ಬೆಂಗಳೂರಿನಲ್ಲಿ ಮತ್ತೊಂದು ಬಹುಕೋಟಿ ಬ್ಯಾಂಕ್ ವಂಚನೆ ಬಯಲಿಗೆ

ಬೆಂಗಳೂರಿನಲ್ಲಿ ಮತ್ತೊಂದು ಬಹುಕೋಟಿ ಬ್ಯಾಂಕ್ ವಂಚನೆ ಪ್ರಕರಣ ಬೆಳಕಿಗೆ ಬಂದಿದೆ. ಕೋಟಿ ಕೋಟಿ ಹೂಡಿಕೆದಾರರಿಗೆ ಬ್ಯಾಂಕ್  ವಂಚನೆ ಮಾಡಿದ್ದು, ಈ  ಬಗ್ಗೆ ಠೇವಣಿದಾರರು ದೂರು ನೀಡಿದ್ದಾರೆ.

police arrests 2 persons For vaibhava souharda co operative society fraud In Bengaluru rbj

ಬೆಂಗಳೂರು, (ಜುಲೈ.17): ಜನರಿಗೆ ವಂಚಿಸೋ ಕೋ-ಆಪರೇಟಿವ್ ಸೊಸೈಟಿಗಳ ನಿಜಬಣ್ಣ ದಿನೇ ದಿನೇ ಬಯಲಾಗ್ತಿದೆ. ಗುರುರಾಘವೇಂದ್ರ, ವಶಿಷ್ಠ ಕೋ ಆಪರೇಟಿವ್ ಬ್ಯಾಂಕ್ ಅವ್ಯವಹಾರ ಹೊರಬಂದಿದ್ದೇ ಬಂದಿದ್ದು, ಅದರ ಹಿಂದೆ ಸಾಲು ಸಾಲು ಬ್ಯಾಂಕ್ ಗಳ ವಂಚನೆ ಬೆಳಕಿಗೆ ಬರ್ತಿದೆ.  ಇದೀಗ ಆ ವಂಚನೆ ಮಾಡಿದ ಬ್ಯಾಂಕ್ ಗಳ ಪಟ್ಟಿಗೆ,  ಸಿರಿವೈಭವ ಸ್ವತ್ತಿನ ಸಹಕಾರಿ ಬ್ಯಾಂಕ್ ಸಹ ಸೇರಿಕೊಂಡಿದೆ.

ಕಳೆದ 12 ವರ್ಷದಿಂದ ರಾಜೇಶ ಹಾಗೂ ಆತನ ಹೆಂಡತಿ ನಾಗವಲ್ಲಿ ಎಂಬುವವರು ಈ ಸಿರಿವೈಭವ ಸ್ವತ್ತಿನ ಸಹಕಾರಿ ಬ್ಯಾಂಕ್ ನಡೆಸುತ್ತಿದ್ದಾರೆ... ಉತ್ತರಹಳ್ಳಿ, ಬಿಳೇಕಳ್ಳಿ, ಆರ್ ಆರ್ ನಗರ ಹಾಗೂ,ಮೈಕೋಲೇಔಟ್ ಸೇರಿದಂತೆ ಹಲವು ಬ್ರಾಂಚ್ ಗಳನ್ನ ಹೊಂದಿದೆ. 10 ರಿಂದ 15 ಒಬ್ಬೊಬ್ಬರಿಗೆ 45 ಪರ್ಸೆಂಟ್ ವರೆಗೂ ಬಡ್ಡಿ ಕೊಡೋದಾಗಿ ನಂಬಿಸಿದ್ದ ಈ ವಂಚಕರು ಸಾವಿರಾರು ಮಂದಿಯಿಂದ ಸುಮಾರು 250 ಕೋಟಿಗೂ ಅಧಿಕಾ ಹಣ ಠೇವಣಿ ಮಾಡಿಸಿಕೊಂಡಿದ್ದಾರೆ.

ಜೊತೆಯಲ್ಲಿದ್ದವಳೇ ಗುರೂಜಿಗೆ ಸ್ಕೆಚ್! ಊರಿಗೆಲ್ಲಾ ಭವಿಷ್ಯ ಹೇಳ್ತಿದ್ದವರ ಭವಿಷ್ಯ ಅವತ್ತು ಕೆಟ್ಟಿತ್ತು!

 ಪ್ರಾರಂಭದಲ್ಲಿ ತಪ್ಪದೇ ಬಡ್ಡಿ ಕೊಟ್ಟಿದ್ದ ವಂಚಕರು ನಂತರ ಅಸಲಿ ವರಸೆ ಶುರು ಮಾಡಿದ್ದಾರೆ.. ಕಳೆದ ನಾಲ್ಕು ವರ್ಷಗಳಿಂದ ಠೇವಣಿದಾರರಿಗೆ ಬಡ್ಡಿನೂ ಇಲ್ಲ ಅಸಲು ಕೊಡದೇ, ಧಮ್ಕಿ ಹಾಕುತ್ತಿದ್ದಾರಂತೆ. ಇನ್ನೂ ಈ ಹಿಂದೆ ಕುಮಾರಸ್ವಾಮಿ ಲೇಔಟ್ ಪೊಲೀಸ್ರು ಆರೋಪಿ ರಾಜೇಶ ಹಾಗೂ ಆತನ ಪತ್ನಿ ವಾಣಿಯನ್ನ ಅರೆಸ್ಟ್ ಮಾಡಿ ಜೈಲಿಗಟ್ಟಿದ್ದರು. ಇದೀಗ ಇವರ ವಂಚನೆ ವ್ಯಾಪ್ತಿ ಮತ್ತಷ್ಟು ದೊಡ್ಡದಾಗಿದ್ದು, ನೂರಾರು ಮಂದಿ ಠೇವಣಿದಾರರು ಸುಬ್ರಮಣ್ಯಪುರ ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾರೆ.

 ರಾಜಕಾರಣಿಗಳು ಈ ಆರೋಪಿಗಳಿಗೆ ಬೆನ್ನಿಗೆ ನಿಂತಿರೋದ್ರಿಂದಾನೆ ನಮಗೆ ಹಣ ಸಿಗ್ತಿಲ್ಲ ಅಂತ ಆರೋಪ ಮಾಡ್ತಿದ್ದಾರೆ. ಸದ್ಯ ಪ್ರಕರಣ ದಾಖಲಿಸಿಕೊಂಡಿರುವ ಸುಬ್ರಮಣ್ಯಪುರ ಪೊಲೀಸ್ರು ರಾಜೇಶ್ ಹಾಗೂ ವಾಣಿಯನ್ನ ಮತ್ತೆ ಬಂಧಿಸಿದ್ದಾರೆ

ಅದೇನೆ ಇರ್ಲಿ ಬೆಂಗಳೂರು ದಕ್ಷಿಣದಲ್ಲೇ ಈ ರೀತಿಯಾದ ವಂಚಕ ಬ್ಯಾಂಕ್ ಗಳು ಬೆಳಕಿಗೆ ಬರ್ತಿದ್ದು, ವಂಚಕರ ಟೀಂ ಬೆಂಗಳೂರು ದಕ್ಷಿಣದಲ್ಲೇ ಬೀಡುಬಿಟ್ಟಿದ್ಯ ಅನ್ನೋ ಅನುಮಾನ ಇದೀಗ ಕಾಡೋಕೆ ಶುರುವಾಗಿದೆ.

Latest Videos
Follow Us:
Download App:
  • android
  • ios