ಸಾಮಾಜಿಕ ಜಾಲತಾಣ ಫೇಸ್ ಬುಕ್ ನಲ್ಲಿ ಪರಿಚಯವಾಗಿದ್ದ ಯುವತಿಯನ್ನು ವಿವಾಹವಾಗಲು ಅನುಮತಿ ನೀಡದ ಪೋಷಕರನ್ನು ಯುವಕನೋರ್ವ ಹತ್ಯೆ ಮಾಡಿರುವ ಘಟನೆ ದೆಹಲಿಯಲ್ಲಿ ನಡೆದಿದೆ. ಅಬ್ದುಲ್ ರೆಹಮಾನ್ ಎಂಬ 26 ವರ್ಷದ ಯುವಕ ಪ್ರೇಯಸಿಗಾಗಿ ತನ್ನ ಪೋಷಕರನ್ನು ಹತ್ಯೆ ಮಾಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ದೆಹಲಿ (ಮೇ.23): ಸಾಮಾಜಿಕ ಜಾಲತಾಣ ಫೇಸ್ ಬುಕ್ ನಲ್ಲಿ ಪರಿಚಯವಾಗಿದ್ದ ಯುವತಿಯನ್ನು ವಿವಾಹವಾಗಲು ಅನುಮತಿ ನೀಡದ ಪೋಷಕರನ್ನು ಯುವಕನೋರ್ವ ಹತ್ಯೆ ಮಾಡಿರುವ ಘಟನೆ ದೆಹಲಿಯಲ್ಲಿ ನಡೆದಿದೆ.
ಅಬ್ದುಲ್ ರೆಹಮಾನ್ ಎಂಬ 26 ವರ್ಷದ ಯುವಕ ಪ್ರೇಯಸಿಗಾಗಿ ತನ್ನ ಪೋಷಕರನ್ನು ಹತ್ಯೆ ಮಾಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ಅಲ್ಲದೇ ಪೋಷಕರ ಸುಪರ್ದಿಯಲ್ಲಿದ್ದ ಆಸ್ತಿಯನ್ನು ಪಡೆಯಲು ಹತ್ಯೆ ಮಾಡಿರುವುದಾಗಿ ರೆಹಮಾನ್ ವಿಚಾರಣೆ ವೇಳೆ ಬಾಯ್ಬಿಟ್ಟಿದ್ದಾನೆ ಎಂದು ಹೇಳಲಾಗಿದೆ.
ಆರೋಪಿ ರೆಹಮಾನ್ ಗೆ ಈ ಮೊದಲೇ ವಿವಾಹವಾಗಿದ್ದು, ವಿಚ್ಛೇದನ ಪಡೆದಿದ್ದಾನೆ. ಈ ನಡುವೆ 2017 ರಲ್ಲಿ ಪೋಷಕರ ಇಚ್ಛೆಯಂತೆ ಮತ್ತೊಬ್ಬ ಮಹಿಳೆಯನ್ನು ವಿವಾಹವಾಗಿದ್ದಾನೆ. ಆದರೆ ನಂತರ ಫೇಸ್ ಬುಕ್ ಗೆಳತಿ ಕುರಿತು ಪೋಷಕರಿಗೆ ಮಾಹಿತಿ ನೀಡಿದ್ದಾನೆ. ಆದರೆ ಆಕೆ ಜೊತೆ ವಿವಾಹಕ್ಕೆ ಪೋಷಕರು ಒಪ್ಪದಿದ್ದಾಗ ಅವರ ಹತ್ಯೆ ಮಾಡಿದ್ದಾನೆ ಎನ್ನಲಾಗಿದೆ.
