ಭಟ್ಕಳ: ಇಬ್ಬರ ಮೃತದೇಹ ಪತ್ತೆ ಪ್ರಕರಣ, ಪೊಲೀಸರಿಗೇ ಫುಲ್ ಕನ್ಫ್ಯೂಶನ್..!
* ಭಟ್ಕಳದಲ್ಲಿ ಪುರುಷ ಹಾಗೂ ಮಹಿಳೆಯ ಮೃತದೇಹ ಪತ್ತೆ ಪ್ರಕರಣ
* ಆತ್ಮಹತ್ಯೆಯೋ ಅಥವಾ ಕೊಲೆಯೋ
* ಈ ಸಂಬಂಧ ಭಟ್ಕಳ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲು
ಉತ್ತರಕನ್ನಡ(ಸೆ.19): ಜಿಲ್ಲೆಯ ಭಟ್ಕಳ ತಾಲೂಕಿನ ಸರ್ಪನಕಟ್ಟೆ ಯಲ್ವಡಿಕವೂರು ಗ್ರಾಮ ಪಂಚಾಯತ ವ್ಯಾಪ್ತಿಯ ಉಯಿಲಮುಡಿ ಕಡಲ ತೀರದಲ್ಲಿ ಇಬ್ಬರ ಶವ ಪತ್ತೆಯಾದ ಪ್ರಕರಣ ಹಲವು ಸಂಶಯಗಳ ಗೂಡಾಗಿದೆ. ಹೌದು, ಮೃತದೇಹಗಳ ಸರಿಯಾದ ಮಾಹಿತಿ ದೊರೆಯದೇ ಪೊಲೀಸರು ಇನ್ನೂ ಕನ್‌ಫ್ಯೂಶನ್‌ನಲ್ಲಿದ್ದಾರೆ.
ಬೆಂಗಳೂರು ಮೂಲದ ಆದಿತ್ಯ ಬಿ.ಎಸ್. (33) ಹಾಗೂ ಲಕ್ಷ್ಮೀ(45) ಎಂಬವರ ಮೃತದೇಹ ಸಮುದ್ರ ತೀರದಲ್ಲಿ ಪತ್ತೆಯಾಗಿತ್ತು. ಈ ಪ್ರಕರಣ ಆತ್ಮಹತ್ಯೆಯೋ ಅಥವಾ ಕೊಲೆಯೋ ಎಂಬ ಅಂತಿಮ ನಿರ್ಣಯಕ್ಕೆ ಪೊಲೀಸರು ಇನ್ನೂ ಬಂದಿಲ್ಲ. ಪುರುಷ ಹಾಗೂ ಮಹಿಳೆ ತಾಯಿ ಮಗವಾಗಿರಬೇಕು ಎಂಬ ಪೊಲೀಸರು ಸಂಶಯ ವ್ಯಕ್ತಪಡಿಸಿದ್ದಾರೆ. ಆದರೆ, ಮೃತದೇಹಗಳನ್ನ ನೋಡಿದರೆ ತಾಯಿ-ಮಗನಂತೆ ಕಾಣೋದಿಲ್ಲ ಎಂದು ಸ್ಥಳೀಯರ ವಾದಿಸುತ್ತಿದ್ದಾರೆ.
ಉಯಿಲಮುಡಿ ಕಡಲ ತೀರದಲ್ಲಿ ಕೊಳೆತ ಸ್ಥಿತಿಯಲ್ಲಿ ದಂಪತಿಯ ಮೃತದೇಹ ಪತ್ತೆ
ಮಹಿಳೆಯನ್ನು ಕಲ್ಲಿನ ಮೇಲ್ಭಾಗದಿಂದ ದೂಡಿ ಕೊಲೆ ಮಾಡಲಾಗಿದೆ. ಬಳಿಕ ಕೊಲೆ ಮಾಡಿದ ವ್ಯಕ್ತಿ ಆತ್ಮಹತ್ಯೆ ಮಾಡಿಕೊಂಡರಬಹುದು ಅಂತ ಸ್ಥಳೀಯರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಸದ್ಯ ಮೃತರ ಸಂಬಂಧಿಗಳನ್ನು ಭಟ್ಕಳಕ್ಕೆ ಪೊಲೀಸರು ಕರೆಸಿದ್ದಾರೆ.
ಕುಟುಂಬಸ್ಥರು ಮೃತದೇಹವನ್ನು ನೋಡಿದ ಬಳಿಕವೇ ನಿಜವಾದ ಸತ್ಯಾಂಶ ಹೊರಬರಬೇಕಿದೆ. ಸೆ.15ರಂದು ಪುರುಷ ಹಾಗೂ ಮಹಿಳೆ ಮುರುಡೇಶ್ವರದಲ್ಲಿ ರೂಂ ಮಾಡಿಕೊಂಡಿದ್ದರು. ಮರುದಿನ ರೂಂ ಖಾಲಿ ಮಾಡಿಕೊಂಡು ಹೊರಟಿದ್ದು, ಶವವಾಗಿ ಪತ್ತೆಯಾಗಿದ್ದಾರೆ. ಈ ಸಂಬಂಧ ಭಟ್ಕಳ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿದಿದೆ.