ಬೆಂಗಳೂರು(ಮಾ.21): ಪಬ್‌ನಲ್ಲಿ ಇಬ್ಬರು ಬಾಣಸಿಗರ ನಡುವೆ ಜಗಳ ನಡೆದು ಕೊಲೆಯಲ್ಲಿ ಅಂತ್ಯವಾಗಿರುವ ಘಟನೆ ಜೆ.ಪಿ.ನಗರ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಪಶ್ಚಿಮ ಬಂಗಾಳ ಮೂಲದ (25) ಕೊಲೆಯಾದ ಯುವಕ. ಆರೋಪಿ ತ್ರಿಪುರ ಮೂಲದ ಮೌಶಿಕ್‌ ಎಂಬಾತ ತಲೆಮರೆಸಿಕೊಂಡಿದ್ದು, ಆತನ ಬಂಧನಕ್ಕೆ ಬಲೆ ಬೀಸಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ.

ಕಳೆದ ಆರೇಳು ವರ್ಷಗಳಿಂದ ನಗರಕ್ಕೆ ಬಂದಿರುವ ಆರೋಪಿಗಳು ಸಣ್ಣಪುಟ್ಟ ಕೆಲಸ ಮಾಡಿಕೊಂಡಿದ್ದರು. ಕಳೆದ ಏಳು ತಿಂಗಳಿಂದ ಇಬ್ಬರು ಜೆ.ಪಿ.ನಗರದ ಹೊರ ವರ್ತುಲ ರಸ್ತೆಯಲ್ಲಿರುವ ‘ವಾಲ್‌ಸ್ಟ್ರೀಟ್‌’ ಪಬ್‌ವೊಂದರಲ್ಲಿ ಬಾಣಸಿಗರಾಗಿ ಕೆಲಸಕ್ಕಿದ್ದರು.

ಕೋಲಾರ; ತಾಯಿಯನ್ನು ಮನೆಯಿಂದ ಹೊರಹಾಕಿದ್ದಕ್ಕೆ ತಂದೆಯನ್ನೇ ಕೊಂದ ಮಗ

ಅಡುಗೆ ಮಾಡುವ ವಿಚಾರಕ್ಕೆ ಇಬ್ಬರ ನಡುವೆ ಶನಿವಾರ ರಾತ್ರಿ ಪಬ್‌ನಲ್ಲಿ ಜಗಳ ನಡೆದಿದೆ. ಸಾಗರ್‌, ಮೌಶಿಕ್‌ ಅಡುಗೆ ಬಗ್ಗೆ ಕೆಟ್ಟದಾಗಿ ನಿಂದಿಸಿದ್ದ. ಈ ವಿಚಾರವಾಗಿ ಜಗಳ ನಡೆದಿದ್ದು, ಮೌಶಿಕ್‌ ಅಲ್ಲಿಯೇ ಚಾಕುವಿನಿಂದ ಸಾಗರ್‌ನ ಎದೆ ಹಾಗೂ ಹೊಟ್ಟೆಭಾಗಕ್ಕೆ ಇರಿದಿದ್ದಾನೆ. ತೀವ್ರವಾಗಿ ಗಾಯಗೊಂಡ ಗಾಯಾಳುವನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆ ಫಲಿಸದೆ ಸಾಗರ್‌ ಮೃತಪಟ್ಟಿದ್ದಾನೆ. ಆರೋಪಿ ತಲೆಮರೆಸಿಕೊಂಡಿದ್ದು, ಆತನ ಬಂಧನಕ್ಕೆ ಬಲೆ ಬೀಸಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದರು.