ವಿಜಯಪುರ(ಡಿ.27): ಹಾಡ ಹಗಲೇ ಯುವಕನೊಬ್ಬನನ್ನು ಚಾಕುವಿನಿಂದ ಇರಿದು ಬರ್ಬರವಾಗಿ ಹತ್ಯೆ ಮಾಡಿದ ಘಟನೆ ವಿಜಯಪುರ ತಾಲೂಕಿನ ಖತಿಜಾಪುರ ಗ್ರಾಮದಲ್ಲಿ ಶನಿವಾರ ನಡೆದಿದೆ.

ಖತಿಜಾಪುರದ ಇಸ್ಮಾಯಿಲ್‌ ಮುಲ್ಲಾ (22) ಮೃತ ಯುವಕ. ಖಾಜಲ್‌ ಬೇಪಾರಿ ಕೊಲೆ ಆರೋಪಿ. ಇಸ್ಮಾಯಿಲ್‌ ಮುಲ್ಲಾ ಈತನ ತಾಯಿಗೆ ಚಿಕನ್‌ ಅಂಗಡಿಯ ಆರೋಪಿ ಖಾಜಲ್‌ ಬೇಪಾರಿ ಅವಾಚ್ಯ ಶಬ್ದದಿಂದ ನಿಂದಿಸಿದ್ದ. ಇದನ್ನು ಇಸ್ಮಾಯಿಲ್‌ ಪ್ರಶ್ನಿಸಿದ್ದಕ್ಕೆ ಖಾಜಲ್‌ ಚಿಕನ್‌ ಕತ್ತರಿಸುವ ಚಾಕುವಿನಿಂದ ಎದೆಯ ಭಾಗಕ್ಕೆ ಇರಿದು ಕೊಲೆ ಮಾಡಿದ್ದಾನೆ.

ಫ್ರೈಡ್‌ರೈಸ್‌ ತಿನ್ನು ಎಂದಿದ್ದಕ್ಕೆ ಸ್ನೇಹಿತನ್ನೇ ಇರಿದು ಕೊಂದ..!

ಸ್ಥಳಕ್ಕೆ ವಿಜಯಪುರ ಗ್ರಾಮೀಣ ಪೊಲೀಸ್‌ ಠಾಣೆ ಪಿಎಸ್‌ಐ ಆನಂದ ಠಕ್ಕಣವರ ಹಾಗೂ ಸಿಬ್ಬಂದಿ ಭೇಟಿ ನೀಡಿ, ಪರಿಶೀಲಿಸಿದ್ದಾರೆ. ಈ ಕುರಿತು ವಿಜಯಪುರ ಗ್ರಾಮೀಣ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.