ಕಲಬುರಗಿಯ ಸುಪರ್ ಮಾರ್ಕೆಟ್ ತರಕಾರಿ ಮಾರುಕಟ್ಟೆ ಬಳಿ ಫೈರಿಂಗ್: ಬೆಚ್ಚಿಬಿದ್ದ ಜನತೆ
ತಲವಾರ್ ಹಿಡಿದು ಜನರನ್ನು ಹೆದರಿಸುತ್ತಿದ್ದ ಕಿಡಿಗೇಡಿ ಮೇಲೆ ಪೊಲೀಸರು ಫೈರಿಂಗ್ ಮಾಡಿದ ಘಟನೆ ನಗರದ ಸುಪರ್ ಮಾರ್ಕೆಟ್ ತರಕಾರಿ ಮಾರುಕಟ್ಟೆ ಬಳಿ ನಡೆದಿದೆ.
ಕಲಬುರಗಿ(ಫೆ.06): ತಲವಾರ್ ಹಿಡಿದು ಜನರನ್ನು ಹೆದರಿಸುತ್ತಿದ್ದ ಕಿಡಿಗೇಡಿ ಮೇಲೆ ಪೊಲೀಸರು ಫೈರಿಂಗ್ ಮಾಡಿದ ಘಟನೆ ನಗರದ ಸುಪರ್ ಮಾರ್ಕೆಟ್ ತರಕಾರಿ ಮಾರುಕಟ್ಟೆ ಬಳಿ ನಿನ್ನೆ(ಭಾನುವಾರ) ನಡೆದಿದೆ. ಕಲಬುರಗಿ ನಗರದ ಸುಪರ್ ಮಾರ್ಕೆಟ್ ತರಕಾರಿ ಮಾರುಕಟ್ಟೆ ಬಳಿ ರಾತ್ರಿ 9 ಗಂಟೆ ಸುಮಾರಿಗೆ ಘಟನೆ ನಡೆದಿದೆ.
ವ್ಯಕ್ತಿಯೋರ್ವ ತಲವಾರು ಹಿಡಿದು ಜನರತ್ತ ಬೀಸುತ್ತಿದ್ದ, ಈ ಸಂದರ್ಭದಲ್ಲಿ ಪೊಲೀಸರು ಸ್ಥಳಕ್ಕೆ ಬಂದು ಆತನ ನಿಯಂತ್ರಿಸಲು ಯತ್ನಿಸಿದ್ದಾರೆ. ಈ ವೇಳೆ ಪೊಲೀಸರ ಮೇಲೆಯೇ ದಾಳಿಗೆ ಮುಂದಾಗಿದ್ದನು. ಹೀಗಾಗಿ ಸಾರ್ವಜನಿಕರ ರಕ್ಷಣೆಗಾಗಿ ಚೌಕ್ ಠಾಣೆ ಪಿ.ಎಸ್.ಐ ಕೋತ್ವಾಲ್ ಮೂರು ಸುತ್ತು ಗುಂಡು ಹಾರಿಸಿದ್ದಾರೆ. ಎರಡು ಗುಂಡು ಆರೋಪಿಯ ಕಾಲಿಗೆ ತಗುಲಿ ಗಂಭೀರವಾಗಿ ಗಾಯಗೊಂಡಿದ್ದಾನೆ.
ಸಕಲೇಶಪುರ: ಮೀನು ಹಿಡಿಯುತ್ತಿದ್ದವರ ಮೇಲೆ ಗುಂಡಿನ ದಾಳಿ, ಓರ್ವನ ಸಾವು
ಗಾಯಗೊಂಡ ಅಬ್ದುಲ್ ಜಾಫರ್ ಸಾಬ್ ಎಂಬ ಆರೋಪಿಯನ್ನು ಕಲಬುರಗಿಯ ಬಸವೇಶ್ವರ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ಅತ್ಯಂತ ಜನನಿಬಿಡ ಪ್ರದೇಶದಲ್ಲಿ ನಡೆದ ಘಟನೆಯಿಂದ ಜನರು ಭಯಭೀತರಾಗಿದ್ದರು. ಹಲವರು ಅಂಗಡಿ ಬಂದ್ ಮಾಡಿಕೊಂಡು ಮನೆಗೆ ತೆರಳಿದ್ದಾರೆ. ಘಟನಾ ಸ್ಥಳಕ್ಕೆ ಪೊಲೀಸ್ ಕಮಿಷನರ್ ಚೇತನ್ ಆರ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.