Asianet Suvarna News Asianet Suvarna News

ಡಿವೈಎಸ್ಪಿ ಲಕ್ಷ್ಮೀ ನಿಗೂಢ ಸಾವಿನ ಬೆನ್ನಲ್ಲೇ ಪೊಲೀಸ್ ದಂಪತಿ ಆತ್ಮಹತ್ಯೆ

ಬುಧವಾರ ರಾತ್ರಿಯಷ್ಟೇ ಸಿಐಡಿ ಡಿವೈಎಸ್ಪಿ ಲಕ್ಷ್ಮಿ ಎಂಬುವರು ನಿಗೂಢವಾಗಿ ಸಾವಿಗೀಡಾಗಿದ್ದು, ಇದರ ಬೆನ್ನಲ್ಲೇ ಪೊಲೀಸ್ ದಂಪತಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

Police couple commits-suicide at Bengaluru rbj
Author
Bengaluru, First Published Dec 18, 2020, 2:39 PM IST

ಬೆಂಗಳೂರು, (ಡಿ.18): ರಾಜ್ಯದ ಸಿಐಡಿ ಡಿವೈಎಸ್ಪಿ ಲಕ್ಷ್ಮೀ ನಿಗೂಢ ಸಾವಿನ ಬೆನ್ನಲ್ಲೇ ಇದೀಗ ಪೊಲೀಸ್ ದಂಪತಿ ಆತ್ಮಹತ್ಯೆಗೆ ಶರಣಾಗಿರುವ ಘಟನೆ ನಗರದ ಕೊತ್ತನೂರು ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ,

ಕಾನ್‌ಸ್ಟೇಬಲ್‌ಗಳಾದ ಎಚ್.ಸಿ. ಸುರೇಶ್ ಹಾಗೂ ಶೀಲಾ ಆತ್ಮಹತ್ಯೆ ಮಾಡಿಕೊಂಡವರು.  ನಿಯಂತ್ರಣ ಕೊಠಡಿಯಲ್ಲಿ ಶೀಲಾ ಕರ್ತವ್ಯ ನಿರ್ವಹಿಸುತ್ತಿದ್ದರು. ಸಂಪಿಗೆಹಳ್ಳಿ ಎಸಿಪಿ ಉಪವಿಭಾಗದ ಕಚೇರಿಯಲ್ಲಿ ಬರಹಗಾರರಾಗ ಸುರೇಶ್ ಸೇವೆ ಸಲ್ಲಿಸುತ್ತಿದ್ದರು.

DySP ಲಕ್ಷ್ಮೀ ಸುಸೈಡ್: ಪಾರ್ಟಿಯ ನಂತರ ಫ್ಲ್ಯಾಟ್‌ನಲ್ಲಿ ನಡೆದಿದ್ದೇನು..?

ಕರ್ತವ್ಯ ನಿರ್ವಹಿಸಿ ಮನೆಗೆ ಹೋದ ಸುರೇಶ್ ಹಾಗೂ ಶೀಲಾ, ಇಬ್ಬರು ನೇಣು ಹಾಕಿಕೊಂಡು ಆತ್ಮಹತ್ಯೆ ಶರಣಾಗಿದ್ದಾರೆ. ಮದುವೆಯಾಗಿ 10 ವರ್ಷಗಳಾದರೂ ಮಕ್ಕಳಾಗದ ಹಿನ್ನೆಲೆ ಮನನೊಂದು ಸಾವಿಗೆ ಶರಣಾಗಿದ್ದಾರೆ ಎನ್ನಲಾಗಿದೆ.

ಈ ಬಗ್ಗೆ ಕೊತ್ತನೂರು ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ತನಿಖೆ ನಡೆಸಿದ್ದಾರೆ.
 

Follow Us:
Download App:
  • android
  • ios