Asianet Suvarna News Asianet Suvarna News

ಬಾಗಲಕೋಟೆ ಬಾಲಕಿ ಕಿಡ್ನಾಪ್‌ಗೂ ಗೋವಾ ಕ್ಯಾಸಿನೋಕ್ಕೂ ಏನ್ ಸಂಬಂಧ?

* ಬಾಗಲಕೋಟೆ ಬಾಲಕಿ ಕಿಡ್ನ್ಯಾಪ್ ಪ್ರಕರಣ ಸುಖಾಂತ್ಯ
* ಕಿಡ್ನ್ಯಾಪ್ ಮಾಡಿದ ಅಪಹರಣಕಾರರ ಜಾಲ ಬೆನ್ನು ಬಿದ್ದ ಪೋಲಿಸರು
* ಬಾಲಕಿ ಸಂಭಂದಿಯೊಬ್ಬರ ಸಹಚರರಿಂದಲೇ ಕಿಡ್ನ್ಯಾಪ್ ನಡೆದಿರೋ ಶಂಕೆ..
* ಘಟನೆ ಸಂಭಂಧ ಆರೋಪಿಯೊಬ್ಬನ ವಶಕ್ಕೆ ಪಡೆದು ತನಿಖೆ ಮುಂದುವರಿಸಿರುವ ಪೊಲೀಸರು

Police enquiry Starts in Bagalakote girl Kidnap case mah
Author
Bengaluru, First Published Oct 29, 2021, 1:56 AM IST
  • Facebook
  • Twitter
  • Whatsapp

ಬಾಗಲಕೋಟೆ(ಅ. 29)  ಬಾಗಲಕೋಟೆ ಬಾಲಕಿ ಅಪಹರಣ ಸುಖಾಂತ್ಯ  ಕಂಡಿದೆ.  ಆದರೆ  ಪೊಲೀಸರು ಅಪಹರಣಕಾರರ ಜಾಲ ಬೆನ್ನು ಬಿದ್ದಿದ್ದಾರೆ. ಬಾಲಕಿ ಸಂಭಂದಿಯೊಬ್ಬರ ಸಹಚರರಿಂದಲೇ ಕಿಡ್ನ್ಯಾಪ್ ನಡೆದಿರೋ ಶಂಕೆ ವ್ಯಕ್ತವಾಗಿದೆ.

ಘಟನೆ ಸಂಭಂಧ ಆರೋಪಿಯೊಬ್ಬನ ವಶಕ್ಕೆ ಪಡೆದು  ಪೊಲೀಸರು ತನಿಖೆ ಮುಂದುವರಿಸಿದ್ದಾರೆ. ಹಣಕಾಸಿನ ವ್ಯವಹಾರಕ್ಕೆ ಸಂಭಂದಿಸಿದ ಹಿನ್ನೆಲೆ ಬಾಲಕಿ ಕೃತಿಕಾ ಕಿಡ್ನ್ಯಾಪ್ ಮಾಡಿರುವ ಶಂಕೆ ವ್ಯಕ್ತವಾಗಿದೆ.  ಕಿಡ್ನ್ಯಾಪ್ ಪ್ರಕರಣದಲ್ಲಿ ಸ್ಥಳೀಯರು ಮತ್ತು ಹೊರ ರಾಜ್ಯದ ಆರೋಪಿಗಳು ಭಾಗಿಯಾಗಿರೋ ಸಾಧ್ಯತೆ ಇದೆ ಎನ್ನಲಾಗಿದೆ.

ಹಾಸನ;  ತಂಗಿಯನ್ನು ಕೊಚ್ಚಿಹಾಕಲು ಅಣ್ಣನಿಗೆ ಅದೊಂದು ಕಾರಣ ಸಾಕಿತ್ತು!

ಪ್ರಕರಣಕ್ಕೆ ಗೋವಾದಲ್ಲಿನ ಕ್ಯಾಸಿನೋ ವ್ಯವಹಾರದ ಲಿಂಕ್ ಇದೆ ಎಂಬ ಅನುಮಾನ ಮೂಡಿದೆ. ಬಾಗಲಕೋಟೆ ಪೋಲಿಸರಿಂದ ಆರೋಪಿಗಳಿಗೆ ತೀವ್ರ ಶೋಧ ನಡೆದಿದೆ. 

ನವನಗರದ 61ನೇ ಸೆಕ್ಟರ್​ನಲ್ಲಿ ಹಣದ ಆಸೆಗಾಗಿ ಪರಿಚಿತರೇ ಬಾಲಕಿಯನ್ನು ಅಪಹರಣ ಮಾಡಿರುವ ಶಂಕೆ  ಮೊದಲೇ ವ್ಯಕ್ತವಾಗಿತ್ತು. ಏಳು ವರ್ಷದ ಬಾಲಕಿ  ಟ್ಯೂಷನ್​ಗೆ ಹೋಗುತ್ತಿದ್ದಳು. ಇದನ್ನು ಗಮನಿಸಿದ್ದ ಕಿಡಿಗೇಡಿಗಳು ಬುಧವಾರ ರಾತ್ರಿ ಆಕೆ ಟ್ಯೂಷನ್ ಮುಗಿಸಿ ಹಿಂದಿರುಗುತ್ತಿದ್ದ ವೇಳೆ ಕಾರಿನಲ್ಲಿ ಬಂದು ಕಿಡ್ನಾಪ್ ಮಾಡಿದ್ದರು. ಹಣಕ್ಕೆ ಬೇಡಿಕೆ  ಇಟ್ಟಿದ್ದರು.  ನಂತರ ಬಾಲಕಿಯನ್ನು ಅಪಹರಣಕಾರರೇ ಮನೆ ಹತ್ತಿರ ತಂದು ಬಿಟ್ಟು ಹೋಗಿದ್ದರು.

ಬೆಳಗಾವಿ ಮರ್ಡರ್; ಕ್ಷುಲ್ಲಕ ಕಾರಣಕ್ಕೆ ವ್ಯಕ್ತಿಯೊಬ್ಬನ ಹತ್ಯೆ ಆಗಿ ಹೋಗಿದೆ  ಬೈಕ್ ನಿಯಂತ್ರಣ ತಪ್ಪಿ ಪಾದಚಾರಿಗೆ ಗುದ್ದಿದೆ.. ಇದೆ ಕಾರಣಕ್ಕೆ ವಾಹನ ಸವಾರನನ್ನ ಕಾಲಿನಿಂದ ಒದ್ದು ಹತ್ಯೆ ಮಾಡಲಾಗಿದೆ.

ಬೆಳಗಾವಿ ಜಿಲ್ಲೆಯ ಕಿತ್ತೂರು ಪಟ್ಟಣದ ಚೌಕಿಮಠ ಕ್ರಾಸ್ ನಲ್ಲಿ ಘಟನೆ ನಡೆದಿದೆ. ವಿಜಯ ಮಹಾಂತೇಶ್ ಹಿರೇಮಠ ಬೈಕ್ ಮೇಲೆ ಬರುತ್ತಿದ್ದರು. ಈ ವೇಳೆ ಬೈಕ್‌ಗೆ ಹಿಂಬದಿಯಿಂದ ಕಾರೊಂದು ಗುದ್ದಿದೆ.  ಕಾರು ಗುದ್ದುತ್ತಿದ್ದಂತೆ ಪಾದಚಾರಿಗೆ ಹೋಗಿ ಬೈಕ್ ಡಿಕ್ಕಿಯಾಗಿದೆ.

ಬೈಕ್ ಗುದ್ದುತ್ತಿದ್ದಂತೆ ಆಕ್ರೋಶಗೊಂಡು ಸವಾರ ವಿಜಯಮಹಾಂತೇಶ್‌ಗೆ ಕಿತ್ತೂರು ತಾಲೂಕಿನ ಮಲ್ಲಾಪೂರ ಗ್ರಾಮದ ಅದೃಶ್ಯ ಎಂಬಾತ ಹಲ್ಲೆ ಮಾಡಿದ್ದಾನೆ. ಸ್ಥಳದಲ್ಲೇ ಕುಸಿದು ಬಿದ್ದು 67ವರ್ಷದ ವಿಜಯಮಹಾಂತೇಶ್ ಸಾವು ಕಂಡಿದ್ದಾರೆ.  ಸಿಸಿಟಿವಿಯಲ್ಲಿ ದೃಶ್ಯ ದಾಖಲಾಗಿದ್ದು ಪೊಲೀಸರು ತನಿಖೆ ಕೈಗೆತ್ತಿಕೊಂಡಿದ್ದಾರೆ. 

 

 

Follow Us:
Download App:
  • android
  • ios