ಲವರ್‌ಗಾಗಿ ಗಾಂಜಾ ಮಾರಾಟಕ್ಕಿಳಿದ ಯುವತಿ..!
* ವಿದೇಶಿ ಡ್ರಗ್ ಫೆಡ್ಲರ್ ಬಂಧನ
* ವಿದ್ಯಾರ್ಥಿ ವೀಸಾದಲ್ಲಿ ಭಾರತಕ್ಕೆ ಬಂದ ಬಂಧಿತ ಆರೋಪಿ
* ಬಂಧಿತಳಿಂದ ಎರಡೂವರೆ ಕೆಜಿ ಗಾಂಜಾ ವಶ
ಬೆಂಗಳೂರು(ಜೂ.16): ಪ್ರಿಯಕರನಿಗಾಗಿ ಗಾಂಜಾ ಮಾರಾಟಕ್ಕಿಳಿದಿದ್ದ ಇಂಜನಿಯರಿಂಗ್ ಪದವೀಧರೆಯೊಬ್ಬಳನ್ನ ಸದಾಶಿವನಗರ ಪೊಲೀಸರು ಬಂಧಿಸಿದ್ದಾರೆ. ರೇಣುಕಾ ಎಂಬಾಕೆಯೇ ಬಂಧಿತ ಆರೋಪಿಯಾಗಿದ್ದಾಳೆ. ಬಂಧಿತಳಿಂದ ಎರಡೂವರೆ ಕೆಜಿ ಗಾಂಜಾ ವಶಕ್ಕೆ ಪಡೆಯಲಾಗಿದೆ ಎಂದು ತಿಳಿದು ಬಂದಿದೆ.
ಬಂಧಿತ ರೇಣುಕಾ ನೆರೆಯ ಅಂಧ್ರಪ್ರದೇಶದಿಂದ ಬಂದು ಬೆಂಗಳೂರಿನಲ್ಲಿ ಗಾಂಜಾ ಮಾರಾಟ ಮಾಡುತ್ತಿದ್ದಳು. ಚೆನ್ನೈನ ಖಾಸಗಿ ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿರುವ ಸಿದ್ದಾರ್ಥ್‌ನಮ್ನ ರೇಣುಕಾ ಪ್ರೀತಿಸುತ್ತಿದ್ದಾಳೆ ಎಂದು ಮಾಹಿತಿ ನೀಡಿದ್ದಾರೆ.
ಪ್ರಿಯಕರ ಸಿದ್ದಾರ್ಥ್ ಮುಖೇನ ಗಾಂಜಾ ತಂದು ನಗರದಲ್ಲಿ ಮಾರಾಟ ಮಾಡುತ್ತಿದ್ದಳು. ಬಂಧಿತ ರೇಣುಕಾ ರಸ್ತೆ ಕಾಣುವಂತೆ ಓಯೋ ರೂಮ್ ಬುಕ್ ಮಾಡುತ್ತಿದ್ದಳು. ಪ್ರಿಯಕರ ಸಿದ್ದಾರ್ಥ್ ಫೋನ್‌ನಿಂದ ಕಾನ್ಫರೆನ್ಸ್ ಕಾಲ್ ಮೂಲಕ ಕಸ್ಟಮರ್‌ಗೆ ಆಡ್ರೆಸ್ ಹೇಳಿ ಗ್ರಾಹಕರನ್ನ ಓಯೋ ರೂಮ್ ಬಳಿ ಕಳುಹಿಸಿತ್ತದ್ದನು ಸಿದ್ದಾರ್ಥ್.
ಗಾಂಜಾ ಮತ್ತಲ್ಲಿ ಸಿನಿಮೀಯ ರೀತಿಯ ದರೋಡೆ : ಯುವಕರು ಅರೆಸ್ಟ್
ಸಿದ್ದಾರ್ಥ್ ಪೊಲೀಸರಿಗೆ ಯಾವುದೇ ರೀತಿಯಲ್ಲಿ ಅನುಮಾನ ಬಾರದಿರಲಿ ಅಂತ ಪ್ರಿಯತಮೆ ರೇಣುಕಾ ಕೈಲಿ ಗಾಂಜಾ ಸಪ್ಲೈ ಮಾಡುತ್ತಿದ್ದನಂತೆ. ಈ ಬಗ್ಗೆ ಖಚಿತ ಮಾಹಿತಿ ಮೇರೆಗೆ ಸದಾಶಿವನಗರ ಪೊಲೀಸ್ ಠಾಣೆಯ ಲೇಡಿ ಪಿಎಸ್‌ಐ ಶೋಭಾ ಮತ್ತವರ ತಂಡ ಆರೋಪಿತೆ ರೇಣುಕಾಳನ್ನ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಸದ್ಯ ತಲೆಮರೆಸಿಕೊಂಡಿರುವ ಪ್ರೇಮಿ ಸಿದ್ದಾರ್ಥ್‌ಗಾಗಿ ಪೊಲೀಸರು ಹುಡುಕಾಟ ಆರಂಭಿಸಿದ್ದಾರೆ.
ವಿದೇಶಿ ಡ್ರಗ್ ಫೆಡ್ಲರ್ ಬಂಧನ
ನಗರದಲ್ಲಿ ಸಿಸಿಬಿ ಪೊಲೀಸರು ವಿದೇಶಿ ಡ್ರಗ್ ಫೆಡ್ಲರ್‌ನನ್ನ ಬಂಧಿಸಿದ್ದಾರೆ. ನೈಜೀರಿಯಾ ಮೂಲದ ಡ್ರಗ್ ಫೆಡ್ಲರ್ 24 ವರ್ಷದ ಕೆಲ್ವಿನ್ ಇಡಿಕೊ ಒಕೊರೋ ಬಂಧಿತ ಆರೋಪಿಯಾಗಿದ್ದಾನೆ.
ಬಂಧಿತ ಆರೋಪಿ ಕೆಲ್ವಿನ್ ಇಡಿಕೊ ಒಕೊರೋ ರಾಮಮೂರ್ತಿನಗರ ಠಾಣಾ ವ್ಯಾಪ್ತಿಯಲ್ಲಿ ಮಾದಕ ವಸ್ತು ಹಾಗೂ ಕೊಕೈನ್ ಮಾರಾಟ ಮಾಡುತ್ತಿದ್ದನು. ಈತ ವಿದ್ಯಾರ್ಥಿ ವೀಸಾದಲ್ಲಿ ಭಾರತಕ್ಕೆ ಬಂದಿದ್ದಾನೆ ಎಂದು ತಿಳಿದು ಬಂದಿದೆ. ಆರೋಪಿಯಿಂದ 4 ಲಕ್ಷ ಮೌಲ್ಯದ ಕೊಕೈನ್, ಮೂರು ಮೊಬೈಲ್ ಹಾಗೂ ಒಂದು ಬೈಕ್ ವಶಕ್ಕೆ ಪಡೆಯಲಾಗಿದೆ. ಈ ಸಂಬಂಧ ರಾಮಮೂರ್ತಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.