* ಪ್ರಧಾನಿ ಲೆಟರ್ ಹೆಡ್ ಬಳಸಿ ಕೆಜಿಎಫ್ ಸಿನಿಮಾ ಅಪ್ ಡೇಟ್ ಗೆ ಮನವಿ* ವಿಜಯ್ ಕಿರಗಂದೂರುಗೆ ಪ್ರಧಾನಿಯ ಲೆಟರ್ ಹೆಟ್ ಬಳಸಿ ಪತ್ರ* ವಿಜಯ್ ಕಿರಗಂದೂರುಗೆ ಪ್ರಧಾನಿ ಪತ್ರ ಬರೆಯುವಂತೆ ಪತ್ರ* ಕೆಜಿಎಫ್ ಸಿನಿಮಾದ ಬಗ್ಗೆ ಮಾಹಿತಿ ಕೇಳುವಂತೆ ಪತ್ರ

ಕೆಜಿಎಫ್ 2 ಸಿನಿಮಾ ರಿಲೀಸ್ ಗಾಗಿ ಪ್ರಧಾನಿ ಮೋದಿಯೇ ಉತ್ಸುಕರಾಗಿರುವಂತೆ ನಕಲಿ ಪತ್ರವನ್ನು ಕೆಜಿಎಫ್ 'ಅಭಿಮಾನಿ' ಬರೆದಿದ್ದಾರೆ. ಮೋದಿ ಹೆಸರಲ್ಲಿ ನಕಲಿ ಪತ್ರ ಟ್ವೀಟ್ ಮಾಡಿ ಕೆಜಿಎಫ್ ನಿರ್ಮಾಣ ಸಂಸ್ಥೆಗೆ ತಲೆನೋವು ತಂದಿದ್ದಾನೆ.

 ಬೆಂಗಳೂರು(ಫೆ. 22) ಈ ಸೋಶಿಯಲ್ ಮೀಡಿಯಾ (Social Media) ಜಮಾನದಲ್ಲಿ ಏನೇನು ಮಾಡಲು ಅಸಾಧ್ಯ ಎನ್ನುವಂತೆ ಇಲ್ಲ. ಪ್ರಧಾನಿ ಮೋದಿ (Narendra Modi) ಹೆಸರಿನಲ್ಲಿ ನಕಲಿ(Fake Letter) ಪತ್ರ ಕ್ರಿಯೇಟ್ ಮಾಡಲಾಗಿದೆ. ಅಷ್ಟೆ ಅಲ್ಲ ಕೆಜಿಎಫ್ ರಿಲೀಸ್ ಗಾಗಿ ಪ್ರಧಾನಿ ಉತ್ಸುಕರಾಗಿರುವಂತೆ ಕಾಣಿಸಲಾಗಿದೆ.

ಕೆಜಿಎಫ್ 2 ಸಿನಿಮಾ ರಿಲೀಸ್ ಗಾಗಿ ಪ್ರಧಾನಿ ಮೋದಿಯೇ ಉತ್ಸುಕರಾಗಿರುವಂತೆ ನಕಲಿ ಪತ್ರವನ್ನು ಕೆಜಿಎಫ್ 'ಅಭಿಮಾನಿ' ಬರೆದಿದ್ದು ಈಗ ಪೊಲೀಸರ ವಶದಲ್ಲಿದ್ದಾನೆ. ಮೋದಿ ಹೆಸರಲ್ಲಿ ನಕಲಿ ಪತ್ರ ಟ್ವೀಟ್ ಮಾಡಿ ಕೆಜಿಎಫ್ ನಿರ್ಮಾಣ ಸಂಸ್ಥೆಗೆ ತಲೆನೋವು ತಂದಿದ್ದಾನೆ.

ಕೆಜಿಎಫ್ ನಲ್ಲಿ ಸುಧಾರಾಣಿ ಮತ್ತು ಶ್ರುತಿ

ಮೋದಿ ಹೆಸರಲ್ಲಿ ನಕಲಿ ಪತ್ರ ಬರೆದು ವಿವಾದ ಸೃಷ್ಟಿಸಿದ ಚೇತನ್ ಕುಮಾರ್ ಬಂಧನ ಎಂಬಾತನ ಬಂಧನವಾಗಿದೆ. ಶೇಷಾದ್ರಿಪುರಂ ಪೋಲೀಸ್ ಠಾಣೆಯಲ್ಲಿ ದೂರು ದಾಖಲು. ಚೇತನ್ ಕುಮಾರ್ ನನ್ನು ಬಂಧಿಸಿ ಎಫ್ ಐಆರ್ ದಾಖಲಿಸಿಕೊಳ್ಳಲಾಗಿದೆ.

ಮೋದಿ ಹೆಸರಿನ ನಕಲಿ ಪತ್ರದ ಮೂಲಕ ಕೆಜಿಎಫ್-2 ಚಿತ್ರತಂಡವನ್ನು ಕಾಡಿದ ಆಸಾಮಿ ಈಗ ಜೈಲು ಸೇರಿದ್ದಾನೆ. ಸುಮೋಟೊ ಕೇಸ್ ಹಾಕಲಾಗಿದ್ದು ಐ ಪಿಸಿ ಸೆಕ್ಷನ್ 505(2) & 504 ನ ಅಡಿಯಲ್ಲಿ ದೂರು ದಾಖಲಿಸಿಕೊಳ್ಳಲಾಗಿದ್ದು. ಚೇತನ್ ಕುಮಾರ್ ನನ್ನು ಕೋರ್ಟ್ ಮುಂದೆ ಹಾಜರು ಪಡಿಸಲಾಗಿದೆ. .

ಕೆಜಿಎಫ್ ಬಿಡಗುಡೆ ಯಾವಾಗ? ನಟ ಯಶ್ (Yash)​ ಹಾಗೂ ನಿರ್ದೇಶಕ ಪ್ರಶಾಂತ್​ ನೀಲ್ (Prashanth Neel)​ ಅವರ ಕಾಂಬಿನೇಷನ್​ನಲ್ಲಿ ಮೂಡಿಬರುತ್ತಿರುವ ‘ಕೆಜಿಎಫ್​ 2’ (KGF Chapter 2) ಸಿನಿಮಾಗಾಗಿ ಕಾದು ಕುಳಿತಿರುವ ಪ್ರೇಕ್ಷಕರಿಗೆ ಹಾಗೂ ಅಭಿಮಾನಿಗಳಿಗೆ ಗುಡ್‌ ನ್ಯೂಸ್ ಸಿಕ್ಕಿತ್ತು. ಸಿನಿಮಾ ರಿಲೀಸ್​ ವಿಚಾರದಲ್ಲಿ ಅಭಿಮಾನಿಗಳಿಗೆ ಪದೇಪದೇ ನಿರಾಸೆ ಆಗುತ್ತಲೇ ಇತ್ತು. ಇದೀಗ ಕೆಜಿಎಫ್​ 2 ಏಪ್ರಿಲ್ 14 ಕ್ಕೆ ಕೆಜಿಎಫ್ 2 ವಿಶ್ವದಾದ್ಯಂತ ತೆರೆಗೆ ಅಪ್ಪಳಿಸಲಿದೆ! ಆದರೂ ಇದು ಅಧಿಕೃತ ಸುದ್ದಿ ಅಲ್ಲ.

ಕನ್ನಡ, ತೆಲುಗು, ತಮಿಳು, ಹಿಂದಿ , ಮಲಯಾಳಂ ಅಲ್ಲದೆ ಇಂಗ್ಲಿಷ್ ನಲ್ಲೂ ಬಿಡುಗಡೆಯಾಗಲಿದೆ . ಹೀಗೊಂದು ಸುದ್ದಿಯನ್ನು ಹೊಂಬಾಳೆ ಫಿಲ್ಮ್ ಎನ್ನುವ ಟ್ವಿಟ್ಟರ್ ಖಾತೆಯಿಂದ ಹೊರಬಿದ್ದಿದೆ. ಆದ್ರೆ, ಆ ಟ್ವಿಟ್ಟರ್‌ ಖಾತೆ ವೇರಿಫೈಡ್ ಅಲ್ಲ ಎನ್ನಲಾಗಿತ್ತು.

ನಟ ಯಶ್ (Yash)​ ಹಾಗೂ ನಿರ್ದೇಶಕ ಪ್ರಶಾಂತ್​ ನೀಲ್ (Prashanth Neel)​ ಅವರ ಕಾಂಬಿನೇಷನ್​ನಲ್ಲಿ ಮೂಡಿಬರುತ್ತಿರುವ ‘ಕೆಜಿಎಫ್​ 2’ (KGF Chapter 2) ಸಿನಿಮಾಗಾಗಿ ದೊಡ್ಡ ಪ್ರೇಕ್ಷಕ ವರ್ಗ ಕಾದು ಕೂತಿದೆ. ಸಿನಿಮಾ ರಿಲೀಸ್​ ವಿಚಾರದಲ್ಲಿ ಅಭಿಮಾನಿಗಳಿಗೆ ಪದೇಪದೇ ನಿರಾಸೆ ಆಗುತ್ತಲೇ ಇತ್ತು. ಇದಕ್ಕೆ ನೇರ ಕಾರಣ ಕೊರೋನಾ ವೈರಸ್​ ಕಾರಣವಾಗಿತ್ತು.

ಇದೀಗ ಕೊರೋನಾ ಎರಡನೇ ಅಲೆ ನಿಧಾನವಾಗಿ ಕಡಿಮೆಯಾಗುತ್ತಿದ್ದಂತೆಯೇ ಕೆಜಿಎಫ್‌-2 ಚಿತ್ರ ಬಿಡುಗಡೆಗೆ ಮುಹೂರ್ತ ಫಿಕ್ಸ್ ಮಾಡಲಾಗಿದೆ. ಇದರಿಂದ ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದಾರೆ. ಕೆಜಿಎಫ್​ 2’ ಪ್ಯಾನ್​ ಇಂಡಿಯಾ ಸಿನಿಮಾ. ಕೆಜಿಎಫ್​ ಸಿನಿಮಾ ಬಾಲಿವುಡ್​ ಹಾಗೂ ಟಾಲಿವುಡ್​ನಲ್ಲೂ ದೊಡ್ಡ ಮಟ್ಟದ ಹವಾ ಮಾಡಿದೆ. ಈ ಕಾರಣಕ್ಕೆ ‘ಕೆಜಿಎಫ್​ 2’ ಸಿನಿಮಾ ಮೇಲೆ ದೊಡ್ಡ ಮಟ್ಟದ ನಿರೀಕ್ಷೆ ಇದೆ. ಇನ್ನು, ಪಾತ್ರವರ್ಗದಲ್ಲಿ ಬಾಲಿವುಡ್​ನ ಖ್ಯಾತ ನಟರು ಕೂಡ ಇದ್ದಾರೆ.