ಬೆಂಗಳೂರು(ಮೇ.12): ಬಂಧಿಸಲು ಹೋದಾಗ ಸಿಸಿಬಿ ಪೊಲೀಸರ ಮೇಲೆಯೇ ಹಲ್ಲೆಗೆ ಮುಂದಾದ ರೌಡಿಶೀಟರ್‌ ಮೇಲೆ ಗುಂಡಿನ ದಾಳಿ ನಡೆಸಿದ ಘಟನೆ ಇಂದು(ಬುಧವಾರ) ನಗರದಲ್ಲಿ ನಡೆದಿದೆ.

ಬಂಧಿಸಲು ಹೋದಾಗ ಸಿಸಿಬಿ ಹೆಡ್ ಕಾನ್ಸ್‌ಟೇಬಲ್‌ ಹನುಮೇಶ್ ಎಂಬುವರ ಮೇಲೆ ರೌಡಿಶೀಟರ್‌ ಸೂರ್ಯ ಹಲ್ಲೆ ಮಾಡಲು ಮುಂದಾಗಿದ್ದನು. ಹೀಗಾಗಿ ಆತ್ಮರಕ್ಷಣೆಗಾಗಿ ಸಿಸಿಬಿ ಎಸಿಪಿ ಪರಮೇಶ್ವರ್ ಅವರು ರೌಡಿಶೀಟರ್‌ ಸೂರ್ಯನ ಕಾಲಿಗೆ ಗುಂಡು ಹಾರಸಿದ್ದಾರೆ ಎಂದು ತಿಳಿದು ಬಂದಿದೆ.

ಪೊಲೀಸರ ಮೇಲೆ ಹಲ್ಲೆ: ರೌಡಿಶೀಟರ್‌ ಗುಂಡು ಹಾರಿಸಿ ಸೆರೆ

2015 ರಲ್ಲಿ ರೌಡಿಶೀಟರ್‌ ಸೂರ್ಯನ ವಿರುದ್ಧ ರಾಮಮೂರ್ತಿ ನಗರ ಠಾಣೆಯಲ್ಲಿ ಕೊಲೆ ಪ್ರಕರಣ ದಾಖಲಾಗಿತ್ತು.. 2016 ರಲ್ಲಿಯೂ ಮತ್ತೊಂದು ಕೊಲೆ ಕೇಸ್ ಈತನ ವಿರುದ್ಧ ದಾಖಲಾಗಿತ್ತು. ಕೆಜಿ ಹಳ್ಳಿ ಠಾಣೆಯಲ್ಲಿ ಐಪಿಸಿ ಸೆಕ್ಷನ್‌ನಡಿ 307 ಸೇರಿದಂತೆ ಎರಡು ಪ್ರಕರಣಗಳು ದಾಖಲಾಗಿದ್ದವು ಎಂದು ತಿಳಿದು ಬಂದಿದೆ.

ಹೀಗಾಗಿ ಖಚಿತ ಮಾಹಿತಿ ಮೇರೆಗೆ ರೌಡಿಶೀಟರ್‌ ಸೂರ್ಯನನ್ನ ಬಂಧಿಸಲು ಹೋದ ಸಂದರ್ಭದಲ್ಲಿ ಈ ಘಟನೆ ನಡೆದಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ಗಾಯಗೊಂಡ ರೌಡಿಶೀಟರ್ ಸೂರ್ಯನನ್ನು ಬೌರಿಂಗ್ ಆಸ್ಪತ್ರೆಯಲ್ಲಿ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ.