ಕೋಲಾರ(ಮಾ.  18)  ತಾಯಿಯನ್ನು ಮನೆಯಿಂದ ಓಡಿಸಿದಕ್ಕೆ ತಂದೆಯನ್ನು ಮಗನೇ ಹತ್ಯೆ ಮಾಡಿದ್ದಾನೆ. ತಂದೆಯ ಕತ್ತು ಸೀಳಿ ಮಗ ಕೊಲೆ ಮಾಡಿದ್ದಾನೆ.  ಕೋಲಾರ ಜಿಲ್ಲೆ ಕೆಜಿಎಫ್ ತಾಲೂಕಿನ ಪಾರಾಂಡಹಳ್ಳಿ ಬಳಿ ಘಟನೆ ನಡೆದಿದೆ.

ಕೆಜಿಎಫ್ ನ ಎಸ್ಟಿ ಬ್ಲಾಕ್ ನಿವಾಸಿ ಪ್ರಭುರಾಜ್(50) ಮೃತ ವ್ಯಕ್ತಿ. ಕಾರ್ತಿಕ್ (29) ಕೊಲೆ ಮಾಡಿರುವ ಆರೋಪಿ. ಕುಡಿದು ಬಂದು ತಾಯಿ ಲಕ್ಷೀಯ ಮೇಲೆ ಹಲ್ಲೆ ಮಾಡಿದ್ದ ಪ್ರಭುರಾಜ್ ದರ್ಪ ತೋರಿದ್ದ.

ಸೊಸೆಯೊಂದಿಗೆ ಪಕ್ಕದ ಮನೆಯವನ ಸಂಬಂಧ.. ಕೊಲೆಯಲ್ಲಿ ಅಂತ್ಯ

ತಂದೆಯನ್ನು ಬೈಕ್ನಲ್ಲಿ ಕೂರಿಸಿಕೊಂಡು ಹೋಗಿ ಪಾರಾಂಡಹಳ್ಳಿ ಕೆರೆ ಬಳಿ ಮಗ ಹತ್ಯೆ ಮಾಡಿದ್ದಾನೆ. ಕೊಲೆಗೆ ಸಹಕರಿಸಿದ್ದ ಸ್ನೇಹಿತ ಸೂರ್ಯ ನಾಪತ್ತೆಯಾಗಿದ್ದು ಕಾರ್ತಿಕ್ ನನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.