣದ ಎತ್ತರಕ್ಕೂ ಮ್ಯಾಚ್ ಆಗುತ್ತಿಲ್ಲ ಎಂದು ಕುಟುಂಬ ಅಂದೇ ಹೇಳಿತ್ತು. ಆದರೆ ಪೊಲೀಸರು ಅಂತ್ಯಕ್ರಿಯೆ ಮಾಡಲು ಸೂಚಿಸಿದ್ದರು.
ಕೇರಳದ ಈ ಸಲಿಂಗಿಗಳು ಹೈಕೋರ್ಟ್ ಕದ ತಟ್ಟಲು ಏನು ಕಾರಣ!
ಮುನ್ನಾವರ್ ಬಾಶಾ(45) ಮತ್ತು ಪ್ರವಿಣ್ ತಾಜ್(40) ದಂಪತಿ ಮುನಿರೆಡ್ಡಿಪಾಳ್ಯದ ಸ್ಮಶಾನದಲ್ಲಿ ಹುಡುಗನ ಅಂತ್ಯಕ್ರಿಯೆ ಮುಸ್ಲಿಂ ಪದ್ಧತಿಯಂತೆ ನರೆವೇರಿಸಿದ್ದರು.
ಡಿಸೆಂಬರ್ 2019ರಲ್ಲಿ ಡಿಎನ್ ಎ ವರದಿ ಕೈ ಸೇರಿದ್ದು ಯಾವ ನಾಪತ್ತೆಯಾಗಿದ್ದನೋ ಆ ಹುಡುಗನ ಶವ ಅಲ್ಲ ಎಂದು ಹೇಳಿದೆ. ಬಾಶಾ ಮುಂಬೈಗೆ ತಿರುಗಾಡಿ ಈಗಾಗಲೇ 4 ಲಕ್ಷ ರೂ. ಗೂ ಅಧಿಕ ಹಣ ವ್ಯಯಿಸಿದ್ದಾರೆ. ದಂಪತಿ ಈಗಲೂ ತಮ್ಮ ಮಗ ಬದುಕಿದ್ದಾನೆ ಎಂಬ ನಿರೀಕ್ಷೆಯಲ್ಲಿ ಜೀವನ ಮಾಡುತ್ತಿದ್ದಾರೆ.
"