ಬೆಂಗಳೂರು: ವಿಧಾನಸಭಾ ಚುನಾವಣೆಗೆ ಕ್ಷಣಗಣನೆ ಆರಂಭವಾಗಿದೆ. ಒಟ್ಟು ರಾಜ್ಯದಾದ್ಯಂತ 58,282 ಮತಗಟ್ಟೆಗಳನ್ನು ಸ್ಥಾಪಿಸಲಾಗಿದೆ. ದಿವ್ಯಾಂಗರಿಗಾಗಿ 100 ವಿಶೇಷ ಮತಗಟ್ಟೆಗಳನ್ನು ಸ್ಥಾಪಿಸಲಾಗಿದೆ. ಹಾಗೆಯೇ 29 ಸಾವಿರ ವೆಬ್‌ಕಾಸ್ಟ್ ಮತಗಟ್ಟೆಗಳನ್ನು ಸ್ಥಾಪಿಸಲಾಗಿದೆ. 12 ಸಾವವಿರ ಮತಗಟ್ಟೆಗಳನ್ನು ಸೂಕ್ಷ್ಮ ಮತಗಟ್ಟೆಗಳೆಂದು ಗುರುತಿಸಲಾಗಿದೆ.
Karnataka Assembly Election 2023 Live Updates: ಕೆಲವೇ ಕ್ಷಣಗಳಲ್ಲಿ ಮತದಾನ ಶುರು

Karnataka Assembly Election 2023 Live Updates:ಕರ್ನಾಟಕ ವಿಧಾನಸಭಾ ಕಣದಲ್ಲಿ ಒಟ್ಟು 2625 ಅಭ್ಯರ್ಥಿಗಳಿದ್ದು, 224 ಕ್ಷೇತ್ರಗಳಿಗೆ ಚುನಾವಣೆ ನಡೆಯುತ್ತಿದೆ. ಒಟ್ಟು 5.3 ಕೋಟಿ ಮಂದಿ ಮತದಾನಕ್ಕೆ ಅರ್ಹರಿದ್ದಾರೆ. ಒಟ್ಟಾರೆ ರಾಜ್ಯದಲ್ಲಿ 58545 ಮತಗಟ್ಟೆಗಳನ್ನು ಸ್ಥಾಪಿಸಿದ್ದು, 76,202 ವಿವಿಪ್ಯಾಟ್‌ಗಳನ್ನು ಬಳಸಲಾಗುತ್ತದೆ. 84,119 ಸಿಬ್ಬಂದಿ ನಿಯೋಜಿಸಿದ್ದು, ಮತಗಟ್ಟೆಗಳತ್ತ ಅಧಿಕಾರಿಗಳು ಈಗಾಗಲೇ ತೆರಳಿದ್ದಾರೆ.
ಚುನಾವಣೆಗೆ ಕ್ಷಣಗಣನೆ ಆರಂಭವಾಗಿದ್ದು, ನಿನ್ನೆ ಸಂಜೆಯೇ ಬಹಿರಂಗ ಪ್ರಚಾರಕ್ಕೆ ತೆರೆ ಬಿದ್ದಿದೆ, ಚುನಾವಣಾ ಆಯೋಗ ಮತದಾನಕ್ಕೆ ಸಕಲ ಸಿದ್ಧತೆ ಮಾಡಿಕೊಂಡಿದ್ದು, ಎಲ್ಲೆಡೆ ಭದ್ರತೆ ಹೆಚ್ಚಿಸಲಾಗಿದೆ. ವಿಶೇಷ ಮತಗಟ್ಟೆಗಳನ್ನು ಆರಂಭಿಸಿದ್ದು, ಕೆಲವು ಮತಗಟ್ಟೆಗಳು ವಿಶೇಷ ಥೀಮ್‌ನೊಂದಿಗೆ ಅಲಂಕೃತಗೊಂಡಿದೆ. ಮತದಾರ ಪ್ರಭು ತನ್ನ ಅಧಿಕಾರ ಚಲಾಯಿಸುವುದೊಂದೇ ಬಾಕಿ ಇದೆ. ಎಲ್ಲಾ ಜೈಲುಗಳನ್ನು ಎರಡೆರಡು ಬಾರಿ ಚೆಕ್ ಮಾಡಲಾಗಿದ್ದು, ಗಡಿ ಭಾಗದಲ್ಲಿ ಬಿಗಿ ಭದ್ರತೆ ಕೈಗೊಳ್ಳಲಾಗಿದೆ. ಬೆಂಗಳೂರಲ್ಲೂ ಮತಗಟ್ಟೆಗಳು ಮತದಾನಕ್ಕೆ ಸಜ್ಜಾಗಿ ನಿಂತಿವೆ.
Karnataka Assembly election: ಕೆಲವೇ ಕ್ಷಣಗಳಲ್ಲಿ ಮತದಾನ ಶುರು
ಮದುವಣಗಿತ್ತಿಯಂತೆ ಶೃಂಗಾರಗೊಂಡಿದೆ ಮತಗಟ್ಟೆ, ಸುಗಮ ಮತದಾನಕ್ಕೆ ಎಲ್ಲಾ ಸಿದ್ಧತೆ!
ರಾಣಿಬೆನ್ನೂರು ತಾಲೂಕು ಕೋಡಿಯಾಲ ಗ್ರಾಪಂ ಮತಗಟ್ಟೆಯನ್ನು ಅತ್ಯಂತ ಸುಂದರವಾಗಿ ಶೃಂಗರಿಸಲಾಗಿದೆ. ಇದೀಗ ಮತಗಟ್ಟೆ ಮದುವೆ ಮನೆಯಂತೆ ಕಂಗೊಳಿಸುತ್ತಿದೆ.

ಸಿಸಿಬಿ, ಫ್ಲೈಯಿಂಗ್ ಸ್ಕ್ವಾಡ್ ಕಾರ್ಯಾಚರಣೆ: ಅಕ್ರಮ ಹಣ ವಶ
ಸಿಸಿಬಿ, ಫ್ಲೈಯಿಂಗ್ ಸ್ಕ್ವಾಡ್ ಕಾರ್ಯಾಚರಣೆ ನಡೆಸಿದ್ದು, ಅಕ್ರಮವಾಗಿ ಸಂಗ್ರಹಿಸಿದ್ದ 1.90 ಕೋಟಿ ಸೀಜ್ ಮಾಡಲಾಗಿದೆ. ಬೆಂಗಳೂರಿನ ಅಕ್ಕಿಪೇಟೆಯಲ್ಲಿ ಕಾರ್ಯಾಚರಣೆ ನಡೆಸಿದ್ದು, ಪದ್ಮಶ್ರೀ ಫಾರ್ಮಾ ಕಚೇರಿಯಲ್ಲಿ ಹಣ ಸಂಗ್ರಹಿಸಲಾಗಿತ್ತು. ಜಂಟಿ ಆಯುಕ್ತ ಶರಣಪ್ಪ ತಂಡದಿಂದ ಕಾರ್ಯಾಚರಣೆ ನಡೆದಿದೆ. ಹಣವಶಕ್ಕೆ ಪಡೆದು ಆದಾಯ ತೆರಿಗೆ ಇಲಾಖೆಗೆ ಮಾಹಿತಿ ಕಳುಹಿಸಿದ್ದು, ಮತದಾರರಿಗೆ ಹಂಚಲು ಹಣ ಸಂಗ್ರಹಿಸಿರುವ ಅನುಮಾನವಿದೆ. ಹಣ ವಶಕ್ಕೆ ಪಡೆದು ಪೊಲೀಸರಿಂದ ತನಿಖೆ ನಡೆಸುತ್ತಿದ್ದಾರೆ. ಕಾಟನ್ಪೇಟೆ ಪೊಲೀಸ್ ಠಾಣೆಯಲ್ಲಿ ಕೇಸ್ ದಾಖಲಾಗಿದೆ.

Mysuru Assembly Constituencies: ಮೈಸೂರು ಕ್ಷೇತ್ರಗಳಲ್ಲಿ ಮತದಾನಕ್ಕೆ ಬರುವ ಹಿರಿಯರಿಗೆ ಬಸ್ ವ್ಯವಸ್ಥೆ
ಮೈಸೂರು ಜಿಲ್ಲೆಯ 11 ವಿಧಾನಸಭಾ ಕ್ಷೇತ್ರಗಳಿದ್ದು, ಮತದಾನಕ್ಕೆ ಬೇಕಾದ ಸಕಲ ಸಿದ್ದತೆಗಳನ್ನು ಮಾಡಲಾಗಿದೆ. ಡಾ. ಕೆ.ವಿ.ರಾಜೇಂದ್ರ ಜಿಲ್ಲಾ ಚುನಾವಣಾಧಿಕಾರಿಯಾಗಿದ್ದು ಪರಿಶೀಲನೆ ನಡೆಸಿದ್ದಾರೆ. 80 ವರ್ಷ ಮೇಲ್ಪಟ್ಟ ಹಿರಿಯ ನಾಗರಿಕರು ಹಾಗೂ ಅಂಗವಿಕಲ ವ್ಯಕ್ತಿಗಳಿಂದ ಮೈಸೂರು ಜಿಲ್ಲೆಯಲ್ಲಿ 2667 ಮತ ಚಾಲಾವಣೆಯಾಗಿದೆ. ಮತಗಟ್ಟೆಗಳಿಗೆ ವೀಲ್ ಚೇರ್ ಹಾಗೂ ಬೂತುಗನ್ನಡಿ ಸರಬರಾಜು ಮಾಡಲಾಗಿದೆ. ಅಂಗವಿಕಲರು ಮತ್ತು ಹಿರಿಯ ನಾಗರೀಕರಿಗೆ ಮತಗಟ್ಟೆಗೆ ಬರಲು ಅನುಕೂಲ ಆಗುವಂತೆ ವಾಹನ ಇರಲಿದೆ. ಮೇಲುಸ್ತುವಾರಿಗೆ ಹುಣಸೂರು ತಾಲ್ಲೂಕು ಪಂಚಾಯಿತಿಯ ಕಾರ್ಯನಿರ್ವಾಹಕ ಅಧಿಕಾರಿ ನೇಮಿಸಲಾಗಿದೆ.
ಸುದ್ದಿಗೆ ಇಲ್ಲಿ ಕ್ಲಿಕ್ಕಿಸಿ
ಹೊರ ರಾಜ್ಯಗಳಿಂದಲೂ ನಿಯೋಜಿತರಾಗಿದ್ದಾರೆ ಪೊಲೀಸರು
ನೆರೆ ರಾಜ್ಯಗಳಿಂದ ಕರ್ನಾಟಕ ವಿಧಾನಸಭಾ ಚುನಾವಣೆಗೆಂದು ನಿಯೋಜಿತರಾದ ಹೆಚ್ಚುವರಿ ಪೋಲಿಸ್ ಮತ್ತು ಹೋಮ್ ಗಾರ್ಡ್ ಗಳ ವಿವರ ಹೀಗಿದೆ.
ಕರ್ನಾಟಕ ಚುನಾವಣೆ ಕಣದಲ್ಲಿ ಎಷ್ಟು ಅಭ್ಯರ್ಥಿಗಳಿದ್ದಾರೆ?
ಕರ್ನಾಟಕ ವಿಧಾನಸಭಾ ಚುನಾವಣೆ 2023ರಲ್ಲಿ ಪಡೆದ ನಾಮಪತ್ರಗಳು ಹಾಗೂ ಒಟ್ಟು ಸ್ಪರ್ಧಿಸುತ್ತಿರುವ ಅಭ್ಯರ್ಥಿಗಳ ಅಂಕಿ ಅಂಶಗಳ ವಿವರ ಹೀಗಿದೆ.
ಕರ್ನಾಟಕ ಚುನಾವಣೆ ಕಣದಲ್ಲಿ ಎಷ್ಟು ಅಭ್ಯರ್ಥಿಗಳಿದ್ದಾರೆ?
ಕರ್ನಾಟಕ ವಿಧಾನಸಭಾ ಚುನಾವಣೆ 2023ರಲ್ಲಿ ಪಡೆದ ನಾಮಪತ್ರಗಳು ಹಾಗೂ ಒಟ್ಟು ಸ್ಪರ್ಧಿಸುತ್ತಿರುವ ಅಭ್ಯರ್ಥಿಗಳ ಅಂಕಿ ಅಂಶಗಳ ವಿವರ ಹೀಗಿದೆ.
ಚಾಮರಾಜನಗರ: ಕಾಂಗ್ರೆಸ್ ಅಭ್ಯರ್ಥಿ ಪುಟ್ಟರಂಗಶೆಟ್ಟಿ ವಿರುದ್ಧ FIR
ಚಾಮರಾಜನಗರ: ಬಿಎಸ್ಪಿ ಅಭ್ಯರ್ಥಿ ವಿರುದ್ಧ ಅಪಪ್ರಚಾರ ಆರೋಪ. ದಲಿತ ಸಂಘಟನೆ ಹೆಸರಲ್ಲಿ ಕರಪತ್ರ ಮುದ್ರಿಸಿ ಅಪಪ್ರಚಾರ. ಕಾಂಗ್ರೆಸ್ ಅಭ್ಯರ್ಥಿ ಪುಟ್ಟರಂಗಶೆಟ್ಟಿ ಸೇರಿ ನಾಲ್ವರ ವಿರುದ್ಧ ಎಫ್ಐಆರ್. ಮಾಜಿ ಸಂಸದ ಶಿವಣ್ಣ,ಕಾಂಗ್ರೆಸ್ ಮುಖಂಡರಾದ ಎಸ್ ನಂಜುಂಡಸ್ವಾಮಿ ಹಾಗೂ ಬಿಕೆ ರವಿಕುಮಾರ್ ವಿರುದ್ಧ ಎಫ್ಐಆರ್. ಬೇರೆ ಪಕ್ಷದಿಂದ ಹಣ ಪಡೆದಿದ್ದಾರೆಂದು ಅಪಪ್ರಚಾರ. ಬಿಎಸ್‌ಪಿ ಕಾರ್ಯಕರ್ತರನ್ನು ದಿಕ್ಕು ತಪ್ಪಿಸುವ ಯತ್ನ. ಸಾಮಾಜಿಕ ಜಾಲತಾಣಗಳಲ್ಲಿ ಕರಪತ್ರ ಮುದ್ರಿಸಿ ವೈರಲ್. ಬಿಎಸ್ಪಿ ಅಭ್ಯರ್ಥಿ ಹ.ರಾ.ಮಹೇಶ್ ರಿಂದ ದೂರು. ಚಾಮರಾಜನಗರ ಪಟ್ಟಣ ಠಾಣೆಯಲ್ಲಿ ಎಫ್ಐಆರ್.
ತಪ್ಪದೇ ಮತ ಹಾಕಲು ಸಿಎಂ ಬೊಮ್ಮಾಯಿ ಮನವಿ
ಕನ್ನಡ ನಾಡಿನ ಸಮಸ್ತ ಮತದಾರ ಬಂಧುಗಳೆ ಚುನಾವಣೆ ಎನ್ನುವುದು ಪ್ರಜಾಪ್ರಭುತ್ವದ ಹಬ್ಬವಾಗಿದ್ದು, ಈ ಹಬ್ಬದಲ್ಲಿ ಈ ನಾಡಿನ ಪ್ರಜೆಗಳಾದ ನಾವು, ನೀವೆಲ್ಲರೂ ಮತದಾನ ಮಾಡುವುದು ನಮ್ಮೆಲ್ಲರ ಕರ್ತವ್ಯ. ಸುರಕ್ಷಿತ, ಸುಭದ್ರ ಮತ್ತು ಸಶಕ್ತ ಕರ್ನಾಟಕ ನಿರ್ಮಾಣ ಮಾಡಲು ನೀವೆಲ್ಲರೂ ತಪ್ಪದೇ ನಿಮ್ಮ ಹಕ್ಕು ಚಲಾಯಿಸಬೇಕು. ದಯವಿಟ್ಟು ನಾಳೆ (ಮೇ 10 ರಂದು) ನಡೆಯುವ ಚುನಾವಣೆಯಲ್ಲಿ ಎಲ್ಲರೂ ತಪ್ಪದೇ ಮತದಾನ ಮಾಡಿ ಎಂದು ಎಲ್ಲ ಮತದಾರರಲ್ಲಿ ಮುಖ್ಯಮಂತ್ರಿ ಬೊಮ್ಮಾಯಿ ಮನವಿ ಮಾಡಿಕೊಂಡಿದ್ದಾರೆ.
Chitradurga: ಮತದಾನ ಹೆಚ್ಚಿಸಲು ವಿಭಿನ್ನ ಪ್ರಯತ್ನ
ಚಿತ್ರದುರ್ಗ: ಚಿತ್ರದುರ್ಗದಲ್ಲಿ ಮತಗಟ್ಟೆಗೆ ಮತದಾರರ ಸೆಳೆಯಲು ಚಿತ್ರದುರ್ಗ ಜಿಲ್ಲಾಡಳಿತ, ಸ್ವೀಪ್ ಸಮಿತಿಯಿಂದ ವಿಭಿನ್ನ ಪ್ರಯತ್ನ ಮಾಡಲಾಯ್ತು. ಮತದಾನ ಹೆಚ್ಚಿಸಲು ವಿಶೇಷ ಚೇತನ ಮತದಾನ ಕೇಂದ್ರ, ಯುವ ಮತದಾನ ಕೇಂದ್ರಗಳನ್ನು ನಿರ್ಮಿಸಲಾಗಿದೆ. ಮತಗಟ್ಟೆಗೆ ಏಳು ಸುತ್ತಿನ ಕೋಟೆ ಮಾದರಿಯ ಮೆರಗು ನೀಡಲಾಗಿದೆ. ಇದರ ಜೊತೆಗೆ ಪಿಂಕ್ ಮತಗಟ್ಟೆ, ಮಾದರಿ ಮತಗಟ್ಟೆಗಳ ನಿರ್ಮಾಣ ಮಾಡಲಾಗಿದ್ದು, ವಿಶೇಷ ಮತಗಟ್ಟೆಗಳಿಗೆ ಜಿ.ಪಂ ಸಿಇಓ ಎಂ.ಎಸ್.ದಿವಾಕರ್ ಭೇಟಿ ನೀಡಿ ಪರಿಶೀಲನೆ ನಡೆಸಿದರು.
Karnataka elections 2023: ರಾಜಕೀಯ ಪಕ್ಷಗಳು ಮತದಾರರನ್ನು ವಾಹನಗಳಲ್ಲಿ ಕರೆತರುವಂತಿಲ್ಲ: ಇಲ್ಲಿದೆ ಕಾರಣ
Kolar: 101 ನೀತಿ ಸಂಹಿತೆ ಉಲ್ಲಂಘನೆ ಕೇಸ್ ದಾಖಲು.
ಕೋಲಾರ : ಚುನಾವಣೆ ತಯಾರಿ ಕುರಿತು, ಕೋಲಾರದಲ್ಲಿ ಎಸ್ಪಿ ನಾರಾಯಣ ಹೇಳಿಕೆ. 101 ನೀತಿ ಸಂಹಿತ ಉಲ್ಲಂಘನೆ ಕೇಸ್ ದಾಖಲು. ಸಂಚಾರ ನಿಯಮ ಉಲ್ಲಂಘನೆ ಸಂಬಂಧ 3624 ಪ್ರಕರಣ ದಾಖಲು,18 ಲಕ್ಷಕ್ಕೂ ಹೆಚ್ಚು ದಂಡ ವಸೂಲಿ. 115 ರೌಡಿ ಶೀಟರ್ ಮನೆಗಳ ಪರಿಶೀಲನೆ ಆಗಿದೆ. 144 ಸೆಕ್ಷನ್ ಜಾರಿ ಇದೆ,6 ಕ್ಕಿಂತ ಹೆಚ್ಚು ಜನರು ಪ್ರಚಾರ ಮಾಡಬಾರದು. ಶಾಂತಿಯುತ ಮತದಾನಕ್ಕಾಗಿ 1 ಎಸ್ಸಿ,1 ಎಎಸ್ಪಿ, 5 ಡಿವೈಎಸ್ಪಿ ಸೇರಿದಂತೆ ಒಟ್ಟು 1626 ಪೊಲೀಸ್ ಅಧಿಕಾರಿಗಳು ಬಳಕೆ. 101 ಸಶಸ್ತ್ರ ಮೀಸಲು ಪಡೆ ಸಿಬ್ಬಂದಿ, ಗಡಿ ಪ್ರದೇಶದಲ್ಲಿ 21 ತಪಾಸಣಾ ಕೇಂದ್ರ,30 ಫ್ಲ್ಯಯಿಂಗ್ ಸ್ಕ್ವಾಡ್ ಬಳಕೆ. ಬಿಎಸ್ಎಫ್ ಹಾಗೂ 4 KSRP ತುಕಡಿ ಬಳಕೆ. ಪೊಲೀಸ್ ಇಲಾಖೆಯ ಸಿಬ್ಬಂದಿಗಳಿಂದ ಶೇ.90 ರಷ್ಟು ಅಂಚೆ ಮತದಾನವಾಗಿದೆ.
ಒಂದು ಲಿಂಕ್ ಕ್ಲಿಕ್ ಮಾಡಿ: ಮತದಾರರ ಪಟ್ಟಿಯಲ್ಲಿ ಹೆಸರು ಹುಡುಕಿ, ಮತಗಟ್ಟೆಗೆ ಹೋಗಿ..!
ಮತಗಟ್ಟೆ ಯಾವುದು, ಅಲ್ಲಿ ಯಾವ ಬೂತ್ ಅಂತ ಅಲ್ಲಿಗೆ ಹೋಗಿ ಟೈಮ್ ವೇಸ್ಟ್ ಮಾಡೋ ಮೊದಲು ವೆಬ್‌ಸೈಟಿನಲ್ಲಿಯೇ ಚೆಕ್ ಮಾಡಿಕೊಂಡರೆ ಹೋದರೆ ಬೆಸ್ಟ್. ಅದಕ್ಕೇನು ಮಾಡಬೇಕು? ಚೆಕ್ ಮಾಡಿಕೊಳ್ಳೋದು ಹೀಗೆ?
ಇಲ್ಲಿ ಕ್ಲಿಕ್ ಮಾಡಿ
ಜಯನಗರ ಬಿಜೆಪಿ ಅಭ್ಯರ್ಥಿ ವಿರುದ್ಧ ಚುನಾವಣಾ ಆಯೋಗಕ್ಕೆ ತಂದೆ ಮಗಳ ದೂರು
ಜಯನಗರ ಕ್ಷೇತ್ರದಲ್ಲಿ ಹಲವಾರು ಮತಗಟ್ಟೆಗಳಲ್ಲಿ ಬಿಜೆಪಿ ಅಭ್ಯರ್ಥಿ ರಾಮಮೂರ್ತಿ ಹಾಗೂ ಬೆಂಬಲಿಗರು ಭಯದ ವಾತವರಣವನ್ನು ಉಂಟುಮಾಡುತ್ತಿದ್ದಾರೆ ಎಂದು ರಾಮಲಿಂಗ ರೆಡ್ಡಿ ಹಾಗೂ ಸೌಮ್ಯ ರೆಡ್ಡಿಯಿಂದ ದೂರು ಸಲ್ಲಿಕೆ
ಮತದಾನಕ್ಕೆ ಮಳೆ ಅಡ್ಡಿ ಸಾಧ್ಯತೆ!
ಮೋಚಾ ಚಂಡಮಾರುತ ಪ್ರಬಲವಾಗಿರುವ ಕಾರಣ, ಮೇ.10 ರಂದು ಮತದಾನಕ್ಕೆ ಮಳೆ ಅಡ್ಡಿಪಡಿಸುವ ಸಾಧ್ಯತೆ ಇದೆ. ಮಂಗಳವಾರ ಉತ್ತರಕನ್ನಡ, ಹುಬ್ಬಳ್ಳಿ, ಉಡುಪಿ ಸೇರಿದಂತೆ ಹಲವು ಜಿಲ್ಲೆಗಳಲ್ಲಿ ಮಳೆಯಾಗಿದೆ. ನಾಳೆ ಮಧ್ಯಾಹ್ನದ ವೇಳೆ ಭಾರೀ ಮಳೆಯಾಗುವ ಸೂಚನೆ ಕೂಡ ಹವಮಾನ ಇಲಾಖೆ ನೀಡಿದೆ.

ಪರೋಕ್ಷವಾಗಿ ಬಿಜೆಪಿಗೆ ಟಾಂಗ್ ನೀಡಿದ ಕೆಂಪಣ್ಣ
ಚುನಾವಣೆ ಹಿನ್ನಲೆಯಲ್ಲಿ ಕರ್ನಾಟಕ ಸ್ಟೇಟ್ ಕಂಟ್ರಾಕ್ಟರ್ ಅಸೋಸಿಯೇಷನ್ ಅಧ್ಯಕ್ಷ ಡಿ. ಕೆಂಪಣ್ಣ ಮನವಿ,. ರಾಜ್ಯದಲ್ಲಿ ಭ್ರಷ್ಟಾಚಾರಕ್ಕೆ ಜನಸಾಮಾನ್ಯರು ನಲುಗಿ ಹೋಗಿದ್ದಾರೆ. ಸಾರ್ವಜನಿಕ ಕಾಮಗಾರಿಯಲ್ಲಿ ತಲೆ ಎತ್ತಿರುವ 40% ಕಮಿಷನ್ ಭ್ರಷ್ಟಾಚಾರ . ಹಲವು ಗುತ್ತಿಗೆದಾರರನ್ನು ಬಲಿ ತೆಗೆದುಕೊಂಡಿದೆ. ಹಾನಿಕರ ಮತ್ತು ಅಪಾಯಕಾರಿ ಕಾಮಗಾರಿಗೆ ಸಾರ್ವಜನಿಕರು ಶರಣಾಗುವಂತೆ ಮಾಡಿದೆ. ಪ್ರಜಾತಂತ್ರ ವ್ಯವಸ್ಥೆಯಲ್ಲಿ ಮತದಾನವು ಪವಿತ್ರವಾದುದು.ಮತದಾರರು ತಮ್ಮ ಆತ್ಮಸಾಕ್ಷಿಯ ಅನುಸಾರ ಮತದಾನ ಮಾಡುವರೆಂಬ ವಿಶ್ವಾಸವಿದೆ ಎಂದು ಕೆಂಪಣ್ಣ ಹೇಳಿಕೆ ಬಿಡುಗಡೆ. ಬಿಜೆಪಿ ಸರ್ಕಾರದ ವಿರುದ್ಧ 40% ಕಮಿಷನ್ ಆರೋಪ ಮಾಡಿದ್ದ ಕೆಂಪಣ್ಣ . ರೋಕ್ಷವಾಗಿ ಬಿಜೆಪಿಯವರಿಗೆ ಟಾಂಗ್ ನೀಡಿರುವ ಕೆಂಪಣ್ಣ ಪತ್ರ..
Davanagere: ಏಳು ಕಡೆ ಮಸ್ಟರಿಂಗ್ ಕಾರ್ಯ
ದಾವಣಗೆರೆಯ ಏಳು ಕಡೇ ಮಸ್ಟರಿಂಗ್ ಕಾರ್ಯ ಆರಂಭಗೊಂಡಿದೆ. ಏಳು ವಿಧಾನಸಭಾ ಕ್ಷೇತ್ರಗಳಿಗೆ ಮತದಾನಕ್ಕೆ ಅಂತಿಮ ಹಂತದ ಸಿದ್ದತೆ ನಡೆಯುತ್ತಿದ್ದು, 1685 ಮತದಾನ ಕೇಂದ್ರಗಳ ಸ್ಥಾಪಿಸಲಾಗಿದೆ. 338 ಸೂಕ್ಷ್ಮ, ಅತೀ ಸೂಕ್ಷ್ಮ ಮತಗಟ್ಟೆಗಳು, 1347 ಸಾಮಾನ್ಯ ಮತಗಟ್ಟೆಗಳು, ಜಿಲ್ಲೆಯಲ್ಲಿ 1442553 ಮತದಾರರ ನೋಂದಣಿ, 721964 ಪುರುಷರು, 720004 ಮಹಿಳಾ ಮತದಾರರು, ಮತದಾನಕ್ಕೆ ಕಾತುರದಿಂದ ಕಾಯುತ್ತಿರುವ 35454 ಹೊಸ ಮತದಾರರು, ಮತಗಟ್ಟೆಗೆ 298 ಮೈಕ್ರೋ ಅಬ್ಸರ್ವರ್, 2026 ಮತಗಟ್ಟೆ ಅಧಿಕಾರಿಗಳು, 4052ಸಿಬ್ಬಂದಿ ನೇಮಕಗೊಂಡಿದ್ದಾರೆ. ಒಟ್ಟು 8104 ಸಿಬ್ಬಂದಿಗಳ ನಿಯೋಜನೆ ಮಾಡಲಾಗಿದೆ. ವಿಶೇಷ ಚೇತನ ಮತದಾರರಿಗೆ ಸಹಾಯಕರ ನೇಮಕ. 23 ರೌಡಿಶೀಟರ್ ಗಡಿಪಾರು, ಗುಂಡಾ ಕಾಯ್ದೆ ಓರ್ವನ ಬಂಧನ. ಶೇ.85 ಮತದಾನ ಗುರಿ ಹೊಂದಿರುವ ಜಿಲ್ಲಾಡಳಿತ.
ಕಡಿಮೆಯಾದ ಬಸ್, ಊರಿಗೆ ಹೋಗಲು ಪರದಾಟ
ಚುನಾವಣೆ ಕೆಲಸಕ್ಕೆ ಹೆಚ್ಚುವರಿ KSRTC ಬಸ್ ನಿಯೋಜನೆ ಹಿನ್ನೆಲೆಯಲ್ಲಿ ಊರುಗಳಿಗೆ ತೆರಳುವ ಪ್ರಯಾಣಿಕರಿಗೆ KSRTC ಬಸ್ ಸಮಸ್ಯೆ. ಬಸ್ ಸಮಸ್ಯೆ ಆಗಿರುವ ರೂಟ್‌ಗಳಿಗೆ ಬಿಎಂಟಿಸಿ ಬಸ್. ಇಂದು ಮಧ್ಯಾಹ್ನದಿಂದಲೇ ಬಿಎಂಟಿಸಿ ಓಡಿಸಲು ನಿರ್ಧರಿಸಿರುವ KSRTC ಸಂಸ್ಥೆ. ಸ್ಥಳದಲ್ಲಿ KSRTC ಅಧಿಕಾರಿಗಳು ಉಪಸ್ಥಿತಿ. ಮೆಜೆಸ್ಟಿಕ್ ಬಸ್ ನಿಲ್ದಾಣದಿಂದ ಹೊರಡಲಿರುವ ಬಿಎಂಟಿಸಿ. ಬಸ್ ಗಳು
ಮದ್ಯ ಸೇವಿಸಿದ ಮತಗಟ್ಟೆ ಅಧಿಕಾರಿಗಳ ವಿರುದ್ಧ ಕ್ರಮ?
ಮದ್ಯಪಾನ ಮಾಡಿದ ಕರ್ತವ್ಯನಿರತ ಮತಗಟ್ಟೆ ಅಧಿಕಾರಿಗಳು. ಮದ್ಯಪಾನ ಮಾಡಿದವರನ್ನು ಪತ್ತೆ ಹಚ್ಚಿದ ಚುನಾವಣಾಧಿಕಾರಿ. ಮಧ್ಯಪಾನ ಮಾಡಿದ ಹಿನ್ನೆಲೆ ಮೆಗ್ಗಾನ್ ಆಸ್ಪತ್ರೆಗೆ ಪರೀಕ್ಷೆಗೆ ಕಳುಹಿಸಿದ ಚುನಾವಣಾ ಅಧಿಕಾರಿಗಳು. ಆ್ಯಂಬುಲೆನ್ಸ್ ಮೂಲಕ ಮೆಗ್ಗಾನ್ ಆಸ್ಪತ್ರೆಗೆ ಕಳುಹಿಸಿದ ಚುನಾವಣಾಧಿಕಾರಿ. ರಮೇಶ್ ಮತ್ತು ಮಾಲತೇಶ್ ಎಂ ಬಿ ಇಬ್ಬರು ಅಧಿಕಾರಿಗಳು ಮಧ್ಯಪಾನ ಮಾಡಿ ಚುನಾವಣಾ ಕರ್ತವ್ಯಕ್ಕೆ ಹಾಜರಾಗಿದ್ದರು. ಜೊತೆಗೆ ತಮ್ಮ ಬ್ಯಾಗಿನಲ್ಲಿ ಮದ್ಯದ ಸ್ಯಾಚೆಟ್ಸ್ ಕೂಡ ತಂದಿದ್ದರು. ಈ ಹಿನ್ನೆಲೆಯಲ್ಲಿ ಇಬ್ಬರೂ ಅಧಿಕಾರಿಗಳನ್ನು ಮೆಡಿಕಲ್ ಟೆಸ್ಟಿಗಾಗಿ ಮೆಗ್ಗಾನ್ ಆಸ್ಪತ್ರೆಗೆ ಕಳುಹಿಸಿದ ಚುನಾವಣಾಧಿಕಾರಿ. ವೈದ್ಯಕೀಯ ಪರೀಕ್ಷೆಯ ವರದಿ ಬಂದ ಬಳಿಕ ಇಬ್ಬರು ಅಧಿಕಾರಿಗಳ ವಿರುದ್ಧ ಶಿಸ್ತು ಕ್ರಮ.
ಮತದಾರರಿಗೆ ಶಾಕ್ ಕೊಟ್ಟ ಬಿಬಿಎಂಪಿ: ಹೋಟೆಲ್‌ಗಳಲ್ಲಿ ಉಚಿತ ಊಟ, ತಿಂಡಿ ವಿತರಣೆಗೆ ನಿಷೇಧ!
ಕರ್ನಾಟಕ ವಿಧಾನಸಭಾ ಚುನಾವಣೆ ವೇಳೆ ಬೆಂಗಳೂರು ಸೇರಿದಂತೆ ರಾಜ್ಯಾದ್ಯಂತ ಮತದಾನ ಪ್ರಮಾಣ ಹೆಚ್ಚಿಸುವ ಉದ್ದೇಶದಿಂದ ಮತದಾನ ಮಾಡಿ ಬಂದವರಿಗೆ ಉಚಿತ ಊಟ, ತಿಂಡಿ ಕೊಡುವುದಾಗಿ ಕೆಲವು ಹೋಟೆಲ್‌ಗಳು ಘೋಷಣೆ ಮಾಡಿಕೊಂಡಿದ್ದರು. ಆದರೆ, ಯಾವುದೇ ಹೋಟೆಲ್‌ಗಳಲ್ಲಿ ಉಚಿತ ಊಟ ಅಥವಾ ತಿಂಡಿ ನೀಡುವಂತಿಲ್ಲ ಎಂದು ಬೃಹತ್ ಬೆಂಗಳುರು ಮಹಾನಗರ ಪಾಲಿಕೆ (ಬಿಬಿಎಂಪಿ) ಆಯುಕ್ತರು ಆದೇಶ ಹೊರಡಿಸಿದ್ದಾರೆ.
ಫ್ರೀ ತಿಂಡಿ ಸಿಗುತ್ತೆ ಎಂಬ ಖುಷಿಯಲ್ಲಿದ್ದ ಮತದಾರರಿಗೆ ಶಾಕ್
ಕರ್ನಾಟಕ - ಮಹಾರಾಷ್ಟ್ರ - ಗೋವಾ ಗಡಿಭಾಗದಲ್ಲಿ ಹದ್ದಿನ ಕಣ್ಣು
ಬೆಳಗಾವಿ: ನಾಳೆ ರಾಜ್ಯ ವಿಧಾನಸಭಾ ಚುನಾವಣೆಗೆ ಮತದಾನ ಹಿನ್ನೆಲೆಯಲ್ಲಿ ಕರ್ನಾಟಕ - ಮಹಾರಾಷ್ಟ್ರ - ಗೋವಾ ಗಡಿಭಾಗದಲ್ಲಿ ಹದ್ದಿನ ಕಣ್ಣಿಡಲಾಗಿದೆ. ಮಹಾರಾಷ್ಟ್ರ, ಗೋವಾ ಜೊತೆ ಗಡಿ ಹಂಚಿಕೊಂಡ ಬೆಳಗಾವಿ ಜಿಲ್ಲೆಯಲ್ಲಿ ಹೈ ಅಲರ್ಟ್. ಬೆಳಗಾವಿ ಜಿಲ್ಲೆಯ ಗಡಿಭಾಗದ ಚೆಕ್‌ಪೋಸ್ಟ್‌ಗಳಲ್ಲಿ ತೀವ್ರ ತಪಾಸಣೆ. ಮಹಾರಾಷ್ಟ್ರ, ಗೋವಾದಿಂದ ಆಗಮಿಸುವ ಪ್ರತಿಯೊಂದು ವಾಹನಗಳ ತಪಾಸಣೆ. ಬೆಳಗಾವಿ ಜಿಲ್ಲೆಯಲ್ಲಿ ಒಟ್ಟಾರೆ 58 ಚೆಕ್‌ಪೋಸ್ಟ್‌ಗಳ ಸ್ಥಾಪಿಸಿದ್ದು, 24 ಅಂತರ್‌ರಾಜ್ಯ ಚೆಕ್‌ಪೋಸ್ಟ್, 22 ಅಂತರ್‌ಜಿಲ್ಲಾ ಚೆಕ್‌ಪೋಸ್ಟ್, ಜಿಲ್ಲೆಯೊಳಗೆ 12 ಚೆಕ್‌ಪೋಸ್ಟ್‌ಗಳ ಸ್ಥಾಪನೆಯಾಗಿದೆ. ಕೊನೆ ಗಳಿಗೆಯಲ್ಲಿ ನಡೆಯಬಹುದಾದ ಅಕ್ರಮ ತಡೆಗಟ್ಟಲು ಜಂಟಿ ಚೆಕ್‌ಪೋಸ್ಟ್ ಸ್ಥಾಪನೆ. ಬೆಳಗಾವಿ ತಾಲೂಕಿನ ಬಾಚಿ ಚೆಕ್‌ಪೋಸ್ಟ್‌ನಲ್ಲಿ ತೀವ್ರ ತಪಾಸಣೆ ನಡೆಸುತ್ತಿದ್ದು, ಪ್ರತಿ ಚೆಕ್‌ಪೋಸ್ಟ್‌ನಲ್ಲಿ ಸಶಸ್ತ್ರ ಸೀಮಾ ಬಲ್, ಪೊಲೀಸ್, ಕಂದಾಯ ಇಲಾಖೆ, ಅಬಕಾರಿ ಸಿಬ್ಬಂದಿ ನಿಯೋಜಿಸಲಾಗಿದೆ. ಕರ್ನಾಟಕ ಮಹಾರಾಷ್ಟ್ರ ಗಡಿಯ ಕೊಗನೊಳ್ಳಿ, ಕಾಗವಾಡ ಹಾಗೂ ಕರ್ನಾಟಕ ಗೋವಾ ಗಡಿಯ ಕಣಕುಂಬಿಯಲ್ಲಿ ಜಂಟಿ ಚೆಕ್‌ಪೋಸ್ಟ್ ಸ್ಥಾಪಿಸಲಾಗಿದೆ.