Asianet Suvarna News Asianet Suvarna News

ಉಯಿಲಮುಡಿ ಕಡಲ ತೀರದಲ್ಲಿ ಕೊಳೆತ ಸ್ಥಿತಿಯಲ್ಲಿ ದಂಪತಿಯ ಮೃತದೇಹ ಪತ್ತೆ

* ಭಟ್ಕಳದ ಉಯಿಲಮುಡಿ ಕಡಲ ತೀರದಲ್ಲಿ ದಂಪತಿ ಮೃತದೇಹ ಪತ್ತೆ
* ಆದಿತ್ಯ ಬಿ.ಎಸ್. (48), ಲಕ್ಷ್ಮಿ (45) ಎಂಬ ಹೆಸರಿನ ದಂಪತಿಗಳ ಮೃತದೇಹ ಪತ್ತೆ
* ಆತ್ಮಹತ್ಯೆ ಮಾಡಿಕೊಂಡಿರುವ ಶಂಕೆ 

couple dead body found at Near bhatkal beach rbj
Author
Bengaluru, First Published Sep 18, 2021, 6:38 PM IST
  • Facebook
  • Twitter
  • Whatsapp

 ಭಟ್ಕಳ, (ಸೆ.18): ತಾಲೂಕಿನ ಸರ್ಪನಕಟ್ಟೆ ಯಲ್ವಡಿಕವೂರು ಗ್ರಾಮ ಪಂಚಾಯತ ವ್ಯಾಪ್ತಿಯ ಉಯಿಲಮುಡಿ ಕಡಲ ತೀರದಲ್ಲಿ ಮಹಿಳೆ ಮತ್ತು ಪುರುಷನ ಶವ ಪತ್ತೆಯಾಗಿದೆ.

 ಆದಿತ್ಯ ಬಿ.ಎಸ್. (48), ಲಕ್ಷ್ಮಿ (45) ಎಂಬ ಹೆಸರಿನ ದಂಪತಿಗಳ ಮೃತದೇಹ ಪತ್ತೆಯಾಗಿದ್ದು, ಇವರು ಬೆಂಗಳೂರಿನ ಜೆ.ಪಿ. ನಗರ ನಿವಾಸಿಗಳು ಎಂದು ಹೇಳಲಾಗಿದೆ.

ಒಂದೇ ಕುಟುಂಬದ ಐವರು ಆತ್ಮಹತ್ಯೆ: ಮೃತದೇಹಗಳೊಂದಿಗೆ 5 ದಿನ ಕಳೆದ 3 ವರ್ಷದ ಮಗು

ಮಹಿಳೆಯ ಶವವು ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿದ್ದು, ಮೇಲ್ನೋಟಕ್ಕೆ ಆತ್ಮಹತ್ಯೆ ಮಾಡಿಕೊಂಡಿರುವ ಶಂಕೆ ವ್ಯಕ್ತವಾಗಿದೆ.  ಇಬ್ಬರ ಹತ್ತಿರವಿದ್ದ ಆಧಾರ ಕಾರ್ಡ್, ಪಾನ್ ಕಾರ್ಡ್, ಡ್ರೈವಿಂಗ್ ಲೈಸೆನ್ಸ್ ಅನ್ನು ಸಂಪೂರ್ಣ ಹರಿದು ಹಾಕಿದ ಸ್ಥಿತಿಯಲ್ಲಿ ಪತ್ತೆಯಾಗಿದೆ. ಆದರೂ ಪೊಲೀಸರು ಹರಿದ ಆಧಾರ ಕಾರ್ಡ್ ಗುರುತಿಸಿ ಇವರಿಬ್ಬರನ್ನು ಬೆಂಗಳೂರಿನವರು ಎಂದು ಅಂದಾಜಿಸಿದ್ದಾರೆ.

 ಡಿವೈಎಸ್‌ಪಿ ಬೆಳ್ಳಿಯಪ್ಪ ಹಾಗೂ  ಭಟ್ಕಳ ಗ್ರಾಮೀಣ ಠಾಣೆ ತನಿಖಾಧಿಕಾರಿ ರೇವತಿ ಸ್ಥಳಕ್ಕೆ ಭೇಟಿ ನೀಡಿ ತನಿಖೆ ಮುಂದುವರಿಸಿದ್ದಾರೆ. ಭಟ್ಕಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Follow Us:
Download App:
  • android
  • ios