ಬೆಂಗಳೂರು(ಡಿ 23) ಮಕ್ಕಳಾಗಿಲ್ಲ ಅನ್ನೋ ಕಾರಣಕ್ಕೆ ಬೇಸತ್ತು ಪೊಲೀಸ್ ದಂಪತಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾಗಿದೆ.  ಅಂತರ್ಜಾತಿ ವಿವಾಹವಾದರೂ ಎರಡೂ ಮನೆಯವರನ್ನ ಒಪ್ಪಿಸಿ ಮದುವೆಯಾಗಿದ್ದ ಜೋಡಿ ದುರಂತ ಅಂತ್ಯ ಕಂಡಿದ್ದಾರೆ.

ಮಂಗಳವಾರ ರಾತ್ರಿ ರೂಂ ಬಾಗಿಲು ಹಾಕಿಕೊಂಡ ಪತ್ನಿ ರೇಖಾ ನೇಣು ಹಾಕಿಕೊಂಡಿದ್ದಾರೆ. ರೂಮಿನ ಕಿಟಕಿಯಿಂದ ನೋಡಿದಾಗ ಹೆಂಡತಿ ನೇಣು ಹಾಕಿಕೊಂಡಿರುವುದು  ಗಂಡನಿಗೆ ಗೊತ್ತಾಗಿದೆ. ಪತ್ನಿ ಸಾವನ್ನಪ್ಪಿದ್ದನ್ನು ಕಂಡು ಗಂಡನೂ ಆತ್ಮಹತ್ಯೆಗೆ ಶರಣಾಗಿದ್ದಾರೆ.

ಹಲವು ಪ್ರಶ್ನೆ ಎತ್ತಿದ ಡಿವೈಎಸ್‌ಪಿ ಆತ್ಮಹತ್ಯೆ ಪ್ರಕರಣ

ಕೋಲಾರ ಮೂಲದ ಸುರೇಶ್, ಹೊಸದುರ್ಗ ಮೂಲದ ರೇಖಾ ದುರಂತ ಅಂತ್ಯ ಕಂಡವರು ಕೆಲಸಕ್ಕೆ ಸೇರಿದ ಮೇಲೆ ಪ್ರೀತಿಸಿ ಮುದುವೆ ಆಗಿದ್ದರು. ರೇಖಾ ಪೊಲೀಸ್ ಕಮಿಷನರ್ ಕಚೇರಿಯಲ್ಲಿ ಹೆಡ್ ಕಾನ್ಸ್‌ಟೇಬಲ್ ಆಗಿ ಕೆಲಸ ಮಾಡುತ್ತಿದ್ದರು.